• Home  
  • 11, 12, 13 : ಟೀಮ್ ಫ್ರೆಂಡ್ಸ್ ಆಯೋಜನೆಯಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ‘ಫ್ರೆಂಡ್ಸ್ ಟ್ರೋಫಿ – 2025’ ( April. 11, 12, 13: Team Friends organizes national level night light cricket tournament ‘Friends Trophy – 2025’)
- ಕ್ರೀಡೆ

11, 12, 13 : ಟೀಮ್ ಫ್ರೆಂಡ್ಸ್ ಆಯೋಜನೆಯಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ‘ಫ್ರೆಂಡ್ಸ್ ಟ್ರೋಫಿ – 2025’ ( April. 11, 12, 13: Team Friends organizes national level night light cricket tournament ‘Friends Trophy – 2025’)

Share: ಎ.11, 12, 13 : ಟೀಮ್ ಫ್ರೆಂಡ್ಸ್ ಆಯೋಜನೆಯಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ‘ಫ್ರೆಂಡ್ಸ್ ಟ್ರೋಫಿ – 2025′ (Padubidri) ಪಡುಬಿದ್ರಿ : ಪಡುಬಿದ್ರಿ ಟೀಮ್ ಫ್ರೆಂಡ್ಸ್ ಇದರ ವತಿಯಿಂದ ಎ.11, 12, 13 ರಂದು ಪಡುಬಿದ್ರಿ ಬೋರ್ಡು ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಟು ದಿ. ದೀಪೇಶ್ ದೇವಾಡಿಗ ಸ್ಮರಣಾರ್ಥ ನಡೆಯಲಿರುವ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ‘ಫ್ರೆಂಡ್ಸ್ ಟ್ರೋಫಿ – 2025’ ಇದರ ಟ್ರೋಫಿ ಅನಾವರಣವು  ಪಡುಬಿದ್ರಿ […]

(Padubidri) ಪಡುಬಿದ್ರಿ : ಪಡುಬಿದ್ರಿ ಟೀಮ್ ಫ್ರೆಂಡ್ಸ್ ಇದರ ವತಿಯಿಂದ ಎ.11, 12, 13 ರಂದು ಪಡುಬಿದ್ರಿ ಬೋರ್ಡು ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಟು ದಿ. ದೀಪೇಶ್ ದೇವಾಡಿಗ ಸ್ಮರಣಾರ್ಥ ನಡೆಯಲಿರುವ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ‘ಫ್ರೆಂಡ್ಸ್ ಟ್ರೋಫಿ – 2025’ ಇದರ ಟ್ರೋಫಿ ಅನಾವರಣವು  ಪಡುಬಿದ್ರಿ ನಯತ್ ಹೋಟೆಲ್‌ನ ಶುಭಮ್ ಸಭಾಂಗಣದಲ್ಲಿ ಜರಗಿತು.

 ಟ್ರೋಫಿ ಅನಾವರಣವನ್ನು ಗಣ್ಯರು ನೆರವೇರಿಸಿದರು.

 ಕೆ.ಪಿ.ಸಿ.ಸಿ.ಕೋರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ ಮಾತನಾಡಿ, ಮೊಟ್ಟಮೊದಲ ಬಾರಿಗೆ ಹೊನಲು ಬೆಳಕಿನ ಕ್ರೀಡಾಕೂಟ ನಡೆದ ಪಡುಬಿದ್ರಿ  ಬೋಡ್೯ ಶಾಲಾ ಮೈದಾನ ಹಲವು‌ ಯುವ ಆಟಗಾರರನ್ನು ಸೃಷ್ಟಿಸಿದೆ. ದೀಪೇಶ್ ದೇವಾಡಿಗ ಉತ್ತಮ ‌ಆಟಗಾರರಾಗಿರುವುದರಿಂದ ಅವರ ಸ್ಮರಣಾರ್ಥ ಈ ಪಂದ್ಯಾಕೂಟ ಅನಿವಾರ್ಯ ಎಂದರು.

 ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಶರತ್ ಶೆಟ್ಟಿ ಮಾತನಾಡಿ, ಪಂದ್ಯಾಕೂಟಗಳ ಮೂಲಕ ಬಾಂಧವ್ಯ ವೃದ್ಧಿ ಸಾಧ್ಯ. ಪಡುಬಿದ್ರಿಯಲ್ಲಿ ಜರಗುವ ಪ್ರತಿ ಪಂದ್ಯಗಳು ಯಶಸ್ವಿಯಾಗಿದೆ. ದೀಪೇಶ್ ಓರ್ವ ಪ್ರತಿಭಾವಂತ ಆಟಗಾರನಿದ್ದ. ಆತನ ಸ್ಮರಣಾರ್ಥ ನಡೆಯುವ ಫ್ರೆಂಡ್ಸ್ ಟ್ರೋಫಿಯನ್ನು ಯಶಸ್ವಿ ಗೊಳಿಸಬೇಕೆಂದು ಹೇಳಿದರು.

 ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಪಡುಬಿದ್ರಿ ಸಿ.ಎ. ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕೆ.ಪಿ.ಸಿ.ಸಿ.ಕೋರ್ಡಿನೇಟರ್ ನವೀನ್ ಚಂದ್ರ ಜೆ.ಶೆಟ್ಟಿ, ಕಾಪು ತಾಲೂಕು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜಮಾಡಿ, ಉದ್ಯಮಿಗಳಾದ ಮಿಥುನ್ ಆರ್ ಹೆಗ್ಡೆ, ವೈ. ಸುಕುಮಾರ್, ಕರುಣಾಕರ ಕೋಟ್ಯಾನ್‌ ಉಚ್ಚಿಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಮಾತನಾಡಿದರು.

 ಡಾ. ಶಶಿರಾಜ್ ಶೆಟ್ಟಿ, ಪಡುಬಿದ್ರಿ ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ ಡಿ ಪೂಜಾರಿ, ಉದ್ಯಮಿ ಸುಭಾಶ್ ಕಾಮತ್, ಟೀಮ್ ಫ್ರೆಂಡ್ಸ್ ಅಧ್ಯಕ್ಷರಾದ ಶರತ್ ಶೆಟ್ಟಿ ಉಪಸ್ಥಿತರಿದ್ದರು.

 ಕಾರ್ಯಕ್ರಮವನ್ನು ಕಾರ್ತಿಕ್ ಕುಂಜೂರು ನಿರೂಪಿಸಿ, ವಂದಿಸಿದರು.

 ಪ್ರಥಮ ಬಹುಮಾನವಾಗಿ 3 ಲಕ್ಷ ಹಾಗೂ ಟ್ರೋಫಿ ಮತ್ತು ದ್ವಿತೀಯ ಬಹುಮಾನ 2 ಲಕ್ಷ ಹಾಗೂ ಟ್ರೋಫಿ ಇರಲಿದೆ. ಸಮಾಜ ಸೇವಕ ಈಶ್ವರ್ ಮಲ್ಪೆ ಇವರಿಗೆ ಸನ್ಮಾನ, 5 ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ತುಳು ಚಿತ್ರರಂಗದ ತಾರೆಯರು ಭಾಗವಹಿಸಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.