ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಂಡರಿನಾಥ ಭಜನಾ ಮಂದಿರದ ಸಭಾ ಭವನಕ್ಕೆ ಸಹಾಯ ಹಸ್ತ
ಮಂಜೂರಾತಿ ಪತ್ರ ಹಸ್ತಾಂತರಿಸಿದ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ
(Katapadi) ಕಟಪಾಡಿ: ಕಟಪಾಡಿ ಕೋಟೆ ಶ್ರೀ ಪಂಡರಿನಾಥ ಭಜನಾ ಮಂದಿರದ ಶ್ರೀ ನಾಗ ಬ್ರಹ್ಮಾದಿ ಪಂಚ ದೈವಿಕ ಸನ್ನಿಧಿಯಲ್ಲಿ ಸಭಾ ಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂ. ಸಹಾಯ ಧನದ ಮಂಜೂರಾತಿ ಪತ್ರ ವಿತರಣೆ ಭಾನುವಾರ ಸಂಜೆ ನೆರವೇರಿತು.
ಪಂಡರಿನಾಥ ಭಜನಾ ಮಂದಿರದ ಸಮಿತಿ ಅಧ್ಯಕ್ಷ ಮಧುಕರ ಮತ್ತು ಸಮಿತಿ ಪದಾಧಿಕಾರಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮಂಜೂರಾತಿ ಪತ್ರ ಹಸ್ತಾಂತರಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾ ಜನಜಾಗೃತಿಯ ಸದಸ್ಯ ಸತ್ಯೇಂದ್ರ ಪೈ, ಕುಮುದ ಒಕ್ಕೂಟದ ಅಧ್ಯಕ್ಷೆ ಅಶ್ವಿನಿ, ಸೇವಾ ಪ್ರತಿನಿಧಿ ಮಾಲತಿ ಉಪಸ್ಥಿತರಿದ್ದರು.

