• Home  
  • ಹೃದ್ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ (Public awareness about heart disease is necessary: ​​MP Kota Srinivasa Poojary)
- health

ಹೃದ್ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ (Public awareness about heart disease is necessary: ​​MP Kota Srinivasa Poojary)

Share: ಹೃದ್ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ (Udupi) ಉಡುಪಿ: ಯಾವುದೇ ​​ಮುನ್ಸೂಚನೆ ನೀಡದೆ ನೇರವಾಗಿ ಸಾವಿನ ಬಾಗಿಲಿಗೆ ಕೊಂಡೊಯ್ಯುವ ಏಕೈಕ ರೋಗ ಹೃದ್ರೋಗ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.     ಆದರ್ಶ ಅಸ್ಪತ್ರೆಯಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆ ಮತ್ತು ಉಚಿತ ಹೃದ್ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.    […]

(Udupi) ಉಡುಪಿ: ಯಾವುದೇ ​​ಮುನ್ಸೂಚನೆ ನೀಡದೆ ನೇರವಾಗಿ ಸಾವಿನ ಬಾಗಿಲಿಗೆ ಕೊಂಡೊಯ್ಯುವ ಏಕೈಕ ರೋಗ ಹೃದ್ರೋಗ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಆದರ್ಶ ಅಸ್ಪತ್ರೆಯಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆ ಮತ್ತು ಉಚಿತ ಹೃದ್ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

   ಸಣ್ಣ ಮಕ್ಕಳೂ ಕ್ಯಾನ್ಸರ್​ ಪೀಡಿತರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆರೋಗ್ಯ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕುವ ಸಂಭವವಿದೆ. ಹೀಗಾಗಿ ದೇಶದ ಒಟ್ಟು ವ್ಯವಸ್ಥೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

    ಜಿಲ್ಲಾ ಸರ್ಜನ್​ ಡಾ. ಎಚ್​. ಅಶೋಕ್​ ಮಾತನಾಡಿದರು.

    ಡಿಎಚ್​ಒ ಡಾ. ಬಸವರಾಜ್​ ಹುಬ್ಬಳ್ಳಿ, ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್​, ತಜ್ಞ ವೈದ್ಯರಾದ ಡಾ. ಶ್ರೀಕಾಂತ್​, ​ಡಾ. ಸುಹಾಸ್​ ಜಿ.ಸಿ., ಬಿಜೆಪಿ ಮುಖಂಡ ಉದಯ್​ ಕುಮಾರ್​ ಶೆಟ್ಟಿ​,  ಡಾ​̤ ಜಸ್ಪ್ರೀತ್ ಸಿಂಗ್, ಡಾ​. ಮೋಹನ ದಾಸ್ ಶೆಟ್ಟಿ ಉಪಸ್ಥಿತರಿದ್ದರು.

   ​ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ. ಎಸ್​. ಚಂದ್ರಶೇಖರ್​ ಸ್ವಾಗತಿಸಿದರು.

    ಡಯಟೀಶಿಯನ್​ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ವ್ಯವಸ್ಥಾಪಕ ಪ್ರಕಾಶ್​ ಡಿ.ಕೆ. ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.