• Home  
  • ಮೋದಿ ದಾಖಲೆ ಆಡಳಿತ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ (Modi’s record administration: Special puja at Kodavoor Shankaranarayana Temple)
- ರಾಜಕೀಯ

ಮೋದಿ ದಾಖಲೆ ಆಡಳಿತ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ (Modi’s record administration: Special puja at Kodavoor Shankaranarayana Temple)

Share: ಮೋದಿ ದಾಖಲೆ ಆಡಳಿತ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪದ ಮೋದಿ ಕನಸು ನನಸಾಗಲಿ –ಶಾಸಕ ಯಶ್‌ಪಾಲ್‌ ಸುವರ್ಣ (Malpe) ಮಲ್ಪೆ, ಜೂ. 10: ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕೊಡವೂರು ವಾರ್ಡ್‌ ಬಿಜೆಪಿ ವತಿಯಿಂದ ಭಾರತದ ಇತಿಹಾಸದಲ್ಲಿ ಅತೀ ದೀರ್ಘ ಅವಧಿಯ ಚುನಾಯಿತ ಪ್ರಧಾನ ಮಂತ್ರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರ ದಾಖಲೆ ಆಡಳಿತ ಮತ್ತು ಅವರ ದೇಶಸೇವೆಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ […]

(Malpe) ಮಲ್ಪೆ, ಜೂ. 10: ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕೊಡವೂರು ವಾರ್ಡ್‌ ಬಿಜೆಪಿ ವತಿಯಿಂದ ಭಾರತದ ಇತಿಹಾಸದಲ್ಲಿ ಅತೀ ದೀರ್ಘ ಅವಧಿಯ ಚುನಾಯಿತ ಪ್ರಧಾನ ಮಂತ್ರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರ ದಾಖಲೆ ಆಡಳಿತ ಮತ್ತು ಅವರ ದೇಶಸೇವೆಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ವಿಕಸಿತ ಭಾರತದ ಸಂಕಲ್ಪ ಸಿದ್ದಿಗಾಗಿ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್‌ ಸುವರ್ಣ, ಕಳೆದ 4399 ದಿನಗಳಿಂದ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಕನಸು ನನಸಾಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರಿಗೆ ದೇಶದ ಪ್ರತಿಯೋರ್ವ ನಾಗರಿಕರ ಸಹಕಾರದ ಜತೆಗೆ ದೈವ ದೇವರ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.

 ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ನಗರಾಧ್ಯಕ್ಷ ದಿನೇಶ್‌ ಅಮೀನ್‌, ಪ್ರಮುಖರಾದ ವಿಜಯ ಕೊಡವೂರು, ರವಿರಾಜ್‌ ಹೆಗ್ಡೆ, ನಾರಾಯಣ ಬಲ್ಲಾಳ್‌, ಸುಧಾಕರ್‌ ಎ. ಕುಂದರ್‌, ಪ್ರಭಾತ್‌ ಕೊಡವೂರು, ಲಕ್ಷ್ಮೇಶ್‌ ಬಂಗೇರ, ವಿನಯ ಕುಮಾರ್‌ ಪಡುಕರೆ, ರಮೇಶ್‌ ಮಾಸ್ತರ್‌, ಪ್ರದೀಪ್‌ ಕುಂದರ್‌, ಚಂದ್ರಕಾಂತ್‌ ಶೆಟ್ಟಿಗಾರ್‌, ಸದಾನಂದ ಶೇರಿಗಾರ್‌, ಮಹಿಳಾ ಮೋರ್ಚಾದ ಪ್ರಮುಖರಾದ ಸುಲತಾ ಶೆಟ್ಟಿ, ಕೀರ್ತಿ ವಿಜಯ್‌, ಯಶೋದಾ ರಾಜೇಂದ್ರ, ದೀಪಾ ಪೈ, ಗುಣವತಿ, ಚಂದ್ರಾವತಿ, ಮಾಯಾ ಕಾಮತ್‌, ತ್ರಿವೇಣಿ, ಸುಜಾತ, ನೀತಾ, ಸುಭದ್ರ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.