• Home  
  • ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಂದ ಸುಂಕ ವಸೂಲಿ: ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ (Toll collection from locals at Hejamady Toll: Rakshava Vedike warns tough fight)
- PROBLEMS

ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಂದ ಸುಂಕ ವಸೂಲಿ: ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ (Toll collection from locals at Hejamady Toll: Rakshava Vedike warns tough fight)

Share: ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಂದ ಸುಂಕ ವಸೂಲಿ: ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ   (Udupi) ಉಡುಪಿ : ಹೆಜಮಾಡಿ ಸುಂಕ ವಸೂಲಾತಿ ಕೇಂದ್ರದಲ್ಲಿ ಸ್ಥಳೀಯರಿಂದ  ಸುಂಕ ವಸೂಲಿ ಮಾಡಲು ಮುಂದಾದ ಕಂಪನಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಸಂಚಾಲಕರಾಗಿರುವ ಎಂ ಎಸ್ ಸೈಯ್ಯದ್ ನಿಜಾಮುದ್ದೀನ್‌ರವರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.  ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಕಂಪನಿ ದಿಢೀರನೆ ಸುಂಕ ವಸೂಲಿಗೆ ಮುಂದಾಗಿರುವುದು ತಪ್ಪು. […]

ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಂದ ಸುಂಕ ವಸೂಲಿ: ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ  

(Udupi) ಉಡುಪಿ : ಹೆಜಮಾಡಿ ಸುಂಕ ವಸೂಲಾತಿ ಕೇಂದ್ರದಲ್ಲಿ ಸ್ಥಳೀಯರಿಂದ  ಸುಂಕ ವಸೂಲಿ ಮಾಡಲು ಮುಂದಾದ ಕಂಪನಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಸಂಚಾಲಕರಾಗಿರುವ ಎಂ ಎಸ್ ಸೈಯ್ಯದ್ ನಿಜಾಮುದ್ದೀನ್‌ರವರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

 ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಕಂಪನಿ ದಿಢೀರನೆ ಸುಂಕ ವಸೂಲಿಗೆ ಮುಂದಾಗಿರುವುದು ತಪ್ಪು. ಕಳೆದ ಸಲ ಸ್ಥಳೀಯರಿಗೆ ವಿನಾಯಿತಿ ರದ್ದುಗೊಳಿಸಿದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ 48 ದಿನಗಳ ಅನಿರ್ದಿಷ್ಟಾವಧಿ ಹೋರಾಟ ನಡೆಸಿ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು.

 ಒಂದು ವೇಳೆ ಕಂಪೆನಿ ಸ್ಥಳೀಯರಿಂದ ಸುಂಕ ವಸೂಲಿ ಮಾಡಲು ಮುಂದಾದರೆ, ವಸೂಲಾತಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ಈ ವಿಚಾರದಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ  ಉಡುಪಿ ಜಿಲ್ಲಾ ಸಂಚಾಲಕ ಎಂ. ಎಸ್. ಸೈಯ್ಯದ್ ನಿಜಾಮುದ್ದೀನ್ ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.