• Home  
  •  ಹೆಜಮಾಡಿ ಟೋಲ್ ಗೇಟ್: ಸ್ಥಳೀಯರಿಗೆ ಟೋಲ್‌ ವಿನಾಯತಿಗೆ ಆಗ್ರಹ (Hejamady Toll Gate: Locals demand toll exemption)
- PROBLEMS - ವಿಡಿಯೋ

 ಹೆಜಮಾಡಿ ಟೋಲ್ ಗೇಟ್: ಸ್ಥಳೀಯರಿಗೆ ಟೋಲ್‌ ವಿನಾಯತಿಗೆ ಆಗ್ರಹ (Hejamady Toll Gate: Locals demand toll exemption)

Share: ‌ಹೆಜಮಾಡಿ ಟೋಲ್ ಗೇಟ್: ಸ್ಥಳೀಯರಿಗೆ ಟೋಲ್‌ ವಿನಾಯತಿಗೆ ಆಗ್ರಹ   ಟೋಲ್ ವಿನಾಯಿತಿ ಮುಂದುವರಿಸದಿದ್ದಲ್ಲಿ ತೀವ್ರ ಹೋರಾಟದ ಎಚ್ಚರಿಕೆ (Padubidri) ಪಡುಬಿದ್ರಿ: ಹೆಜಮಾಡಿ ಟೋಲ್‌ಸಂಗ್ರಹಣಾ ಕೇಂದ್ರದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಟೋಲ್ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.  ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಬಳಿಯಲ್ಲಿ ಜಮಾಯಿಸಿ ಟೋಲ್‌ ಗೇಟ್ ತಲುಪಿದರು.‌  ಈ ವೇಳೆ ಹೆಜಮಾಡಿ ಟೋಲ್‌ನಲ್ಲಿ […]

ಹೆಜಮಾಡಿ ಟೋಲ್ ಗೇಟ್: ಸ್ಥಳೀಯರಿಗೆ ಟೋಲ್‌ ವಿನಾಯತಿಗೆ ಆಗ್ರಹ

  ಟೋಲ್ ವಿನಾಯಿತಿ ಮುಂದುವರಿಸದಿದ್ದಲ್ಲಿ ತೀವ್ರ ಹೋರಾಟದ ಎಚ್ಚರಿಕೆ

(Padubidri) ಪಡುಬಿದ್ರಿ: ಹೆಜಮಾಡಿ ಟೋಲ್‌ಸಂಗ್ರಹಣಾ ಕೇಂದ್ರದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಟೋಲ್ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

 ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಬಳಿಯಲ್ಲಿ ಜಮಾಯಿಸಿ ಟೋಲ್‌ ಗೇಟ್ ತಲುಪಿದರು.‌

 ಈ ವೇಳೆ ಹೆಜಮಾಡಿ ಟೋಲ್‌ನಲ್ಲಿ ವಿನಾಯಿತಿ ರದ್ದುಗೊಳಿಸಿರುವ ಕ್ರಮವನ್ನು ವಿರೋಧಿಸಿ ಟೋಲ್ ಪ್ರಬಂಧಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

  ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಡಿಸಿ ಸಭೆಯವರೆಗೂ ಯಥಾಸ್ಥಿತಿ:

 ಮನವಿ ಸ್ವೀಕರಿಸಿದ ಟೋಲ್ ಪ್ರಬಂಧಕ ತಿಮ್ಮಯ್ಯ ಮಾತನಾಡಿ, ಮುಂದಿನ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಸ್ತಾನ, ಹೆಜಮಾಡಿ ಟೋಲ್ ಸಮಸ್ಯೆಯ ಇತ್ಯರ್ಥಕ್ಕೆ ಸಭೆಯನ್ನು ಜಿಲ್ಲಾಧಿಕಾರಿ ಕರೆಯಲಿದ್ದಾರೆ. ಅದುವರೆಗೂ ಸ್ಥಳೀಯರಿಗಿದ್ದ ವಿನಾಯಿತಿಯನ್ನು ಯಥಾಸ್ತಿತಿ ಮುಂದುವರಿಸಲಾಗುವುದು ಎಂದರು.

 ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ66ರಲ್ಲಿ 2016 ರಿಂದ ಹೆಜಮಾಡಿ ಟೋಲ್ ಪ್ಲಾಝಾ ಕಾರ್ಯಚರಿಸುತಿದ್ದು, ಟೋಲ್ ನಿರ್ಮಾಣದಲ್ಲಿ ಈ ಭಾಗದ ಜನರು ತಮ್ಮ ಮನೆ, ಮಠ-ಭೂಮಿಯನ್ನು ಕಳೆದುಕೊಂಡಿದ್ದಾರೆ. ಉಡಪಿ ಜಿಲ್ಲಾಧಿಕಾರಿಯವರು ೨೦೧೬ರಲ್ಲಿ ನಡೆದ ಸಭೆಯಂತೆ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಹಾಗೂ ಸಾಸ್ತಾನದಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಆದೇಶ ನೀಡಲಾಗಿತ್ತು. ಆದರೆ ಏಕಾಏಕಿ ಸ್ಥಳೀಯ ವಾಹನಗಳ ಫಾಸ್ಟ್ ಟ್ಯಾಗ್‌ನಿಂದ ಹಣ ಕಡಿತಗೊಳಿಸುತ್ತಿರುವುದು ಸ್ಥಳೀಯರಿಗೆ ಇದ್ದ ಟೋಲ್ ವಿನಾಯಿತಿ ರದ್ದುಪಡಿಸಿರುವುದು ತಿಳಿದುಬಂದಿದೆ.

 ಕೂಡಲೇ ಈ ವಿನಾಯಿತಿಯನ್ನು ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಮತ್ತೆ ಮುಂದುವರಿಸಬೇಕು ಎಂದು ಒತ್ತಾಯಿಸಲಾಯಿತು. ಒಂದು ವೇಳೆ ವಿನಾಯಿತಿ ಮುಂದುವರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಲಾಯಿತು.

 ಉದ್ಯೋಗದಲ್ಲಿ ಸ್ಥಳೀಯ ನೌಕರರನ್ನು ಕೆಲಸದಿಂದ ಕಡಿತಗೊಳಿಸಬಾರದು. ಹೆದ್ದಾರಿ ಇಲಾಖೆಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಲಾಯಿತು.

 ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಎದುರಿಸಬೇಕು ಎಂದು ಎಚ್ಚರಿಸಿದರು.

ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ, ಗೌರವಾಧ್ಯಕ್ಷ ಶೇಖಬ್ಬ ಕೋಟೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಪಡುಬಿದ್ರಿ, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಷ್ಮಾ ಎ. ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಪ್ರಮುಖರಾದ ನವೀನ್‌ಚಂದ್ರ ಜೆ. ಸುವರ್ಣ, ವೈ. ಸುಕುಮಾರ್, ಶಶಿಕಾಂತ್ ಪಡುಬಿದ್ರಿ, ಗುಲಾಂ ಮುಹಮ್ಮದ್, ಅಬ್ದುಲ್ ಅಝೀಜ್ ಹೆಜಮಾಡಿ, ವಿಶ್ವಾಸ್ ವಿ. ಅಮೀನ್, ಸುಧಾಕರ ಶೆಟ್ಟಿ, ರಾಲ್ಫಿ ಡಿ.‌ ಕೋಸ್ತ, ರವಿ ಎಚ್. ಕುಂದರ್, ನಿರ್ಮಲಾ, ಸೈಯ್ಯದ್ ನಿಝಾಮ್, ಉಮನಾಥ್ ಪಡುಬಿದ್ರಿ, ದಿನೇಶ್ ಫಲಿಮಾರು, ಜಿತೇಂದ್ರ ಪುರ್ಟಾಡೋ, ಮಧು ಆಚಾರ್ಯ, ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಸುಧೀರ್ ಕರ್ಕೇರ, ಪ್ರಾಣೇಶ್ ಹೆಜ್ಮಾಡಿ, ಪಾಂಡುರಂಗ ಕರ್ಕೇರ, ರಮೀಜ್ ಹುಸೇನ್, ಲೋಕೇಶ್ ಅಮೀನ್, ತಸ್ನೀನ್ ಅರಾ, ಶರ್ಪುದ್ದೀನ್ ಶೇಕ್, ಅಶೋಕ್ ಸಾಲ್ಯಾನ್, ಮೋಹನ್, ಕೇಶವ್ ಸಾಲ್ಯಾನ್ ಹೆಜಮಾಡಿ, ಸನಾ ಇಬ್ರಾಹಿಮ್, ಹಸನ್ ಕೋಡಿ, ದೀಪಕ್ ಕೋಟ್ಯಾನ್  ಹೆಜಮಾಡಿ, ಅಬ್ಬಾಸ್ ಹಾಜಿ, ಎಮ್ .ಎಸ್ ಶಾಫಿ, ರೋಶನ್ ಕಾಂಚನ್  ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.