ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಾರಾಯಣ ಗುರು ಧ್ವಜಸ್ತಂಭ ಉದ್ಘಾಟನೆ
(Udyavara) ಉದ್ಯಾವರ : ನಾರಾಯಣ ಗುರುಗಳ ತತ್ವ ಸಂದೇಶ ಸಾರುವ ಬ್ರಹ್ಮ ಶ್ರೀ ನಾರಾಯಣ ಧ್ವಜಸ್ತಂಭದ ಧ್ವಜಾರೋಹಣ ಕಾರ್ಯಕ್ರಮವನ್ನು ರಾಷ್ಟ್ರೀಯ ಬಿಲ್ಲವ ಮಹಿಳಾ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ ನೆರವೇರಿಸಿದರು.
ಶ್ರೀ ನಾರಾಯಣ ಗುರುಗಳ ಆದರ್ಶ, ಸರ್ವ ಧರ್ಮಗಳ ಬಗ್ಗೆ ಅವರ ಕಾಳಜಿ, ಕೆಳ ವರ್ಗದ ಜನರ ಬಗ್ಗೆ ಅವರಿಗಿದ್ದ ದೂರಗಾಮಿ ಆಲೋಚನೆಗಳಿಂದ ಇಂದು ನಮ್ಮಂತಹಾ ಹಿಂದುಳಿದ ವರ್ಗ ಗೌರವದಿಂದ ಬಾಳುವಂತೆ ಮಾಡಿದೆ ಎಂದು ಗೀತಾಂಜಲಿ ಸುವರ್ಣ ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಾಮನ ಬಂಗೇರ ಮಾತಾನಾಡಿ, ಶ್ರೀ ನಾರಾಯಣ ಗುರು ಯುವ ವೇದಿಕೆಯಿಂದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಮಾಜ ಮುಖಿ ಕೆಲಸ ನಾರಾಯಣ ಗುರುಗಳ ಆಶಯಕ್ಕೆ ಪೂರಕವಾಗಿದೆ. ಇದರಿಂದ ನಾರಾಯಣ ಗುರುಗಳ ಸಂದೇಶವನ್ನು ನಾವು ಅನುಸರಿಸಿದಂತೆ ಆಗುತ್ತದೆ ಎಂದು ಶುಭ ಹಾರೈಸಿದರು.
ಈ ಸಂದರ್ಭ ಶ್ರೀ ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಗಿರೀಶ್ ಕುಮಾರ್ ಉದ್ಯಾವರ, ರಾಘು ಸನಿಲ್, ರಿಯಾಝ್ ಪಳ್ಳಿ, ದಿವಾಕರ್ ಬೊಳ್ಜೆ, ಸಚಿನ್ ಬೊಳ್ಜೆ, ಸಾಯಿನಾಥ್ ಉದ್ಯಾವರ, ಹರೀಶ್ ಪೂಜಾರಿ ಏಣಗುಡ್ಡೆ, ಸತೀಶ್ ಪೂಜಾರಿ ಬೀರಪ್ಪಾಡಿ, ರೊಯ್ಸ್ ಫೆರ್ನಾಂಡಿಸ್, ಸುಹೈಲ್ ಅಬ್ಬಾಸ್, ದಿನೇಶ್ ಪೂಜಾರಿ, ಸುಪ್ರೀತ್ ಸುವರ್ಣ, ಕಿಶೋರ್ ಕುಮಾರ್, ಗುಣಕರ್ ಸನಿಲ್, ಪ್ರಕಾಶ್ ಬಂಗೇರ, ಜಯ ಪೂಜಾರಿ, ಹರೀಶ್, ಕೇಶವ ಸನಿಲ್ ಮುಂತಾದವರು ಉಪಸ್ಥಿತರಿದ್ದರು.

