• Home  
  • ಸಾವಂತ್ ಸಾವು ಪ್ರಕರಣ: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರಿಂದ ಎಸ್ಪಿಗೆ ಮನವಿ (Sawanth death case: Congress members appeal to SP demanding investigation)
- ಅಪರಾಧ

ಸಾವಂತ್ ಸಾವು ಪ್ರಕರಣ: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರಿಂದ ಎಸ್ಪಿಗೆ ಮನವಿ (Sawanth death case: Congress members appeal to SP demanding investigation)

Share: ಸಾವಂತ್ ಸಾವು ಪ್ರಕರಣ: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರಿಂದ ಎಸ್ಪಿಗೆ ಮನವಿ (Banrwala) ಬಂಟ್ವಾಳ:ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಪದ್ಮನಾಭ ಸೇವಂತ ( ಸಾವಂತ್) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿದ್ದು, ಈ ಬಗ್ಗೆ  ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ (EX Minister Ramanath rai) ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷಿಕೇಶ್ (DK SP Rishikesh) […]

ಸಾವಂತ್ ಸಾವು ಪ್ರಕರಣ: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರಿಂದ ಎಸ್ಪಿಗೆ ಮನವಿ

(Banrwala) ಬಂಟ್ವಾಳ:ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಪದ್ಮನಾಭ ಸೇವಂತ ( ಸಾವಂತ್) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿದ್ದು, ಈ ಬಗ್ಗೆ  ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ (EX Minister Ramanath rai) ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷಿಕೇಶ್ (DK SP Rishikesh) ಅವರಿಗೆ ಮನವಿ ಸಲ್ಲಿಸಿತು.
 ಪದ್ಮನಾಭ ಸಾಮಂತ್ ರವರ ಮೃತ ದೇಹ ಮಾ. 31 ರಂದು ಅವರ ಮನೆ‌ ಸಮೀಪದ ನಿರ್ಜನ ಗುಡ್ಡ ಪ್ರದೇಶದಲ್ಲಿನ ಮರವೊಂದಕ್ಕೆ‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ  ಅನುಮಾನಗಳಿದ್ದು, ಈ ಬಗ್ಗೆ ಸೂಕ್ತ ತನಿಖೆ‌ ನಡೆಸಿ‌ ಕುಟುಂಬಸ್ಥರಿಗೆ ನ್ಯಾಯ‌ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪದ್ಮನಾಭ ಸಾಮಂತ್‌ರವರು  ಆರ್ ಟಿಐ ಕಾರ್ಯಕರ್ತನಾಗಿದ್ದು, ಹಲವಾರು ಭ್ರಷ್ಟಚಾರ, ಅಕ್ರಮ, ಅನ್ಯಾಯಗಳ ವಿರುದ್ದ ಹೋರಾಟ ನಡೆಸುತ್ತಿದ್ದು, ಅವರಿಗೆ ಜೀವ ಬೆದರಿಕೆಯು ಇತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
 ನಿಯೋಗದಲ್ಲಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ರೊಡ್ರಿಗಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಎಂ. ಎಸ್ ಮೊಹಮ್ಮದ್, ಅಬ್ಬಾಸ್ ಅಲಿ, ನಾರಾಯಣ ನಾಯ್ಕ್, ಪ್ರಶಾಂತ್ ಕುಲಾಲ್, ಸುರೇಶ್ ನಾವೂರ, ಉಮಾಕರ್ ಬಂಗೇರ, ಪ್ರವೀಣ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.