ಹಂಗಾರಕಟ್ಟೆ ದೂಳಂಗಡಿ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ
ಹಸಿರು ಉಳಿಸಿ, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಶ್ರಮಿಬೇಕಿದೆ: ರವೀಂದ್ರ ಕೋಟ
(Kota) ಕೋಟ: ಪ್ರಸ್ತುತ ವಾತಾವರಣದ ವೈಪರೀತ್ಯಗಳು, ಹೆಚ್ಚುತ್ತಿರುವ ತಾಪಮಾನ, ಕಾಂಕ್ರೇಟ್ ಕಾಡುಗಳ ಹೆಚ್ಚಳ, ಪ್ಲಾಸ್ಟಿಕ್ ಮಯಗೊಂಡ ಪರಿಸರ ಇವುಗಳಿಂದ ಮುಕ್ತಗೊಳ್ಳಬೇಕಾದರೆ ನಾವುಗಳು ಇಂದಿನಿAದ ಪರಿಸರಕ್ಕಾಗಿ ಸಮಯ ಮಿಸಲಿರಿಸುವ ಅಗತ್ಯತೆ ಇದೆ ಎಂದು ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ದೂಳಂಗಡಿ) ಹಂಗಾರಕಟ್ಟೆ ಇಲ್ಲಿ ರಾಷ್ಟಿçÃಯ ಹಸಿರು ಪಡೆ ಅಂಕುರ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಪ್ರಕೃತಿಯ ಮೇಲೆ ನಿರಂತರ ರ್ದೌಜನ್ಯ ಎಸೆಗಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಇಡೀ ಮನುಕುಲವನ್ನು ಆವರಿಸಿದೆ ಇದರ ದುಷ್ಪರಿಣಾಮ ಕ್ಯಾನ್ಸರ್ ನಂತಹ ಖಾಯಿಲೆಗಳು ತಾಂಡವಾಡುತ್ತಿದೆ.
ತಾಪಮಾನ ಉಸಿರುಗಟ್ಟುವ ವ್ಯವಸ್ಥೆ ಬಂದು ತಲುಪಿವೆ. ಹೀಗಾದರೆ ಮುಂದಿನ ತಲೆಮಾರು ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಬೇಕಾದಿತು. ಈ ದಿಸೆಯಲ್ಲಿ ಪರಿಸರದಲ್ಲಿ ಗಿಡ ನಡುವ ಹಾಗೂ ಪ್ಲಾಸ್ಟಿಕ್ ಮುಕ್ತ ಚಿಂತನೆಗಳ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆ, ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಪರಿಸರ ಜಾಗೃತಿ ಅಭ್ಯಾಸಗಳನ್ನು ರೂಢಿಸಿ ಪರಿಸರ ಸಂರಕ್ಷಿಸಿ ಬೆಳೆಸಿ ಉಳಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ ಎನ್ನುವ ಕಿವಿ ಮಾತುಗಳನ್ನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ, ಉಷಾ ರಾಣಿ, ವಿಜ್ಞಾನ ಶಿಕ್ಷಕಿಯರಾದ ವೀಣಾ ಶೆಟ್ಟಿ, ವಿದ್ಯಾಶ್ರೀ ಎಮ್ ಬಿ, ಗೌರವ ಶಿಕ್ಷಕಿಯರಾದ ಯಶೋಧ, ರಮ್ಯ ಲವೀನಾ ಉಪಸ್ಥಿತರಿದ್ದರು.

