• Home  
  • ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಾಮದಪದವಿನಲ್ಲಿ ಪ್ರತಿಭಟನಾ ಸಭೆ, ಪಾದಯಾತ್ರೆ
- ಅಪರಾಧ

ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಾಮದಪದವಿನಲ್ಲಿ ಪ್ರತಿಭಟನಾ ಸಭೆ, ಪಾದಯಾತ್ರೆ

Share: ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಾಮದಪದವಿನಲ್ಲಿ ಪ್ರತಿಭಟನಾ ಸಭೆ, ಪಾದಯಾತ್ರೆ  ಬಂಟ್ವಾಳ : ವಿದ್ಯಾರ್ಥಿನಿ ಸೌಜನ್ಯಾಳನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ವಾಮದಪದವು ಸಮಾನ ಮನಸ್ಕರ ಸೌಜನ್ಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ಜರಗಿತು.ಸೌಜನ್ಯಾ ಸಹೋದರಿ ಸೌಹಾರ್ಧಾ ಮತ್ತು ತಾಯಿ ಕುಸುಮಾವತಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಸಾಮಾಜಿಕ ಕಾರ್ಯಕರ್ತ […]

ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಾಮದಪದವಿನಲ್ಲಿ ಪ್ರತಿಭಟನಾ ಸಭೆ, ಪಾದಯಾತ್ರೆ

 ಬಂಟ್ವಾಳ : ವಿದ್ಯಾರ್ಥಿನಿ ಸೌಜನ್ಯಾಳನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ವಾಮದಪದವು ಸಮಾನ ಮನಸ್ಕರ ಸೌಜನ್ಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ಜರಗಿತು.
ಸೌಜನ್ಯಾ ಸಹೋದರಿ ಸೌಹಾರ್ಧಾ ಮತ್ತು ತಾಯಿ ಕುಸುಮಾವತಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡು ಸತ್ಯ, ಧರ್ಮ, ನ್ಯಾಯದ ಬೀಡು. ತುಳುನಾಡಿನ ದೈವಶಕ್ತಿಗಳು ಸೌಜನ್ಯಾ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡುವುದು ಖಂಡಿತ. ಅಪರಾಧಿಗಳಿಗೆ ಸ್ತ್ರೀ ಶಾಪ ತಟ್ಟುವುದು ನಿಶ್ಚಿತ ಎಂದರು. 

   ಸೌಜನ್ಯಾ ತಾಯಿ ಕುಸುಮಾವತಿ ಅವರು ಮಾತನಾಡಿ, ನನ್ನ ಮಗಳಿಗಾದ ಅನ್ಯಾದ ವಿರುದ್ಧ ಕಳೆದ ೧೧ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ನಮಗೆ ನ್ಯಾಯ ಒದಗಿಸಲು ಸಹಕರಿಸಿ ಎಂದರು.
  ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅನಿಲ್‌ಕುಮಾರ್,  ಹೋರಾಟ ಸಮಿತಿ ಸಂಚಾಲಕ ದೇವೀಪ್ರಸಾದ್ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೌಜನ್ಯಾ ತಾಯಿ ಮತ್ತು  ಕುಟುಂಬ ಹಾಗೂ ಪ್ರತಿಭಟನಕಾರರು ಸೌಜನ್ಯಾ ಅತ್ಯಾಚಾರಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಒದಗಿಸುವಂತೆ ಕೋರಿ ಸಭೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸೌಜನ್ಯಾ ಕುರಿತ ಹಾಡನ್ನು ಪಂಚಮಿ ಹಾಡಿದರು.
ಹೋರಾಟ ಸಮಿತಿಯ ಯತೀಶ್ ಶೆಟ್ಟಿ ವಿಜಯನಗರ ಅವರು ಸ್ವಾಗತಿಸಿದರು.

ಭರತ್ ಕಾವು ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುನ್ನ ವಾಮದಪದವು ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾವಿನಕಟ್ಟೆ ಮೈದಾನದವರೆಗೆ ಘೋಷಣೆಗಳೊಂದಿಗೆ ಪ್ರತಿಭಟನಕಾರರು ಪಾದಯಾತ್ರೆ ನಡೆಸಿದರು. ಬಂಟ್ವಾಳ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಪುಂಜಾಲಕಟ್ಟೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.