• Home  
  • ವನಸುಮ ರಂಗೋತ್ಸವ ೨೦೨೪ -ಸಮಾರೋಪ (Vanasuma Rangothsava 2024 Conclusion)
- ಮನೋರಂಜನೆ

ವನಸುಮ ರಂಗೋತ್ಸವ ೨೦೨೪ -ಸಮಾರೋಪ (Vanasuma Rangothsava 2024 Conclusion)

Share: ವನಸುಮ ರಂಗೋತ್ಸವ ೨೦೨೪ -ಸಮಾರೋಪ ಉಡುಪಿ: ಕಟಪಾಡಿ ವನಸುಮ ವೇದಿಕೆ ಆಯೋಜಿಸಿದ್ದ ಮೂರು ದಿನಗಳ ರಂಗೊತ್ಸವ ಅಂಬಲ್ಪಾಡಿ ಜನಾರ್ದನ ಬಯಲು ರಂಗಮಂದಿರದಲ್ಲಿ ಸಮಾಪನಗೊಂಡಿತು.  ಸಮಾರೋಪ ಭಾಷಣ ಮಾಡಿದ ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಭರತ್‌ಕುಮಾರ್ ಪೊಲಿಪು (Bharath Kumar Polipu), ‘ರಂಗಭೂಮಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಮಾದ್ಯಮ, ಅದು ರಾಷ್ಟ್ರವ್ಯಾಪಿಯಾಗಿ ನಡೆಯಬೇಕು’ ಎಂದರು.   ರಂಗೊತ್ಸವದಲ್ಲಿ ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ (Udyawara Nagesh Kumar)ಇವರಿಗೆ ‘ವನಸುಮ ರಂಗ ಸಮ್ಮಾನ್’, ಸುಮನಸಾ ಕೊಡವೂರು ಅಧ್ಯಕ್ಷ […]

ವನಸುಮ ರಂಗೋತ್ಸವ ೨೦೨೪ -ಸಮಾರೋಪ

ಉಡುಪಿ: ಕಟಪಾಡಿ ವನಸುಮ ವೇದಿಕೆ ಆಯೋಜಿಸಿದ್ದ ಮೂರು ದಿನಗಳ ರಂಗೊತ್ಸವ ಅಂಬಲ್ಪಾಡಿ ಜನಾರ್ದನ ಬಯಲು ರಂಗಮಂದಿರದಲ್ಲಿ ಸಮಾಪನಗೊಂಡಿತು.

 ಸಮಾರೋಪ ಭಾಷಣ ಮಾಡಿದ ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಭರತ್‌ಕುಮಾರ್ ಪೊಲಿಪು (Bharath Kumar Polipu), ‘ರಂಗಭೂಮಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಮಾದ್ಯಮ, ಅದು ರಾಷ್ಟ್ರವ್ಯಾಪಿಯಾಗಿ ನಡೆಯಬೇಕು’ ಎಂದರು.

  ರಂಗೊತ್ಸವದಲ್ಲಿ ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ (Udyawara Nagesh Kumar)ಇವರಿಗೆ ‘ವನಸುಮ ರಂಗ ಸಮ್ಮಾನ್’, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು (Prakash G Kodavooru) ಅವರಿಗೆ ‘ವನಸುಮ ರಂಗಪುರಸ್ಕಾರ್’ ಪ್ರಶಸ್ತಿಗಳನ್ನು ನೀಡಲಾಯಿತು.

 ಯುವ ಸಾಧರಿಗಾಗಿ ನೀಡುವ, ವನಸುಮ ಸಾಧನಾ ಸಿರಿ’ ಪ್ರಶಸ್ತಿಯನ್ನು ಉದಯೋನ್ಮುಖ ಕ್ರಿಕೆಟ್ ತಾರೆ ತೇಜಸ್ವಿನಿ ಉದಯಕುಮಾರ್ ಇವರಿಗೆ ನೀಡಲಾಯಿತು.

 ರಂಗೋತ್ಸವದಲ್ಲಿ ಬಾಸುಮ ಕೊಡಗು (Basuma Kodagu) ನಿರ್ದೇಶನದ ‘ಸುಳಿಯಲ್ಲಿ ಸಿಕ್ಕವರು ನಾಟಕ, ಗುರುರಾಜ್ ಮಾರ್ಪಳ್ಳಿ ನಿರ್ದೇಶನದ ‘ಋತುಪರ್ಣ’ ಯಕ್ಷಗಾನ, ಜೋಸೆಫ್ ನೀನಾಸಂ ನಿರ್ದೇಶನದ ‘ಸ್ವಪ್ನಸಿದ್ದಿ’ ನಾಟಕ ಪ್ರದರ್ಶನಗೊಂಡವು.

Leave a comment

Your email address will not be published. Required fields are marked *

eMedia Kannada  @2025. All Rights Reserved.