ಶಿವಪುರ: ತನಿಯಜ್ಜ ಮತ್ತು ಮಂತ್ರದೇವತೆ ಟ್ರಸ್ ಆಯೋಜನೆಯಲ್ಲಿ ರಕ್ತದಾನ, ನೇತ್ರ ತಪಾಸಣಾ ಶಿಬಿರ
(Shivapura) ಶಿವಪುರ: ಶಿವಪುರ ತನಿಯಜ್ಜ ಮತ್ತು ಮಂತ್ರದೇವತೆ ಟ್ರಸ್ ಮುಳ್ಳುಗುಡ್ಡೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಸಹಹೋಜನೆಯಲ್ಲಿ ಭಾನುವಾರ ಶ್ರೀ ಕೊರಗಜ್ಜ ಕ್ಷೇತ್ರ ಮುಳ್ಳುಗುಡ್ಡೆ ಹೆಬ್ರಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ನೆರವೇರಿತು.
ಶಿಬಿರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಎಚ್ .ಅಶೋಕ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೊರಗಜ್ಜ ಕ್ಷೇತ್ರ ಮುಳ್ಳುಗುಡ್ಡೆ ಇದರ ಆಡಳಿತ ಮೊಕ್ತೆಸರ ಪುನೀತ್ ಶೆಟ್ಟಿ ಹೆಬ್ರಿ, , ರಕ್ತನಿಧಿ ವಿಭಾಗ ಜಿಲ್ಲಾ ಆಸ್ಪತ್ರೆಯ ಡಾ. ಮಂಜುಶ್ರೀ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌ನ ರೋಷನ್ ಶೆಟ್ಟಿ ಕುಚ್ಚೂರು, ಸಂತೋಷ್ ಆಚಾರ್ಯ ಕಡ್ತಲ, ಶೇಖರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 94 ಯೂನಿಟ್ ರಕ್ತವನ್ನು ಸಂಗ್ರಹಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ನೀಡಲಾಯಿತು.

