ಏಳೂರು ಮೊಗವೀರ ಮಹಾಸಭಾದ ಆಯೋಜನೆಯಲ್ಲಿ ಹೆಜಮಾಡಿಯಲ್ಲಿ ಸಮುದ್ರ ಪೂಜೆ
ಉಡುಪಿ: ಏಳೂರು ಮಗ ವೀರ ಮಹಾಸಭಾ ಆಯೋಜನೆಯಲ್ಲಿ ಹೆಜಮಾಡಿಯಲ್ಲಿ ಆಚೆ ಮಟ್ಟು ಮೊಗವೀರ ಸಭಾ, ಮಹಿಳಾ ಮಂಡಳಿ ಹಾಗೂ ಮುಂಬೈ ಸಮಿತಿಯ ವತಿಯಿಂದ ಹೆಜಮಾಡಿಯಲ್ಲಿ ಗುರುವಾರ ಬೆಳಿಗ್ಗೆ ಸಾಮೂಹಿಕ ಸಮುದ್ರ ಪೂಜೆ ನೆರವೇರಿಸಲಾಯಿತು.
ಹೆಜಮಾಡಿ ವೀರ ಮಾರುತಿ ದೇಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಂದ ಹಾಲು, ತೆಂಗಿನಕಾಯಿ ಹೂಗಳನ್ನು ಭಜನಾ ಮೆರವಣಿಗೆಯೊಂದಿಗೆ ಹೆಜಮಾಡಿ ಅಮಾಸೆ ಕರಿಯ ಸಮುದ್ರ ಕಿನಾರೆಗೆ ತರಲಾಯಿತು.
ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮುದ್ರರಾಜನಿಗೆ ಹಾಲೆರೆಯಲಾಯಿತು.
ಏಳೂರು ಮೋಗವೀರ ಮಹಾಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್ ರವರು ಸಮರ್ಪಕ ಮಾಹಿತಿ ನೀಡಿದರು.
ಈ ಸಂದರ್ಭ 16 ಪಟ್ಲ ಮೊಗವೀರ ಮಹಾಸಭಾದ ಅಧ್ಯಕ್ಷ ರವಿ ಎಸ್ ಕುಂದರ್, ಗುಂಡಿ ಮೊಗವೀರ ಮಹಾಸಭಾ ಅಧ್ಯಕ್ಷ ಲೋಕನಾಥ ಗುರಿಕಾರ, ಪಲಿಮಾರು ಮೊಗವೀರ ಮಹಾಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ಮಟ್ಟು ಮೊಗವೀರ ಮಹಾಸಭಾ ಅಧ್ಯಕ್ಷ ಜಯ ಗುರಿಕಾರ, ಕನ್ನಂಗಾರು ಮೊಗವೀರ ಮಹಾಸಭಾ ಅಧ್ಯಕ್ಷ ರವಿ ಕುಂದರ್, ಗ್ರಾಮ ಪಂಚಾಯತ್ ಸದಸ್ಯರಾದ ಕಿರಣ್ ಮಟ್ಟು, ಸುಧಾಕರ ಕರ್ಕೇರಾ, ಮಹಿಳಾ ಮಂಡಳಿಯ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಉಪಸ್ಥಿತರಿದ್ದರು.
