• Home  
  • ರಾಜ್ಯ ವ್ಯಾಪಿ ಕರಾವಳಿ ಮೀನು ಮಾರುಕಟ್ಟೆ ವಿಸ್ತರಣೆ ಶೀಘ್ರ: ಸಚಿವ ಮಂಕಾಳ ವೈದ್ಯ
- ವಿಡಿಯೋ

ರಾಜ್ಯ ವ್ಯಾಪಿ ಕರಾವಳಿ ಮೀನು ಮಾರುಕಟ್ಟೆ ವಿಸ್ತರಣೆ ಶೀಘ್ರ: ಸಚಿವ ಮಂಕಾಳ ವೈದ್ಯ

Share: ರಾಜ್ಯ ವ್ಯಾಪಿ ಕರಾವಳಿ ಮೀನು ಮಾರುಕಟ್ಟೆ ವಿಸ್ತರಣೆ ಶೀಘ್ರ: ಸಚಿವ ಮಂಕಾಳ ವೈದ್ಯ  ಮಂಗಳೂರು: ಕರಾವಳಿಯ ಮೀನು ಮಾರುಕಟ್ಟೆಯನ್ನು  ರಾಜ್ಯದಾದ್ಯಂತ ವಿಸ್ತರಣೆ ಮಾಡಲು ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಮೀನುಗಾರಿಕೆ ಸಚಿವ ಮಾಂಕಾಳ ಎಸ್.ವೈದ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.  ಈಗಾಗಲೇ ರೂಪಿಸಿರುವ ಯೋಜನೆಯಿಂದ ಕರಾವಳಿ ಮೀನು ಮಾರುಕಟ್ಟೆ ವಿಸ್ತರಣೆಗೊಳ್ಳಲಿದೆ. ಮತ್ಸ್ಯವಾಹಿನಿ ಯೋಜನೆಯ ಅಡಿಯಲ್ಲಿ ಮೀನುಗಾರರ ಸ್ವಾವಲಂಬಿ ಬದುಕಿಗೆ ಪೂರಕವಾಗಿ 150 ತ್ರಿಚಕ್ರ ವಾಹನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಿತರಣೆ ಆರಂಭಗೊಂಡಿದ್ದು, ಮುಂದಿನ ತಿಂಗಳು ಇತರ ಜಿಲ್ಲೆಗಳಲ್ಲಿ […]

ರಾಜ್ಯ ವ್ಯಾಪಿ ಕರಾವಳಿ ಮೀನು ಮಾರುಕಟ್ಟೆ ವಿಸ್ತರಣೆ ಶೀಘ್ರ: ಸಚಿವ ಮಂಕಾಳ ವೈದ್ಯ

 ಮಂಗಳೂರು: ಕರಾವಳಿಯ ಮೀನು ಮಾರುಕಟ್ಟೆಯನ್ನು  ರಾಜ್ಯದಾದ್ಯಂತ ವಿಸ್ತರಣೆ ಮಾಡಲು ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಮೀನುಗಾರಿಕೆ ಸಚಿವ ಮಾಂಕಾಳ ಎಸ್.ವೈದ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

 ಈಗಾಗಲೇ ರೂಪಿಸಿರುವ ಯೋಜನೆಯಿಂದ ಕರಾವಳಿ ಮೀನು ಮಾರುಕಟ್ಟೆ ವಿಸ್ತರಣೆಗೊಳ್ಳಲಿದೆ. ಮತ್ಸ್ಯವಾಹಿನಿ ಯೋಜನೆಯ ಅಡಿಯಲ್ಲಿ ಮೀನುಗಾರರ ಸ್ವಾವಲಂಬಿ ಬದುಕಿಗೆ ಪೂರಕವಾಗಿ 150 ತ್ರಿಚಕ್ರ ವಾಹನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಿತರಣೆ ಆರಂಭಗೊಂಡಿದ್ದು, ಮುಂದಿನ ತಿಂಗಳು ಇತರ ಜಿಲ್ಲೆಗಳಲ್ಲಿ 100 ವಾಹನ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರರಿಗೆ ಡೀಸೆಲ್ ಸಹಾಯಧನ ಅಗಸ್ಟ್‌ನಲ್ಲಿ ವಿತರಿಸಲಾಗುವುದು. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲು ಅಧ್ಯಯನಯೊಂದನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.