• Home  
  • ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ ರಜತ ಸಂಭ್ರಮ – ಗ್ರಾಮೀಣ ಕ್ರೀಡಾಕೂಟ (Youth Forum Uppur, Kolalagiri Silver Celebration – Rural Sports Meet)
- ಕ್ರೀಡೆ

ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ ರಜತ ಸಂಭ್ರಮ – ಗ್ರಾಮೀಣ ಕ್ರೀಡಾಕೂಟ (Youth Forum Uppur, Kolalagiri Silver Celebration – Rural Sports Meet)

Share: ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ ರಜತ ಸಂಭ್ರಮ – ಗ್ರಾಮೀಣ ಕ್ರೀಡಾಕೂಟ    ಬತ್ತದ ಕಳಸಕ್ಕೆ ಬತ್ತ ತುಂಬುವುದರ ಮೂಲಕ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ (Udupi) ಉಡುಪಿ: ಉಡುಪಿಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಹಾಗೂ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಲಾಯಿತು.    ಬತ್ತದ ಕಳಸಕ್ಕೆ ಬತ್ತ ತುಂಬುವುದರ ಮೂಲಕ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ […]

(Udupi) ಉಡುಪಿ: ಉಡುಪಿಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಹಾಗೂ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಲಾಯಿತು.

   ಬತ್ತದ ಕಳಸಕ್ಕೆ ಬತ್ತ ತುಂಬುವುದರ ಮೂಲಕ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಉಪ್ಪೂರು ವ್ಯ. ಸೇವಾ ಸಹಕಾರಿ ಸಂಘದ ನಿರ್ದೇಶಕ ಹೂವಯ್ಯ ಸೇರ್ವೇಗಾರ್, ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳಾದ ಕುಟ್ಟಿ ದೊಣ್ಣೆ, ಲಗೋರಿ ಮುಂತಾದ ಕ್ರೀಡೆಗಳನ್ನು ಮಕ್ಕಳಿಗೆ ಪರಿಚಯಿಸುವ ಹಾಗೂ ಸಾರ್ವನಜಕರಿಗೆ ನೆನಪಿಸುವ ಮಾದರಿ ಕಾರ್ಯಕ್ರಮ. ಜಗತ್ತು ಸಿಹಿ ನಿದ್ದೆಯಲ್ಲಿ ಮಲಗಿರುವ ಹೊತ್ತು ಜಗದ ಸುದ್ದಿಯನ್ನು ಮನೆ ಮನೆ ಮುಟ್ಟಿಸುವ ಪತ್ರಿಕಾ ವಿತರಕರನ್ನು ಗೌರವಿಸಿರುವುದು ಶ್ಲಾಘನೀಯ. ಮಳೆ ಗಾಳಿಯನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಪವರ್ ಮ್ಯಾನ್‌ ಗಳನ್ನು ಗುರುತಿಸಿ ಗೌರವಿಸಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆ ಕಾರ್ಯವು ಅಭಿನಂದನೀಯ ಎಂದರು.

ವೇದಿಕೆಯ ಅಧ್ಯಕ್ಷ ಸಂದೀಪ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.

    ವೇದಿಕೆಯಲ್ಲಿ ಗಣ್ಯರಾದ ಡಾ. ಸಂದೇಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರತ್ನಾಕರ ಮರಕಾಲ, ಉ, ವ್ಯ, ಸೇ,ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ 48 ವರ್ಷಗಳಿಂದ ಸುದೀರ್ಘವಾಗಿ ದಿನ ಪತ್ರಿಕೆ ವಿತರಣೆ ಮಾಡುತ್ತಿರುವ ಪುಂಡಲೀಕ ಶಣೈ, ಪತ್ರಿಕಾ ವಿತರಕರಾದ ಅಶೋಕ್ ಚಾತ್ರ, ಮೆಸ್ಕಾಂ ಪವರ್ ಮ್ಯಾನ್ ಗಳಾದ ಶರಣಪ್ಪ ಹಳ್ಳಪ್ಪನವರ್, ಮಂಜುನಾಥ ಹಾದಿಮನಿ, ಹಾಗೂ ಅಡಿವೆಪ್ಪ ಪಾಟೀಲ ರವರನ್ನು ಗೌರವಿಸಿ ಸಮ್ಮಾನಿಸಲಾಯಿತು.

 ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ 250 ಕ್ಕೂ ಹೆಚ್ಚಿನ ಸ್ಪರ್ಧಿಗಳು ವಿವಿಧ ಗ್ರಾಮೀಣ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.

 ಸಂಘದ ಪದಾಧಿಕಾರಿಗಳು ಸರ್ವಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಸಂಘದ ಸದಸ್ಯರಾದ ಶೋಭಾ ಯೋಗೀಶ್, ಶಾಂತ ಸೆಲ್ವರಾಜ್ ಹಾಗೂ ಸುಕನ್ಯ ರವರು ಸಮ್ಮಾನಿತರ ಪರಿಚಯ ವಾಚಿಸಿದರು.

  ಶಕುಂತಲಾ ಸುಕೇಶ್ ಪ್ರಾರ್ಥಿಸಿದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವರವರು ಸ್ವಾಗತಿಸಿದರು. ಸುರೇಶ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.