ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತೆಂಕ ಕೇಂದ್ರದಲ್ಲಿ ಡಿಜಿ ಪೇ ಗೆ ಚಾಲನೆ
ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರಿಂದ ಮಾಹಿತಿ
(Thenka Yermal) ಎರ್ಮಾಳು ತೆಂಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಪಡುಬಿದ್ರಿ ಕಾರ್ಯಕ್ಷೇತ್ರದ ತೆಂಕ ಕೇಂದ್ರದಲ್ಲಿ ಸೋಮವಾರ ಡಿಜಿ ಪೇ ಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು.
ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುರೇಖಾರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮಾತನಾಡಿ, ಯೋಜನೆಯ ಹಲವಾರು ಜನಪರ ಕಾರ್ಯಕ್ರಮದ ಜೊತೆಗೆ Digipay ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು ಈ ಸೇವೆಯ ಮೂಲಕ ಸದಸ್ಯರು ಹಾಗೂ ಜನಸಾಮಾನ್ಯರು ತಮ್ಮ ಎಟಿಎಂ ಕಾರ್ಡ್ ಹಾಗೂ AEPS (ಆಧಾರ್ ) ಮೂಲಕ cash withdraw, mini statement ಮತ್ತು balance enquiry ಮುಂತಾದ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ.
ಗ್ರಾಮೀಣ ಭಾಗದ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಕಾಪು ತಾಲೂಕಿನಾದ್ಯಂತ 32 ಕೇಂದ್ರಗಳಲ್ಲಿ ಡಿಜಿ ಪೇ ಯೋಜನೆ ಜಾರಿಗೆ ತಂದಿದ್ದು, ಜನಸಾಮಾನ್ಯರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.
ಫಲಾನುಭವಿಗಳಿಗೆ ಎಟಿಎಂ ಮೂಲಕ ನಗದು ವಿತ್ ಡ್ರಾ ನೀಡುವ ಮೂಲಕ ಡಿಜಿ ಪೇ ಸೇವೆಗೆ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ತೆಂಕ ಒಕ್ಕೂಟದ ಅಧ್ಯಕ್ಷೆ ಸುಮನಾ ಕಿಶೋರ್, ಉಪಾಧ್ಯಕ್ಷರಾದ ಮಮತಾ, ವಲಯದ ಮೇಲ್ವಿಚಾರಕರಾದ ಸರಿತಾ, ಸಿಎಸ್‌ಸಿ ಸೇವಾದಾರರಾದ ಕವಿತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ತಾಲೂಕಾ ನೋಡೆಲ್ ಅಧಿಕಾರಿಗಳಾದ ಶಿವಾನಂದ ನಿರೂಪಿಸಿದರು.
ಸೇವಾಪ್ರತಿನಿಧಿ ಕುಸುಮ ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ಸರಿತಾ ಧನ್ಯವಾದ ಸಲ್ಲಿಸಿದರು.

