• Home  
  •  ರಾಜ್ಯ ಸರಕಾರ ಸಂಪೂರ್ಣ ವಿಫಲ: ಬರ ಪರಿಹಾರಕ್ಕೆ ಬಿಡಿಗಾಸೂ ನೀಡಿಲ್ಲ- ಮಾಜಿ ಸಚಿವ ಕೋಟ (EX minister Kota Shreenivasa Poojary) ವಾಗ್ದಾಳಿ
- ರಾಜಕೀಯ - ವಿಡಿಯೋ

 ರಾಜ್ಯ ಸರಕಾರ ಸಂಪೂರ್ಣ ವಿಫಲ: ಬರ ಪರಿಹಾರಕ್ಕೆ ಬಿಡಿಗಾಸೂ ನೀಡಿಲ್ಲ- ಮಾಜಿ ಸಚಿವ ಕೋಟ (EX minister Kota Shreenivasa Poojary) ವಾಗ್ದಾಳಿ

Share: ರಾಜ್ಯ ಸರಕಾರ ಸಂಪೂರ್ಣ ವಿಫಲ: ಬರ ಪರಿಹಾರಕ್ಕೆ ಬಿಡಿಗಾಸೂ ನೀಡಿಲ್ಲ- ಮಾಜಿ ಸಚಿವ ಕೋಟ (EX Minister Kota Shreenivasa Poojary) ವಾಗ್ದಾಳಿ Udupi) ಉಡುಪಿ: ಆರು ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ (CM Sidddaramayya govt) ಸರಕಾರ ಸಂಪೂರ್ಣ ವಿಫಲವಾಗಿದೆ. ಕಂಡು ಕೇಳರಿಯದ ಬರ ಜನರನ್ನು ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರ ಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. […]

EX MINISTER KOTA SHREENIVASA POOJARY COUNTER TO SIDDARAMAYYA GOVT

ರಾಜ್ಯ ಸರಕಾರ ಸಂಪೂರ್ಣ ವಿಫಲ: ಬರ ಪರಿಹಾರಕ್ಕೆ ಬಿಡಿಗಾಸೂ ನೀಡಿಲ್ಲ- ಮಾಜಿ ಸಚಿವ ಕೋಟ (EX Minister Kota Shreenivasa Poojary) ವಾಗ್ದಾಳಿ

Udupi) ಉಡುಪಿ: ಆರು ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ (CM Sidddaramayya govt) ಸರಕಾರ ಸಂಪೂರ್ಣ ವಿಫಲವಾಗಿದೆ. ಕಂಡು ಕೇಳರಿಯದ ಬರ ಜನರನ್ನು ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರ ಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಅವರು ಗುರುವಾರ ಬೆಳಿಗೆ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಮಾತನಾಡಿದರು.

 ಮಳೆಕೊರತೆಯಿಂದ 30 ಸಾವಿರ ಕೋಟಿ ನಷ್ಟ ಎಂದು ಸರಕಾರ ವರದಿಯಲ್ಲಿ ನೀಡಿದೆ. ತಕ್ಷಣ ಕನಿಷ್ಠ 5 ಸಾವಿರ ಕೋಟಿ ಕೂಡಾ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಮನವಿ ಕೊಟ್ಟಿದ್ದೇವೆ ಎಂದು ಹೇಳೋದ್ರಲ್ಲೇ ತಲ್ಲೀನವಾಗಿದೆ. ಸರಕಾರ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ.

 ವಿದ್ಯುತ್ ಕೊರತೆಯಾಗಿದೆ.  ದಿನಕ್ಕೆ 7 ಗಂಟೆ 3 ಪೇಸ್  ಪವರ್ ಎಂದು ಘೋಷಿಸಿ 2 ಗಂಟಿಗೆ ಇಳಿಸಿದ್ದಾರೆ. ರೈತರು ಕಂಗಾಲಾಗಿದ್ದರೂ ಸಿದ್ದರಾಮಯ್ಯ ಸರಕಾರ ಸ್ಪಂದಿಸುತ್ತಿಲ್ಲ. ಒಂದು ರುಪಾಯಿ ಕಿಸಾನ್ ಸಮ್ಮಾನ್ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರಕಾರ ರಾಜ್ಯದಿಂದ 4- ಕೇಂದ್ರದಿಂದ 6 ಸಾವಿರ ಕೊಡುತ್ತಿದ್ದುದನ್ನು ನಿಲ್ಲಿಸಿ ರೈತರ ಖಾತೆಯ ಹಣಕ್ಕೆ ಈ ಸರಕಾರ ಕನ್ನಹಾಕಿದೆ. ರೈತರ ಮೇಲೆ ಬದ್ಧತೆ ಇದ್ದರೆ ಹಣ ಬಿಡುಗಡೆ ಮಾಡಿ ಎಂದು ಕೋಟ ಉಡುಪಿಯಲ್ಲಿ ವಾಗ್ದಾಳಿ ಮಾಡಿದರು.

 ರಾಜ್ಯ ಸರಕಾರ ವಿಭಜನೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಜನಕ್ಕೆ ಶಾಸಕರು ಭರವಸೆ ಕೊಟ್ಟಿದ್ದಾರೆ. ರಾಜ್ಯದ ಯಾವ ಶಾಸಕರ ನೇತೃತ್ವದ ಅಭಿವೃದ್ಧಿಗೆ ಒಂದು ಕೋಟಿಯೂ ಬಿಡುಗಡೆ ಮಾಡಿಲ್ಲ. 9 ಸಾವಿರ ವಿವೇಕ ಶಾಲಾ ಕೊಠಡಿ ಸ್ಥಗಿತ ಆಗಿದೆ. ಶಾಸಕರ ಮುನಿಸು, ಆಕ್ರೋಶ ದಲ್ಲೇ ಆರು ತಿಂಗಳು ಕಳೆದುಹೋಗಿದೆ. ವಿಧಾನಸೌಧದ ಕಡೆ ಮಂತ್ರಿಗಳು, ಜನ ಬರುತ್ತಿಲ್ಲ. ಪ. ಜಾತಿ ಪ.ಪಂಗಡದ 11,500 ಕೋಟಿ ರುಪಾಯಿ  ಅನುದಾನಗಳನ್ನು  ಗ್ಯಾರೆಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಎಲ್ಲಾ ಯೋಜನೆಯ ಹಣವನ್ನು ಐದು ಗ್ಯಾರಂಟಿ ಗಳಿಗೆ ಬಳಕೆ ಮಾಡಿದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಕೋಟ ಪ್ರಶ್ನಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.