ಶಿರ್ವ: ಹಿಂದೂ ಜೂನಿಯರ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಆಯೋಜನೆಯಲ್ಲಿ “ಸಮ್ಮರ್ ಕ್ಯಾಂಪ್ 2025”
(Shirva) ಶಿರ್ವ : ಹಿಂದೂ ಜೂನಿಯರ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಇದರ ಪ್ರಾಯೋಜಕತ್ವದಲ್ಲಿ ನಡೆಸಲ್ಪಡುತ್ತಿರುವ ಎಚ್ ಜೆ ಸಿ ಕ್ರಿಕೆಟ್ ಅಕಾಡೆಮಿಯ “ಸಮ್ಮರ್ ಕ್ಯಾಂಪ್ 2025” ರ ಉದ್ಘಾಟನಾ ಸಮಾರಂಭ ಹಾಗೂ ಶಿಬಿರಾರ್ಥಿಗಳ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಅಕಾಡೆಮಿಯ ಅಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶಿಬಿರಾರ್ಥಿಗಳನ್ನು ಉದ್ದೇಶಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಂಘದ ಗೌರವ ಸಲಹೆಗಾರರಾದ ಶ್ರೀ ರಾಜಗೋಪಾಲ್ ಕೆ, ಸಂಘದ ಅಧ್ಯಕ್ಷ ಶ್ರೀ ರಮಾನಂದ ಶೆಟ್ಟಿಗಾರ್, ಗೌರವ ಸಲಹೆಗಾರ ಶ್ರೀ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ ಅಂಜಾರು ಮನೆ ಶಿಬಿರಾರ್ಥಿಗಳಿಗೆ ಹಿತವಚನದ ನೀಡಿ ಶುಭ ಹಾರೈಸಿದರು.
ಉಡುಪಿಯ ಹಿರಿಯ ಕ್ರಿಕೆಟಿಗರಾದ ಶ್ರೀಧರ್ ಶೆಟ್ಟಿ, ಯಾದವ್ ನಾಯ್ಕ್ ಮತ್ತು ರಮೇಶ್ ಶೇರಿಗಾರ್ ಟೆಸ್ಟ್ ಕ್ರಿಕೆಟ್, ಫಿಟ್ನೆಸ್, ಶಿಸ್ತು ಹಾಗೂ ಇನ್ನಿತರ ಪ್ರಮುಖ ವಿಷಯಗಳ ಮಹತ್ವವನ್ನು ತಿಳಿ ಹೇಳಿದರು.
ನುರಿತ ತರಬೇತುದಾರ ಹಾಗೂ ಅನುಭವಿ ಅಂಪಾಯರ್ ಮೊಹಮ್ಮದ್ ಇಬ್ರಾಹಿಂ ಆತ್ರಾಡಿ ಮಕ್ಕಳೊಂದಿಗೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳಾದ ಸದಾನಂದ ಕೆ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಕುತ್ಯಾರು ಪ್ರಸಾದ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಶಬರಿ ರಾಜೇಶ್ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು ಮಕ್ಕಳನ್ನು ಆಶೀರ್ವದಿಸಿ ಪ್ರೋತ್ಸಾಹಿಸಿದರು.
ಸಹಾಯಕ ಕ್ರಿಕೆಟ್ ತರಬೇತುದಾರರಾದ ಶೇಖರ್, ನಿಶಾಂತ್ ನೊರೋನ್ನ ರಂಗನಪಲ್ಕೆ ಹಾಗೂ ಮಕ್ಕಳ ಪೋಷಕರು ಸಹಕರಿಸಿದರು.
ಅಕಾಡೆಮಿಯ ಮುಖ್ಯ ತರಬೇತುದಾರ ಹಾಗೂ ಸಂಯೋಜಕ ಶ್ರೀ ಸದಾನಂದ ಶಿರ್ವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

