ಮೇ 14 – 19 : ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ ಮಹಾ ರುದ್ರ ಯಾಗ
ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಆಯೋಜನೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಯಾಗ
(Kodavooru) ಕೊಡವೂರು: ಕೊಡವೂರುಮಹತೋಭಾರ ಶ್ರೀ ಶಂಕರನಾರಾಯಣ ದೇಗುಲದಲ್ಲಿ ಮೇ 14 ರಿಂದ ಮೇ 19 ರವರೆಗೆ ಅಪರೂಪದಲ್ಲಿ ಅಪರೂಪದ ಮಹಾ ರುದ್ರಯಾಗ ಸಂಪನ್ನಗೊಳ್ಳಲಿದೆ.
ಶ್ರೀ ಶಂಕರನಾರಯಣ ದೇವಸ್ಥಾನದ ಭಕ್ತರಾಗಿರುವ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ, ಲೋಕ ಕಲ್ಯಾಣಾರ್ಥ ನಾಡಿನ ಜನರ ಸುಭೀಕ್ಷೆಗಾಗಿ ಮಹಾ ರುದ್ರ ಯಾಗ ಹಮ್ಮಿಕೊಳ್ಳಲಾಗಿದೆ.
ಈ ಪುಣ್ಯ ಕಾರ್ಯದ ಸಂಧರ್ಭ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಅರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಮಹಾರುದ್ರ ಯಾಗವನ್ನು ನಾಡ ಹಬ್ಬದಂತೆ ಅಚರಿಸಲು ನಿರ್ಧರಿಸಿದ್ದು, 10 ರಿಂದ ಮೇ 20 ರವರೆಗೆ ಸಾರ್ವಜನಿಕ ಮನೋರಂಜನೆಗಾಗಿ ಜಾಯಿಂಟ್ ವಿಲ್, ಮೋಜು ಮಸ್ತಿಗಳು, ಆಟಿಕೆಗಳು, ಆಟೋಟ ಪರಿಕರಗಳು,ಬೃಹತ್ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳು ಮನರಂಜಿಸಲಿವೆ.
ಮೇ 14 ರಂದು ಮಹಾರುದ್ರಾ ಯಾಗದ ಪೂರ್ವ ಭಾವಿಯಾಗಿ ಮಲ್ಪೆ ಯಿಂದ ಕೊಡವೂರು ಮಹತೋಭಾರ ಶಂಕರನಾರಯಣ ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವುದು.
ಮೇ 15 ರಂದು ಮಹಾ ರುದ್ರ ಯಾಗ, ಗಣ ಯಾಗ ಧಾರ್ಮಿಕ ವಿಧಿವಿಧಾನಗಳು ಅರಂಭಗೊಳ್ಳಲಿರುವುದು. ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ಮೇ .16 ರಂದು ಸರ್ವರಿಗೂ ಆರೋಗ್ಯ ಭಾಗ್ಯದ ಪರಿಕಲ್ಪನೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿ ಕೊಳ್ಳಲಾಗಿದೆ.
ಮೇ 17 ರಂದು ಮಲ್ಪೆ ಬೀಚ್ ನಲ್ಲಿ ವಿವಿಧ ಸಂಪ್ರದಾಯಿಕ ಕ್ರೀಡಾಕೂಟದ ಸ್ಪರ್ಧೆಗಳು ನಡೆಯಲಿದೆ. ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ.
ರಾತ್ರಿ 8:00ಗೆ ದಕ್ಷಿಣ ಭಾರತದ ಖ್ಯಾತ ಕಲಾವಿದೆ ಮಂಗ್ಲಿ ಅವರಿಂದ ಶಿವಗಾನಮೃತ ಸಂಗೀತಕಾರ್ಯಕ್ರಮ ಜರಗಲಿದೆ.
ಮೇ. 18 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ ಮೂಲೆ ಮೂಲೆಗಳಿಂದ ವಿವಿಧ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ. ಯುವ ಉದ್ಯೋಗಕಾಂಕ್ಷಿಗಳು ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಮೇ 19 ರಂದು ಮಹಾ ರುದ್ರ ಯಾಗ ಕೊನೆಯ ದಿನದಂದು ಪೂರ್ಣಾಹುತಿ ನಡೆಯಲಿದ್ದು, ಪ್ರತಿದಿನ ಅನ್ನ ಸಂತರ್ಪಣೆ ನಡೆಯಲಿದೆ.
ಇದೇ ಸಂದರ್ಭ ಸ್ಥಳೀಯ ಕಲಾವಿದರುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ವಸ್ತು ಪ್ರದರ್ಶನ ನಡೆಯುವ ವೇದಿಕೆಯಲ್ಲಿ “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” ಎನ್ನುವ ಕಾರ್ಯಕ್ರಮ ಅಯೋಜಿಸಿದೆ.
ವಿಶೇಷ ವಾಗಿ ಐದು ಸಾವಿರ ಮಹಿಳೆಯರಿಗೆ ಮಹಾ ರುದ್ರ ಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಸಕ್ತರು ಮಹಾ ರುದ್ರ ಯಾಗ ಸಮಿತಿ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದೆಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೊಡವೂರು ಮತ್ತು ಮಹಾ ರುದ್ರಯಾಗ ಸಮಿತಿ ಹಾಗೂ ಸೇವಾಕರ್ತ ಪ್ರಸಾದ್ ರಾಜ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

