ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ ಅಕ್ಟೋಬರ್ 3ರಿಂದ 12ರವರೆಗೆ “ಉಡುಪಿ ಉಚ್ಚಿಲ ದಸರಾ–2024“
(Uchila) ಉಚ್ಚಿಲ : ದೇಶ ವಿದೇಶಗಳ ಭಕ್ತಾಭಿಮಾನಿಗಳ ಶ್ರದ್ಧಾ ಭÀಕ್ತಿಯ ಕೇಂದ್ರವಾಗಿರುವ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳೆದ 2 ವರ್ಷಗಳಲ್ಲಿ ಆಯೋಜನೆ ಮಾಡಲಾದ ದಸರಾ ಮಹೋತ್ಸವವು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಈ ವರ್ಷ 3ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರ ಸಹಯೋಗದೊಂದಿಗೆ “ಉಡುಪಿ ಉಚ್ಚಿಲ ದಸರಾ-2024” ಅಕ್ಟೋಬರ್ 3ರಿಂದ 12ರವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದೆ. ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಶಾಸ್ತೊಕ್ತವಾಗಿ ಪೂಜಿಸಲಾಗುವುದು ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ. ಶಂಕರ್ ಹೇಳಿದರು.
ಉಚ್ಚಿಲ ದೇವಳದ ಮೊಗವೀರ ಭವನದಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಉತ್ಸವದ ಸಮಗ್ರ ಮಾಹಿತಿ ನೀಡಿದರು.
ವಿದ್ಯುದ್ದೀಪಾಲಂಕಾರ ಉದ್ಘಾಟನೆ : ಅಕ್ಟೋಬರ್ 2 ಬುಧವಾರ ಸಂಜೆ 6-30ಗಂಟೆಗೆ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದ ದೀಪಸ್ಥಂಭದವರೆಗೆ ಎಮ್‌ಆರ್‌ಜಿ ಗ್ರೂಪ್‌ನ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿಯವರ ಪ್ರಾಯೋಜಕತ್ವದ ವಿದುದ್ದೀಪಾಲಂಕಾರದ ಉದ್ಘಾಟನಾ ಸಮಾರಂಭÀ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
ವಿಗ್ರಹಗಳ ಪ್ರತಿಷ್ಠಾಪನೆ: ಅ.3 ಗುರುವಾರ ಬೆಳಿಗ್ಗೆ ಗಂಟೆ 9ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು.
ಉಡುಪಿ ಉಚ್ಚಿಲ ದಸರಾ–2024 ಉದ್ಘಾಟನೆ : ಅ.3ರ ಬೆಳಿಗ್ಗೆ 10 ಗಂಟೆಗೆ ಉಡುಪಿ ಉಚ್ಚಿಲ ದಸರಾ-2024ರ ಉದ್ಘಾಟನೆಯು ಗಣ್ಯರು, ದಾನಿಗಳು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಲಿದೆ.
ವಿವಿಧ ಮೇಳ ಹಾಗೂ ವಸ್ತುಪ್ರದರ್ಶನಗಳ ಉದ್ಘಾಟನೆ: ಅ.3 ಬೆಳಿಗ್ಗೆ 10-30ಕ್ಕೆ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆ ನಡೆಯಲಿದೆ. ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭ ಮಾಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ: ಅ.3 ಸಂಜೆ 5 ಗಂಟೆಗೆ ದಸರಾ ಉತ್ಸವದ ಪ್ರಯುಕ್ತ 10 ದಿನಗಳವರೆಗೂ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ಶರನ್ನವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು:
ಪ್ರತೀದಿನ ಬೆಳಿಗ್ಗೆ ಗಂಟೆ 9ರಿಂದ 12ರವರೆಗೆ ಚಂಡಿಕಾಹೋಮ, ಮಧ್ಯಾಹ್ನ ಗಂಟೆ 12ರಿಂದ 3ಗಂಟೆವರೆಗೆ ಅನ್ನಸಂತರ್ಪಣೆ, ಸಂಜೆ ಗಂಟೆ 7ರಿಂದ ಭಕ್ತರಿಗೆ ಲಘು ಉಪಾಹಾರ, ಸಂಜೆ ಗಂಟೆ 5-45 ರಿಂದ 6-15ರವರೆಗೆ ಸುಮಂಗಲೆಯರಿAದ ಸಾಮೂಹಿಕ ಕುಂಕುಮಾರ್ಚನೆ, ಪ್ರತೀದಿನ ಬೆಳಿಗ್ಗೆ ಗಂಟೆ 9-30ರಿಂದ ಭಜನಾ ಕಾರ್ಯಕ್ರಮ, ಪ್ರತೀದಿನ ಸಂಜೆ ಗಂಟೆ 5ರಿಂದ 5-45 ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತೀದಿನ ರಾತ್ರಿ ಗಂಟೆ 8-30 ರಿಂದ ಕಲ್ಪೋಕ್ತ ಪೂಜೆ ನಡೆಯಲಿದೆ.
ಅ.12 ಶನಿವಾರ ವಿಜಯದಶಮಿಯಂದು ಸಾಮೂಹಿಕ ಮಹಾಚಂಡಿಕಾ ಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ.
ಪ್ರತೀದಿನ ಸಂಜೆ ಗಂಟೆ 8ರಿಂದ 8-10ರ ತನಕ ದಸರಾ ಮಹೋತ್ಸವದ ಮಹತ್ವದ ಬಗ್ಗೆ ವಿಶೇಷ ಲೇಸರ್ ಶೋ ಹಮ್ಮಿಕೊಳ್ಳಲಾಗಿದೆ.
ದಸರಾ ಉತ್ಸವದ ಪ್ರಯುಕ್ತ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು:
ದಿನಾಂಕ: ಅ.3 ಗುರುವಾರ ಸಂಜೆ ಗಂಟೆ 6-30ರಿಂದ ಆಡಿಷನ್ ಸುತ್ತಿನಲ್ಲಿ ಆಯ್ಕೆಯಾದ ನೃತ್ಯ ತಂಡಗಳ ನೃತ್ಯ ಸ್ಪರ್ಧೆ, ಅ.4 ಶುಕ್ರವಾರ ಸಂಜೆ ಗಂಟೆ 6-30ರಿಂದ ಸ್ಥಳೀಯ ಮಹಿಳೆಯರಿಂದ ವಿವಿಧÀ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ಲೈವ್ ಹಿನ್ನಲೆ ಸಂಗೀತ ವಾದನದೊಂದಿಗೆ ನಾಟ್ಯ ನಿಲಯಂ ಮಂಜೇಶ್ವರ ತಂಡದವರಿAದ ನೃತ್ಯ ವೈವಿಧ್ಯ, ಅ.5 ಶನಿವಾರ ಸಂಜೆ ಗಂಟೆ 6-15ರಿಂದ 7-30ರ ತನಕ ಉಡುಪಿ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ ಕುಣಿತ ಭಜನಾ ತಂಡಗಳಿAದ ಏಕಕಾಲದಲ್ಲಿ ಶ್ರೀ ಕ್ಷೇತ್ರದ ರಥಬೀದಿಯ ಸುತ್ತ ಸಾಮೂಹಿಕ ಭಜನಾ ಕುಣಿತ ಕಾರ್ಯಕ್ರಮ, ರಾತ್ರಿ ಗಂಟೆ 7-30ರಿಂದ 8-30ರ ತನಕ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಸದಸ್ಯರಿಂದ ಸಾಂಸ್ಕೃತಿಕ ಕಾಯಕ್ರಮ, ರಾತ್ರಿ 8-30ರಿಂದ ಗುರು ಶ್ರೀಮತಿ ಕೌಸಲ್ಯ ನಿವಾಸ್ ಮತ್ತು ಬಳಗ, ಎಮ್. ಎಸ್. ನಾಟ್ಯಕ್ಷೇತ್ರ, ಬೆಂಗಳೂರು ಇವರಿಂದ “ಶ್ರೀ ರಾಮ ಹನುಮಂತ” ನೃತ್ಯ ರೂಪಕ, ಅ.6 ಭಾನುವಾರ ಸಂಜೆ ಗಂಟೆ 6-30 ರಿಂದ 8ರ ತನಕ ಶ್ರೀ ಕ್ಷೇತ್ರದ ರಥಬೀದಿಯ ಸುತ್ತ ಸಾರ್ವಜನಿಕರಿಂದ ಸಾಮೂಹಿಕ ದಾಂಡಿಯಾ ನೃತ್ಯ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ಇಂಡಿಯಾ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಬಿಗ್ ಬಾಸ್ ಕನ್ನಡ ವಿಶೇಷ ಆಹ್ವಾನಿತ ಕಲಾವಿದ- ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಇವರಿಂದ ಅಚ್ಚರಿ- ಹಾಸ್ಯ- ಮನರಂಜನೆಯ ಮ್ಯಾಜಿಕ್ ಪ್ರದರ್ಶನ “ವಿಸ್ಮಯ ಜಾದೂ”, ಅ.7 ಸೋಮವಾರ ಸಂಜೆ ಗಂಟೆ 4ರಿಂದ 5ರ ತನಕ ವಿದುಷಿ ಪವನ ಬಿ. ಆಚಾರ್ ಮಣಿಪಾಲ ಇವರಿಂದ ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ ಕಾರ್ಯಕ್ರಮ “ಶತವೀಣಾವಲ್ಲರಿ”, ಸಂಜೆ ಗಂಟೆ 6-30ರಿಂದ 8ರ ತನಕ ಸ್ಥಳೀಯ ಮಹಿಳೆಯರಿಂದ ವಿವಿಧÀ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ಕು. ಜ್ಞಾನ ಐತಾಳ್ ನೇತೃತ್ವದ ಮಕ್ಕಳ ಸಾಂಸ್ಕೃತಿಕ ತಂಡ, “ಹೆಜ್ಜೆನಾದ” ಮಂಗಳೂರು ಇವರಿಂದ ನೃತ್ಯ ಕಾರ್ಯಕ್ರಮ, ಅ.8 ಮಂಗಳವಾರ ಸಂಜೆ ಗಂಟೆ 6-30ರಿಂದ 8ರ ತನಕ ಸ್ಥಳೀಯ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ 10-30ರ ತನಕ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ನೇತೃತ್ವದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಯಕ್ಷ ಕಲಾ ತಂಡ ಇವರಿಂದ ಯಕ್ಷಗಾನ ಪ್ರಸಂಗ ಚಕ್ರ ಚಂಡಿಕೆ, ಅ.೯ ಬುಧವಾರ ಮಧ್ಯಾಹ್ನ ಗಂಟೆ 2ರಿಂದ 3-30ರ ತನಕ ಯಶಸ್ವಿನಿ ಉಳ್ಳಾಲ್‌ರವರಿಂದ “ಗಾನ ಲಹರಿ” ಕಾರ್ಯಕ್ರಮ, ಸಂಜೆ ಗಂಟೆ 6-30ರಿಂದ 8ರ ತನಕ ಸ್ಥಳೀಯ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ಶ್ರೀ ದೇವಿ ನೃತ್ಯಾರಾಧನ ಕಲಾಕೇಂದ್ರ ಪುತ್ತೂರು ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಶಿಷ್ಯೆಯರಿಂದ “ನೃತ್ಯ ರಂಜನಿ”, ಅ.10 ಗುರುವಾರ ಸಂಜೆ ಗಂಟೆ 6-30ರಿಂದ 7-30ರ ತನಕ ಖ್ಯಾತ ಕೀರ್ತನಕಾರ ಡಾ. ಎಸ್. ಪಿ ಗುರುದಾಸ್, ಮಂಗಳೂರು ಇವರಿಂದ ಹರಿಕಥಾ ಸತ್ಸಂಗ ಲಕ್ಷ್ಮೀ ಕಲ್ಯಾಣ”, ಅ.11 ಶುಕ್ರವಾರ ಸಂಜೆ ಗಂಟೆ 6-30ರಿಂದ 7-30ರ ತನಕ ಕಲಾಮೃತ ತಂಡ, ಮಂಗಳೂರು ಇವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ 10-30ರ ತನಕ ಹಿನ್ನಲೆ ಗಾಯಕ ಅಜಯ್ ವಾರಿಯರ್ ಮತ್ತು ತಂಡ, ಬೆಂಗಳೂರು ಭಕ್ತಿ ಗೀತೆ, ಸುಗಮ ಸಂಗೀತ, ಹಳೆಯ ಚಲನಚಿತ್ರಗಳ ಹಾಡುಗಳ ಗಾಯನ – ಸಂಗೀತ ರಸಸಂಜೆ ಕಾರ್ಯಕ್ರಮ, ಅ.12 ಶನಿವಾರ ಬೆಳಿಗ್ಗೆ ಗಂಟೆ 11-30ರಿಂದ ವಿದುಷಿ ಡಾ. ಸುಚಿತ್ರ ಹೊಳ್ಳ ಪುತ್ತೂರು ಇವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 2-30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ.
ಮಧ್ಯಾಹ್ನ 4 ಗಂಟೆಗೆ ಶೋಭಾಯಾತ್ರೆ: ಶ್ರೀ ಕ್ಷೇತ್ರದಿಂದ ಸಂಜೆ ಗಂಟೆ 4ಕ್ಕೆ ಶೋಭಾಯಾತ್ರೆಯು ವಿವಿಧ ಟ್ಯಾಬ್ಲೋ, ಭಜನಾ ತಂಡಗಳ ಸಹಿತ ಹೊರಟು ಎರ್ಮಾಳ್ ತನಕ ರಾಷ್ಟಿçÃಯ ಹೆದ್ದಾರಿ-66ರಲ್ಲಿ ಸಾಗಿ ಅಲ್ಲಿಂದ ತಿರುಗಿ ರಾಷ್ಟಿçÃಯ ಹೆದ್ದಾರಿಯ ಮೂಲಕ ಉಚ್ಚಿಲ-ಮೂಳೂರು, ಕೊಪ್ಪಲಂಗಡಿಯವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ವಿಸರ್ಜನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಬೋಟುಗಳಿಂದ ಸಮುದ್ರ ಮಧ್ಯೆ ಭವ್ಯವಾದ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸುಮಂಗಲೆಯವರಿAದ ಸಾಮೂಹಿಕ ಮಂಗಳಾರತಿ, ಅರ್ಚಕರಿಂದ ನವದುರ್ಗೆಯ, ಶ್ರೀ ಶಾರದಾಮಾತೆ ಹಾಗೂ ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ದಸರಾ ಉತ್ಸವದ ಪ್ರಯುಕ್ತ ನಡೆಯುವ ಸ್ಪರ್ಧೆಗಳು: ಅಕ್ಟೋಬರ್ 3 ಗುರುವಾರ ಸಂಜೆ ಗಂಟೆ 6-30ರಿಂದ ಆಡಿಷನ್ ರೌಂಡ್‌ನಲ್ಲಿ ಆಯ್ಕೆಯಾದ ತಂಡಗಳಿಗೆ ನೃತ್ಯ ಸ್ಪರ್ಧೆ -2024, ಅ.5 ಶನಿವಾರ ಬೆಳಿಗ್ಗೆ ಗಂಟೆ 10-30ರಿಂದ 1-30ರ ತನಕ ಮುದ್ದು ಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ(ವಯೋಮಿತಿ :3 ವರ್ಷದಿಂದ 9 ವರ್ಷ), ಮದ್ಯಾಹ್ನ ಗಂಟೆ 2ರಿಂದ 5ರ ತನಕ ಉಡುಪಿ ಮಹಾಲಕ್ಷ್ಮೀ ಕೊ-ಓಪ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಮೊಗವೀರ ಭವನದಲ್ಲಿ ಚಿತ್ರಕಲಾ ಸ್ಪರ್ಧೆ, ಅ.6 ಭಾನುವಾರ ಬೆಳಿಗ್ಗೆ ಗಂಟೆ 8ರಿಂದ ಉಚ್ಚಿಲ ಸರಸ್ವತಿ ಮಂದಿರ ಪ್ರಾಥಮಿಕ ಶಾಲೆಯ ಆಟದ ಮೈದಾನ (ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಸ್ಪರ್ಧೆ) ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗ, ಮದ್ಯಾಹ್ನ ಗಂಟೆ 2ರಿಂದ 5ರ ತನಕ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಹೆಣ್ಣುಮಕ್ಕಳ ಹುಲಿ ಕುಣಿತ ಸ್ಪರ್ಧೆ, ಅ.7 ಸೋಮವಾರ ಮಧ್ಯಾಹ್ನ ಗಂಟೆ 3ರಿಂದ 5 ತನಕ ಮೊಗವೀರ ಭವನದಲ್ಲಿ ರಂಗೋಲಿ ಸ್ಪರ್ಧೆ (ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗ), ಅ.10 ಗುರುವಾರ ರಾತ್ರಿ ಗಂಟೆ 7-30ರಿಂದ ದೇಹದಾಡ್ಯ ಸ್ಪರ್ಧೆ (ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆ) ನಡೆಯಲಿದೆ ಎಂದು ಜಿ ಶಂಕರ್ ಹೇಳಿದರು..
ಸುದ್ದಿಗೋಷ್ಠಿಯಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಎಸ್.ಸುವರ್ಣ, ದಸರಾ ಉತ್ಸವ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಎಸ್. ಸಾಲ್ಯಾನ್ ಉಪಸ್ಥಿತರಿದ್ದರು.
ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ವಂದಿಸಿದರು.

