ಮೊಗವೀರ್ಸ್ ಬಹೆರೀನ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬಹೆರೀನ್ : ಮೊಗವೀರ್ಸ್ ಬಹೆರೀನ್ ವತಿಯಿಂದ ಮಂಗಳೂರು, ಬಾರ್ಕೂರು, ಬಗ್ವಾಡಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ೨೦೨೨-೨೦೨೩ ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣರಾದ ಆರ್ಥಿಕವಾಗಿ ಹಿಂದುಳಿದ ಮೊಗವೀರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೇಕಾದ ದಾಖಲೆಗಳು: ದೃಡೀಕೃತ ಅಂಕಪಟ್ಟಿ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ ನಕಲು ಪ್ರತಿ, ಆಯಾಯ ಮೊಗವೀರ ಗ್ರಾಮ ಸಭೆಗಳ ಪ್ರಮಾಣ ಪತ್ರ ನಕಲು ಪ್ರತಿ, ವ್ಯಾಸಂಗ ಪ್ರಮಾಣ ಪತ್ರ ಅಥವಾ ಪ್ರವೇಶಾತಿಯ ಬಗ್ಗೆ ಇತರ ನಕಲು ಪ್ರತಿ, ವಿದ್ಯಾರ್ಥಿಗಳ ಭಾವ ಚಿತ್ರ ೨ ಮತ್ತು ತಮ್ಮ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದಿಸಲಾದ ಒಂದು ಪ್ರತ್ಯೇಕ ಅರ್ಜಿ ಪತ್ರದೊಂದಿಗೆ ಈ ವಾಟ್ಸಾಪ್ ನಂಬರ್‌ಗೆ ಕಳುಹಿಸಲು ವಿನಂತಿಸಲಾಗಿದೆ.
ಶಿಲ್ಪ ಶಮಿತ್ ಕುಂದರ್ +೯೭೩ ೩೬೩೩೭೯೭೩, ಸುಮನ್ ಸುವರ್ಣ +೯೭೩ ೩೭೧೧೨೦೧೩, ವಿನೋದ್ ಶ್ರೀಯಾನ್ +೯೭೩ ೩೯೧೩೪೧೩೭

