• Home  
  • ರೈಲೇರುವಾಗ ಬಿದ್ದ ಯುವತಿಯನ್ನು ರಕ್ಷಿಸಿದ ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ : ಸಾರ್ವತ್ರಿಕ ಶ್ಲಾಘನೆ (RPF women personnel who rescued a young women who fell while boarding the train : Universal appreciation)
- PROBLEMS

ರೈಲೇರುವಾಗ ಬಿದ್ದ ಯುವತಿಯನ್ನು ರಕ್ಷಿಸಿದ ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ : ಸಾರ್ವತ್ರಿಕ ಶ್ಲಾಘನೆ (RPF women personnel who rescued a young women who fell while boarding the train : Universal appreciation)

Share: ರೈಲೇರುವಾಗ ಬಿದ್ದ ಯುವತಿಯನ್ನು ರಕ್ಷಿಸಿದ ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ : ಸಾರ್ವತ್ರಿಕ ಶ್ಲಾಘನೆ (Udupi) ಉಡುಪಿ: ರೈಲನ್ನೇರುವ ವೇಳೆ ಆಯತಪ್ಪಿ ಬಿದ್ದ ಯುವತಿ ಯನ್ನು ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ.  ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲು ಆಗಮಿಸಿದ ಸಂದರ್ಭ ಪ್ರಯಾಣಿಕರನ್ನು ಬದಿಗೆ ಸರಿಯುವಂತೆ ಸೂಚಿಸುತ್ತಿದ್ದ ವೇಳೆ ಯುವತಿ ಆಯತಪ್ಪಿ ಬಿದ್ದದ್ದನ್ನು ಗಮನಿಸಿದ ಆ‌ರ್.ಪಿಎಫ್ ಸಿಬ್ಬಂದಿ ಅಪರ್ಣಾ ತಕ್ಷಣ ಧಾವಿಸಿದರು. ಪ್ರಯಾಣಿಕರ ನೆರವಿನಿಂದ ಪ್ಲಾಟ್‌ಫಾರಂ ಕಡೆಗೆ ಯುವತಿಯನ್ನು ಸೆಳೆದು ಯಾವುದೇ […]

ರೈಲೇರುವಾಗ ಬಿದ್ದ ಯುವತಿಯನ್ನು ರಕ್ಷಿಸಿದ ಆರ್ಪಿಎಫ್ಮಹಿಳಾ ಸಿಬ್ಬಂದಿ : ಸಾರ್ವತ್ರಿಕ ಶ್ಲಾಘನೆ

(Udupi) ಉಡುಪಿ: ರೈಲನ್ನೇರುವ ವೇಳೆ ಆಯತಪ್ಪಿ ಬಿದ್ದ ಯುವತಿ ಯನ್ನು ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ.

 ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲು ಆಗಮಿಸಿದ ಸಂದರ್ಭ ಪ್ರಯಾಣಿಕರನ್ನು ಬದಿಗೆ ಸರಿಯುವಂತೆ ಸೂಚಿಸುತ್ತಿದ್ದ ವೇಳೆ ಯುವತಿ ಆಯತಪ್ಪಿ ಬಿದ್ದದ್ದನ್ನು ಗಮನಿಸಿದ ಆ‌ರ್.ಪಿಎಫ್ ಸಿಬ್ಬಂದಿ ಅಪರ್ಣಾ ತಕ್ಷಣ ಧಾವಿಸಿದರು. ಪ್ರಯಾಣಿಕರ ನೆರವಿನಿಂದ ಪ್ಲಾಟ್‌ಫಾರಂ ಕಡೆಗೆ ಯುವತಿಯನ್ನು ಸೆಳೆದು ಯಾವುದೇ ಅಪಾಯವಾಗದಂತೆ ಸಮಯೋಚಿತವಾಗಿ ರಕ್ಷಣೆ ಮಾಡಿದ್ದಾರೆ. ರೈಲನ್ನು ಬಾವುಟ, ವಾಕಿ ಟಾಕಿ ನೆರವಿನಿಂದ ನಿಲ್ಲಿಸಲಾಯಿತು.

 ಯಾವುದೇ ಗಾಯಗಳಿಲ್ಲದೆ ರೈಲೇರಿ ತೆರಳಿದ ಯುವತಿಯ ಮೇಲೆ ಆರ್‌ಪಿಎಫ್ ಸಿಬ್ಬಂದಿಗೆ ನಿಗಾ ಇಡಲು ಭಟ್ಕಳ ಆರ್‌ಪಿಎಫ್ ಸಿಬ್ಬಂದಿಗೆ ಸೂಚಿಸಲಾಯಿತು.

ಕಾರವಾರ ಆರ್‌ಆರ್‌ಎಂ ವತಿಯಿಂದ 5,000 ರೂ. ಪ್ರೋತ್ಸಾಹಧನವನ್ನು ಆರ್‌ಪಿಎಫ್ ಮಹಿಳಾ ಸಿಬ್ಬಂದಿ ಅಪರ್ಣಾ ಕೆ.ಟಿ. ಅವರಿಗೆ ಹಸ್ತಾಂತರಿಸಲಾಯಿತು.

ಕೊಂಕಣ ರೈಲ್ವೇ ಅಧಿಕಾರಿ ಶ್ರೀಮತಿ ಸುಧಾ ಕೃಷ್ಣಮೂರ್ತಿಯವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.