• Home  
  • ಶ್ರೀ ಕ್ಷೇತ್ರ ಪೊಳಲಿಯಲ್ಲಿ ತೆನೆಹಬ್ಬ (ಪುದ್ದರ್) ಸಂಭ್ರಮ
- ಕರಾವಳಿ - ಜೀವನಶೈಲಿ

ಶ್ರೀ ಕ್ಷೇತ್ರ ಪೊಳಲಿಯಲ್ಲಿ ತೆನೆಹಬ್ಬ (ಪುದ್ದರ್) ಸಂಭ್ರಮ

Share: ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ತೆನೆಹಬ್ಬ (ಪುದ್ದರ್) ಸಂಭ್ರಮ ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ “ತೆನೆಹಬ್ಬ” ಸಂಭ್ರಮದಿಂದ ಆಚರಿಸಲಾಯಿತು.  ಭಕ್ತಾದಿಗಳು ಬೆಳಗ್ಗೆ ಸಾವಿರ ಸೀಮೆಯ ಒಡತಿಯ ಸನ್ನಿಧಿಯಲ್ಲಿ ಬಂದು ದೇವಿಗೆ ಅರ್ಪಣೆ ಮಾಡಲಾದ ತೆನೆಯನ್ನು  ದೇವಳದಿಂದ ಮನೆಗೆ ಕೊಂಡೊಯ್ದು ಪುದ್ದರ್ ಆಚರಣೆ ಮಾಡುವ ಪದ್ಧತಿ ಹಿಂದಿನಿಂದಲು ಬಂದ ಸಾಂಪ್ರದಾಯವಾಗಿದೆ. ತಾವು ಬೆಳೆದ ಬೆಳೆಯ ಮೊದಲ ಫಸಲನ್ನು ತಾಯಿಗೆ ಅರ್ಪಿಸುವ ಮೂಲಕ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಂಪ್ರದಾಯ ಹಿರಿಯರ ಕಾಲದಿಂದಲು  ಬಂದಂತಹ ಆಚರಣೆ. […]

ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ತೆನೆಹಬ್ಬ (ಪುದ್ದರ್) ಸಂಭ್ರಮ

ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ “ತೆನೆಹಬ್ಬ” ಸಂಭ್ರಮದಿಂದ ಆಚರಿಸಲಾಯಿತು.

 
ಭಕ್ತಾದಿಗಳು ಬೆಳಗ್ಗೆ ಸಾವಿರ ಸೀಮೆಯ ಒಡತಿಯ ಸನ್ನಿಧಿಯಲ್ಲಿ ಬಂದು ದೇವಿಗೆ ಅರ್ಪಣೆ ಮಾಡಲಾದ ತೆನೆಯನ್ನು  ದೇವಳದಿಂದ ಮನೆಗೆ ಕೊಂಡೊಯ್ದು ಪುದ್ದರ್ ಆಚರಣೆ ಮಾಡುವ ಪದ್ಧತಿ ಹಿಂದಿನಿಂದಲು ಬಂದ ಸಾಂಪ್ರದಾಯವಾಗಿದೆ.


ತಾವು ಬೆಳೆದ ಬೆಳೆಯ ಮೊದಲ ಫಸಲನ್ನು ತಾಯಿಗೆ ಅರ್ಪಿಸುವ ಮೂಲಕ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಂಪ್ರದಾಯ ಹಿರಿಯರ ಕಾಲದಿಂದಲು  ಬಂದಂತಹ ಆಚರಣೆ. ಧನ್ಯತಾ ಭಾವನೆಯಿಂದ  ತಾಯಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ತೆನೆಯನ್ನು ಸಮರ್ಪಿಸುತ್ತಾರೆ.


ದೇವಳದ ಹೊರಾಂಗಣದಲ್ಲಿ ಧ್ವಜಸ್ತಂಭದ ಬುಡದಲ್ಲಿ ತೆನೆಯನ್ನು  ಇಡಲಾಗುತ್ತದೆ. ಬಳಿಕ ದೇವರ ಬಲಿ ಉತ್ಸವ ನಡೆಸುವ ಬ್ರಹ್ಮವಾಹಕ ಶಿರದಲ್ಲಿ ಹೊತ್ತು ದೇವಳದ ಸುತ್ತ ಪ್ರದಕ್ಷಿಣೆ ಬಂದು ತಾಯಿ ರಾಜರಾಜೇಶ್ವರಿಯ ಮಡಿಲಿನಲ್ಲಿರಿಸಿ ಪೂಜೆ ನೆರವೇರಿಸಲಾಗುತ್ತದೆ.

ದೇವಿ ಅನುಗ್ರಹಿಸಿದ ತೆನೆಯನ್ನು ಮನೆ ಹಾಗೂ ಊರಿನಲ್ಲಿ ಸುಖ,ಶಾಂತಿ,ನೆಮ್ಮದಿ,ಸಮೃದ್ಧಿ ಹಾಗೂ ತಾಯಿಯ ಕರುಣಾ ದೃಷ್ಟಿ ಸದಾ ನೆಲೆಸಲಿ ಎಂದು ಪ್ರಾರ್ಥಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.


ಹೊಸ ಫಸಲಿನಿಂದ ತಯಾರಿಸಲಾದದ ನೈವೇದ್ಯವನ್ನು ಶ್ರೀದೇವಿಗೆ ಅರ್ಪಿಸುವುದು ಹಾಗೇ  ಭಕ್ತಾದಿಗಳಿಗೆ ಹಂಚಿದ ತೆನೆಯನ್ನು  ಮನೆಯ ಹೊಸ್ತಿಲು, ದೇವರ ಮನೆಗೆ ಕಟ್ಟಿ ಅದರಲ್ಲೆ ಉಳಿದ ಭತ್ತವನ್ನು ಕೈಯಲ್ಲೆ ಬಿಡಿಸಿ ಬೇಯಿಸಿದ ಹೊಸ ಅಕ್ಕಿ ಅನ್ನವನ್ನು ಪ್ರಸಾದವೆಂದು ಸ್ವೀಕರಿಸುವುದು ತುಳುನಾಡಿನ ವಿಶೇಷವಾಗಿದೆ.


ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್, ದೇವಳದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ್ ಭಟ್, ಪರಮೇಶ್ವರ ಭಟ್ ದೇವಳದ ಅರ್ಚಕರಾದ ಅನಂತ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.