• Home  
  • 2024 ಅತ್ಯಂತ ಕೆಟ್ಟ ವರ್ಷ: ಇಬ್ಬರು ಪ್ರಧಾನಿಗಳ ಸಾವಿನ ಸಾಧ್ಯತೆ :  ಕೋಡಿಮಠ ಸ್ವಾಮೀಜಿ ಭವಿಷ್ಯ(2024 is the worst year: Two Prime Ministers likely to die: Kodi Matt Swamiji future)
- ಪ್ರಚಲಿತ

2024 ಅತ್ಯಂತ ಕೆಟ್ಟ ವರ್ಷ: ಇಬ್ಬರು ಪ್ರಧಾನಿಗಳ ಸಾವಿನ ಸಾಧ್ಯತೆ :  ಕೋಡಿಮಠ ಸ್ವಾಮೀಜಿ ಭವಿಷ್ಯ(2024 is the worst year: Two Prime Ministers likely to die: Kodi Matt Swamiji future)

Share: 2024 ಅತ್ಯಂತ ಕೆಟ್ಟ ವರ್ಷ: ಇಬ್ಬರು ಪ್ರಧಾನಿಗಳ ಸಾವಿನ ಸಾಧ್ಯತೆ :  ಕೋಡಿಮಠ ಸ್ವಾಮೀಜಿ ಭವಿಷ್ಯ (Gadaga) ಗದಗ: 2024ರ ವರ್ಷ ಅತ್ಯಂತ ಕೆಟ್ಟ ವರ್ಷವಾಗಿದ್ದು, ಜಗತ್ತಿಗೆ ಮಾರಕ ಆಗಲಿದೆ. ಪ್ರಭಾವಿ ಸಂತರೊಬ್ಬರು ಹಾಗೂ ಇಬ್ಬರು ಪ್ರಧಾನಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ (Kodi Matt DR Shivananda Shivayogi Rajendra Swamiji) ಭವಿಷ್ಯ ನುಡಿದರು ಗದಗ ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಗಳು, 2024ರಲ್ಲಿ ಭೂಕಂಪ, […]

2024 ಅತ್ಯಂತ ಕೆಟ್ಟ ವರ್ಷ: ಇಬ್ಬರು ಪ್ರಧಾನಿಗಳ ಸಾವಿನ ಸಾಧ್ಯತೆ :  ಕೋಡಿಮಠ ಸ್ವಾಮೀಜಿ ಭವಿಷ್ಯ

(Gadaga) ಗದಗ: 2024ರ ವರ್ಷ ಅತ್ಯಂತ ಕೆಟ್ಟ ವರ್ಷವಾಗಿದ್ದು, ಜಗತ್ತಿಗೆ ಮಾರಕ ಆಗಲಿದೆ. ಪ್ರಭಾವಿ ಸಂತರೊಬ್ಬರು ಹಾಗೂ ಇಬ್ಬರು ಪ್ರಧಾನಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ (Kodi Matt DR Shivananda Shivayogi Rajendra Swamiji) ಭವಿಷ್ಯ ನುಡಿದರು

ಗದಗ ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಗಳು, 2024ರಲ್ಲಿ ಭೂಕಂಪ, ಜಲಕಂಟಕ, ಅಕಾಲಿಕ ಮಳೆ, ಬಾಂಬ್ ಸ್ಪೋಟದಂತಹ ಸನ್ನಿವೇಶ ಮತ್ತು ಯುದ್ಧದ ಭೀತಿಯಿಂದ ಜಗತ್ತು ತಲ್ಲಣಗೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೇಳಿದ್ದಾರೆ.

  ದೇಶ ಹಾಗೂ ರಾಜ್ಯ ರಾಜಕೀಯ ಕುರಿತು ಮಾತನಾಡಿದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಾಗೂ ಯುಗಾದಿ ನಂತರ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ನಂತರ ವ್ಯಾಪಾರ, ವಾಣಿಜ್ಯ, ಯುಗಾದಿ ನಂತರ ದೇಶದ ಸಮಗ್ರ ಮಳೆ, ಬೆಳೆ, ಜನರು, ರಾಜರ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಸ್ತುತ್ಯರ್ಹವಲ್ಲ. ಯುಗಾದಿ ನಂತರ ರಾಜಕೀಯದಲ್ಲಾಗುವ ಬದಲಾವಣೆಗಳ ಕುರಿತು ಭವಿಷ್ಯ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.