ಯುಎಇ : 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಶಿವಾನಂದ ಕೋಟ್ಯಾನ್‌ರವರಿಗೆ ಪ್ರಶಸ್ತಿ ಪ್ರಧಾನ
(damam)ದಮಾಮ್: ಸೌದಿ ಅರೇಬಿಯಾದ ದಮಾಮ್‌ನಲ್ಲಿ ಅದ್ದೂರಿಯಾಗಿ ನಡೆದ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಅನಿವಾಸಿ ಭಾರತೀ̧ಯ ಉಡುಪಿ ಜಿಲ್ಲೆಯ ಕಟಪಾಡಿ ಮೂಲದ ಶಿವಾನಂದ ಕೋಟ್ಯಾನ್ ಮಸ್ಕತ್ ಅವರಿಗೆ ವಿಶ್ವಮಾನ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಯು. ಟಿ.ಖಾದರ್ (Speaker UT Khader) ಪ್ರಶಸ್ತಿ ಪ್ರಧಾನಿಸಿದರು.
ಶಿವಾನಂದ್ ಕೋಟ್ಯಾನ್ ಅವರು ಕಲೆ, ಸಾಹಿತ್ಯ ಸಮಾಜಸೇವಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ.
ವಿದೇಶದಲ್ಲಿ ಚಲನಚಿತ್ರಗಳ ಪ್ರದರ್ಶನ ಆಯೋಜನೆ ಹಾಗೂ ನಾಡಿನ ಕಲಾವಿದರನ್ನು ಗುರುತಿಸಿ ಪ್ರೋತಾಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಈ ದಿಸೆಯಲ್ಲಿ ಇವರ ಸೇವಾ ಕಾರ್ಯವನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.
ಸೌದಿ ಅರೇಬಿಯಾದಲ್ಲಿ ನಡೆದ ೧೭ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಕನ್ನಡ ಭಾಷೆ, ನಡೆ, ನುಡಿಯ ಬಗೆಗಿನ ಮನರಂಜನಾ ಕಾರ್ಯಕ್ರಮ, ಕವಿಗೋಷ್ಠಿ, ಯಕ್ಷಗಾನ ಕಾರ್ಯಕ್ರಮಗಳು ಸಂಪನ್ನಗೊಂಡವು.

