ಧರ್ಮಸ್ಥಳ ಗ್ರಾ. ಯೋಜನೆ, ಎಸ್ ವಿಎಸ್ ವಿದ್ಯಾವರ್ಧಕ ಸಂಘ ಆಯೋಜನೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಟಪಾಡಿ ಎಸ್ ವಿ ಎಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ 200 ಕ್ಕೂ ಹೆಚ್ಚು ಗಿಡಗಳ ನಾಟಿ
(Katapadi) ಕಟಪಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಬಿಸಿ ಟ್ರಸ್ಟ್, ಕಟಪಾಡಿ ಎಸ್ ವಿಎಸ್ ವಿದ್ಯಾವರ್ಧಕ ಸಂಘ, ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಸ್ ವಿ ಎಸ್ ವಿದ್ಯಾ ಸಂಸ್ಥೆಯ ಆವರಣ ದಲ್ಲಿ 200 ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಯಿತು.
ಬಳಿಕ ಎಸ್ ವಿ. ಎಸ್ ವಿದ್ಯಾ ಸಂಸ್ಥೆ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯೇಂದ್ರ ಪೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅರಣ್ಯ ಇಲಾಖೆಯ ಉಪ ಅರಣ್ಯ ಅಧಿಕಾರಿ ರವೀಂದ್ರ ಕುಮಾರ್ ರವರು ಪರಿಸರ ದ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿಯರವರು ಮಾತನಾಡಿ, ಗಿಡ ನಾಟಿ ಮಾಡುವ ಜೊತೆಗೆ ನಿರಂತರ ಗಿಡಗಳ ಪೋಷಣೆ ಮಾಡುವುದು ಅತೀ ಅಗತ್ಯ ಎಂದು ಶುಭ ಹಾರೈಸಿದರು.
ಈ ಸಂದರ್ಭ ಸಾಮಾಜಿಕ ಅರಣ್ಯ ವಿಭಾಗದ ಕೃಷ್ಟಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿಶ್ರೀಮತಿ ಮಮತಾ ಶೆಟ್ಟಿ, ಜನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಶಾಲಾ ಆಡಳಿತ ಮಂಡಳಿಯ ಶ್ರೀನಿವಾಸ್ ಕಿಣಿ, ಕಾಲೇಜು ಪ್ರಾoಶುಪಾಲ ದಯಾನಂದ ಪೈ, ವಿವೇಕಾನಂದ, ದೇವೇಂದ್ರ ನಾಯ್ಕ್, ಸುಜಾ ಡಿಸೋಜ, ಆಶಾಲತಾ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

