• Home  
  • ಸಿಡಿಲಾಘಾತಕ್ಕೆ ಮೃತಪಟ್ಟ ರಕ್ಷಿತ್ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ (EX Minister Sorake visited Rakshith’s house who died due to lightning)
- ಅಪಘಾತ

ಸಿಡಿಲಾಘಾತಕ್ಕೆ ಮೃತಪಟ್ಟ ರಕ್ಷಿತ್ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ (EX Minister Sorake visited Rakshith’s house who died due to lightning)

Share: ಸಿಡಿಲಾಘಾತಕ್ಕೆ ಮೃತಪಟ್ಟ ರಕ್ಷಿತ್ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ  (Shirva) ಶಿರ್ವ : ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ, ಶಿರ್ವ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿಯವರ ಪುತ್ರ ರಕ್ಷಿತ್ ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆಯಲ್ಲಿ ಸಿಡಿಲು ಬಡಿತು ಮೃತಪಟ್ಟಿದ್ದು, ಅವರ ನಿವಾಸಕ್ಕೆ ಶನಿವಾರ ಸಂಜೆ ಮಾಜಿ ಸಚಿವ ವಿನಯಕುಮಾ‌ರ್ ಸೊರಕೆಯವರು ಭೇಟಿ ನೀಡಿ ಸಾಂತ್ವಾನ ಹೇಳಿದರು.  ರಕ್ಷಿತ್ ಅವರ ತಂದೆ ರಮೇಶ ಪೂಜಾರಿ, […]

ಸಿಡಿಲಾಘಾತಕ್ಕೆ ಮೃತಪಟ್ಟ ರಕ್ಷಿತ್ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ

 (Shirva) ಶಿರ್ವ : ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ, ಶಿರ್ವ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿಯವರ ಪುತ್ರ ರಕ್ಷಿತ್ ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆಯಲ್ಲಿ ಸಿಡಿಲು ಬಡಿತು ಮೃತಪಟ್ಟಿದ್ದು, ಅವರ ನಿವಾಸಕ್ಕೆ ಶನಿವಾರ ಸಂಜೆ ಮಾಜಿ ಸಚಿವ ವಿನಯಕುಮಾ‌ರ್ ಸೊರಕೆಯವರು ಭೇಟಿ ನೀಡಿ ಸಾಂತ್ವಾನ ಹೇಳಿದರು.

 ರಕ್ಷಿತ್ ಅವರ ತಂದೆ ರಮೇಶ ಪೂಜಾರಿ, ತಾಯಿ, ಸಹೋದರಿ ಹಾಗೂ ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿದರು.

 ಮಾಜಿ ಸಚಿವರ ಸೂಚನೆಯಂತೆ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸರಕಾರದ ವತಿಯಿಂದ ಐದು ಲಕ್ಷ ರೂ. ಮಂಜೂರಾಗಿದ್ದು, ಶೀಘ್ರವೇ ಕುಟುಂಬದವರಿಗೆ ಸಿಗಲಿದೆ ಎಂದರು.

 ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಸುನಿಲ್ ಬಂಗೇರ, ರತನ್ ಶೆಟ್ಟಿ, ಜುಬೇರ್ ಅಹಮ್ಮದ್, ಲಕ್ಷ್ಮಣ ಪೂಜಾರಿ, ಸುರೇಶ ಪೂಜಾರಿ, ಚಂದ್ರಹಾಸ ಪದವು, ಮೆಲ್ವಿನ್ ಮಾರ್ಟಿಸ್, ವಿಲ್ಸನ್ ಮೆಂಡೋನ್ಸಾ, ಮೋವಿನ್ ಮೆಂಡೋನ್ಸಾ, ಸೊರಕೆಯವರ ಆಪ್ತ ಕಾರ್ಯದರ್ಶಿ ಅಶೋಕ್ ನಾಯರಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.