ಲೋಕಸಭಾ ವಿಜಯಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾಪುವಿನಲ್ಲಿ ಅಭಿನಂದನೆ
(Kaup) ಕಾಪು: ಬಿಜೆಪಿಯ ಲೋಕಸಭಾ ವಿಜಯಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾಪುವಿನ ಬಿಜೆಪಿ ಕಛೇರಿಯಲ್ಲಿ ಕಾಪು ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಮಂಗಳವಾರ ಮದ್ಯಾಹ್ನ ಕೋಟ ಶ್ರೀನಿವಾಸ ಪೂಜಾರಿಯವರು ವಿಜಯ ಆಗುತ್ತಿದ್ದಂತೆ ಕಾಪುವಿನ ಬಿಜೆಪಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಬಿಜೆಪಿ ಅಧ್ಯಕ್ಷ ಜೀತೇಂದ್ರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಸಹಿತ ಗಣ್ಯರು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಮೆಚ್ಚಿನ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಅತ್ಯಂತ ಹೆಚ್ಚಿನ ಅಂತರದಲ್ಲಿ ವಿಜಯಿ ಆಗಿದ್ದಾರೆ. ಈ ವಿಜಯದ ಶ್ರೇಯವು ಎಲ್ಲಾ ಕಾರ್ಯಕರ್ತರಿಗೆ ಸಲ್ಲಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿದ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಈ ವಿಜಯವು ಕಾರ್ಯಕರ್ತರ ಮತ್ತು ನಾಯಕರ ಪರಿಶ್ರಮದ ಫಲವಾಗಿದೆ. ಗ್ರಾಮ ಪಂಚಾಯತಿಯಿಂದ ಲೋಕ ಸಭೆಯವರೆಗೆ ನನ್ನ ಮೇಲೆ ಭರವಸೆ ಇಟ್ಟ ಬಿಜೆಪಿ ಪಕ್ಷಕ್ಕೆ ನನ್ನ ವಂದನೆಗಳು ಎಂದರು.
ಕಾಪು ಬಿಜೆಪಿ ಅಧ್ಯಕ್ಷ ಜೀತೇಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ನೀತಾಗುರುರಾಜ್, ಶಿಲ್ಪಾ ಸುವರ್ಣ, ಕುತ್ಯಾರು ಪ್ರಸಾದ್ ಶೆಟ್ಟಿ, ಕುತ್ಯಾರು ನವೀನ್ಶೆಟ್ಟಿ, ಪೃಥ್ವಿ ರಾಜ್ ಶೆಟ್ಟಿ, ಗೋಪಾಲ ಕೃಷ್ಣ ರಾವ್, ಅರುಣ್ ಶೆಟ್ಟಿ ಪಾದೂರು, ಸೋನು ಪೂಜಾರಿ, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶರಣ್ ಕುಮಾರ್ ಮಟ್ಟು ನಿರೂಪಿಸಿದರು.
