• Home  
  • ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಮೈಕ್ರೋಫೋನ್‌ ಬಂದ್‌ : ವಿಪಕ್ಷಗಳಿಂದ  ಸಭಾತ್ಯಾಗ
- ರಾಜಕೀಯ

ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಮೈಕ್ರೋಫೋನ್‌ ಬಂದ್‌ : ವಿಪಕ್ಷಗಳಿಂದ  ಸಭಾತ್ಯಾಗ

Share: ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡುವ ವೇಳೆ ಅವರ ಮೈಕ್ರೋಫೋನ್‌  ಆಫ್ ಮಾಡಿದ ಕಾರಣ ಇಂಡಿಯಾ ಒಕ್ಕೂಟದ ಪಕ್ಷಗಳು ಸರ್ಕಾರದ ನಡೆಯನ್ನು ಖಂಡಿಸಿ ಸಭಾತ್ಯಾಗ ಮಾಡಿವೆ. ಮಣಿಪುರದ ಕುರಿತು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪಡೆಯಲು ಇಂಡಿಯಾ ಒಕ್ಕೂಟ ಮಂಡಿಸಿದ ಬೇಡಿಕೆಯನ್ನು ತಡೆಯಲು ಬಿಜೆಪಿ ಸಂಸದರು, ಖರ್ಗೆ ಅವರ ಮೈಕ್ರೋಫೋನ್‌ ಅನ್ನು ಆಫ್ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಬಿ ಜೆಪಿ ಸದಸ್ಯರ ಪ್ರಚೋದನೆಯಿಂದ […]


ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡುವ ವೇಳೆ ಅವರ ಮೈಕ್ರೋಫೋನ್‌  ಆಫ್ ಮಾಡಿದ ಕಾರಣ ಇಂಡಿಯಾ ಒಕ್ಕೂಟದ ಪಕ್ಷಗಳು ಸರ್ಕಾರದ ನಡೆಯನ್ನು ಖಂಡಿಸಿ ಸಭಾತ್ಯಾಗ ಮಾಡಿವೆ.

ಮಣಿಪುರದ ಕುರಿತು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪಡೆಯಲು ಇಂಡಿಯಾ ಒಕ್ಕೂಟ ಮಂಡಿಸಿದ ಬೇಡಿಕೆಯನ್ನು ತಡೆಯಲು ಬಿಜೆಪಿ ಸಂಸದರು, ಖರ್ಗೆ ಅವರ ಮೈಕ್ರೋಫೋನ್‌ ಅನ್ನು ಆಫ್ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಬಿ ಜೆಪಿ ಸದಸ್ಯರ ಪ್ರಚೋದನೆಯಿಂದ ಸ್ವತಃ ಸಭಾನಾಯಕರೇ ಖರ್ಗೆಯವರ ಮಾತಿಗೆ ಪದೇ ಪದೇ ಅಡ್ಡಿಪಡಿಸಿದರು. ಗದ್ದಲದಲ್ಲಿಯೇ ಮಸೂದೆಗಳನ್ನು ಮಂಡಿಸಲಾಯಿತು. ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂಡಿಯಾ ಸದಸ್ಯರು ಸಭಾತ್ಯಾಗ ಮಾಡಿದರು ಎಂದು ಜೈರಾಮ್ ರಮೇಶ್ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಮಣಿಪುರ ಹಿಂಸಾಚಾರದ ಬಗ್ಗೆ ವಿವರವಾದ ಚರ್ಚೆಗೆ ಮತ್ತು ಈಶಾನ್ಯ ರಾಜ್ಯದ ಸಮಸ್ಯೆಯ ಬಗ್ಗೆ ಸದನದಲ್ಲಿ ಪ್ರಧಾನಿ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಓಬ್ರಿಯಾನ್ ಈ ಬಗ್ಗೆ ಟ್ವೀಟ್‌ ಮಾಡಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೈಕ್ರೋಫೋನ್‌ ಆಫ್ ಮಾಡಲಾಗಿತ್ತು. ಈ ಘಟನೆಗೆ ಪ್ರತಿಭಟನೆ ವ್ಯಕ್ತಪಡಿಸಿ ಇಂಡಿಯಾ ಒಕ್ಕೂಟದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.