ರೋಟರಿ ಸಾಂಸ್ಕೃತಿಕ ಸ್ಪರ್ಧೆ ‘ರಂಗ್ ತರಂಗ್ 2026’
ರೋಟರಿ ಉಡುಪಿ, ರೋಟರಿ ಮಣಿಪಾಲ್ ಟೌನ್’ಗೆ ಜಂಟಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ.
(Manipala) ಮಣಿಪಾಲ: ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ ರೋಟರಿ ಜಿಲ್ಲೆ 3182ರ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ “ರಂಗ್ ತರಂಗ್”2026-27ರಲ್ಲಿ ರೋಟರಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ತಂಡಗಳು ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿದೆ
ಗಾಯನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರೊ. ಪ್ರಕಾಶ್ ಕಾಮತ್ ಪ್ರಥಮ, ಮಹಿಳೆಯರ ವಿಭಾಗದಲ್ಲಿ ರೊ. ವಿದ್ಯಾ ಶೆಣೈ, ದ್ವಿತೀಯ,ಯುಗಳ ಗೀತೆಯಲ್ಲಿ ರೊ. ವಿದ್ಯಾ ಶೆಣೈ ಮತ್ತು ಜೋನ್ ಗೌರವ ಕಾಮತ್ ಪ್ರಥಮ, ಏಕಪಾತ್ರಾಭಿನಯದಲ್ಲಿ ರೊ. ಡಾ. ಸುರೇಶ ಶೆಣೈ ಪ್ರಥಮ ಸ್ಥಾನವನ್ನು ಪಡೆದು ಜೋನಲ್ ಚಾಂಪಿಯನ್ಸ್ ಆಗಿದ್ದಾರೆ.
ಚಾಂಪಿಯನ್ಸ್ ಪ್ರಶಸ್ತಿಯನ್ನು ವಲಯ-4ರ ಸಹಾಯಕ ಗವರ್ನರ್ ರೊ. ಹೇಮಂತ್ .ಯು. ಕಾಂತ್ ಮತ್ತು ಜೋನಲ್ ಕಲ್ಚರಲ್ ಕೋಆರ್ಡಿನೇಟರ್ ಡಾ. ದೀಪಕ್ ರಾಮ್ ಬಾಯಾರಿಯವರು ರೋಟರಿ ಉಡುಪಿ ಅಧ್ಯಕ್ಷರಾದ ಜೆ. ಗೋಪಾಲಕೃಷ್ಣ ಪ್ರಭು ಮತ್ತು ರೋಟರಿ ಉಡುಪಿ ಸದಸ್ಯರಿಗೆ ನೀಡಿ ಗೌರವಿಸಿದರು.

