• Home  
  • ಸುನೈನಾ ಪಾಟೀಲ್(ಶ್ರುತಿ ಮರಾಠೆ)  ಇವರಿಗೆ ಪಿಎಚ್‌ಡಿ ಗೌರವ
- ಶಾಲಾ ಕಾಲೇಜು

ಸುನೈನಾ ಪಾಟೀಲ್(ಶ್ರುತಿ ಮರಾಠೆ)  ಇವರಿಗೆ ಪಿಎಚ್‌ಡಿ ಗೌರವ

Share:  ಸುನೈನಾ ಪಾಟೀಲ್(ಶ್ರುತಿ ಮರಾಠೆ)  ಇವರಿಗೆ ಪಿಎಚ್‌ಡಿ ಗೌರವ  ಶಿರ್ವ: ಎನ್‌ಐಟಿಕೆ ಸುರತ್ಕಲ್ ಇಲ್ಲಿನ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಸುನೈನಾ ಪಾಟೀಲ್ (ಶ್ರುತಿ ಶ್ರೀರಾಮ್ ಮರಾಠೆ) ಇವರಿಗೆ ಪಿಎಚ್‌ಡಿ ಗೌರವ ಲಭಿಸಿದೆ. ಇವರು ಎನ್‌ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ದಾಸರಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ  “ಮಸಿ ಆ್ಯಕ್ಸಿಡೀಕರಣ ಚಟುವಟಿಕೆ ಮತ್ತು ಅದರ ಚಲನಶಾಸ್ತ್ರಕ್ಕೆ ಸಿರಿಯ ಪ್ರಸಿಯೋಡೈಮಿಯಮ್ ವೇಗವರ್ಧಕದಲ್ಲಿ ಪರಿವರ್ತನೆಯ ಲೋಹದ ಡೊಪಾಂಟ್‌ಗಳ ಪರಿಣಾಮದ ಮೇಲೆ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ […]

 ಸುನೈನಾ ಪಾಟೀಲ್(ಶ್ರುತಿ ಮರಾಠೆ)  ಇವರಿಗೆ ಪಿಎಚ್‌ಡಿ ಗೌರವ

 ಶಿರ್ವ: ಎನ್‌ಐಟಿಕೆ ಸುರತ್ಕಲ್ ಇಲ್ಲಿನ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಸುನೈನಾ ಪಾಟೀಲ್ (ಶ್ರುತಿ ಶ್ರೀರಾಮ್ ಮರಾಠೆ) ಇವರಿಗೆ ಪಿಎಚ್‌ಡಿ ಗೌರವ ಲಭಿಸಿದೆ.

ಇವರು ಎನ್‌ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ದಾಸರಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ  “ಮಸಿ ಆ್ಯಕ್ಸಿಡೀಕರಣ ಚಟುವಟಿಕೆ ಮತ್ತು ಅದರ ಚಲನಶಾಸ್ತ್ರಕ್ಕೆ ಸಿರಿಯ ಪ್ರಸಿಯೋಡೈಮಿಯಮ್ ವೇಗವರ್ಧಕದಲ್ಲಿ ಪರಿವರ್ತನೆಯ ಲೋಹದ ಡೊಪಾಂಟ್‌ಗಳ ಪರಿಣಾಮದ ಮೇಲೆ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಎನ್‌ಐಟಿಕೆ ಸುರತ್ಕಲ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 ಇವರು  ಕೆಮಿಕಲ್ ಪ್ಲಾಂಟ್ ಡಿಸೈನ್ ಹಾಗೂ ಇಂಡಸ್ಟ್ರಿಯಲ್ ಪೊಲ್ಯೂಶನ್ ಕಂಟ್ರೋಲ್ ಎರಡೂ ವಿಷಯದಲ್ಲಿ ಎನ್‌ಐಟಿಕೆಯಲ್ಲಿ ಎಂ. ಟೆಕ್ ಪದವಿ ಗಳಿಸಿದ್ದಾರೆ.

 ಇವರು ನಿಟ್ಟೆ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀರಾಮ್ ಪಿ.ಮರಾಠೆ ಬಂಟಕಲ್ಲು ಇವರ ಧರ್ಮಪತ್ನಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.