31 ನೇ ವರ್ಷದ ಹೊನಲು ಬೆಳಕಿನ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ನಂದಿಕೂರು: ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಅಡ್ವೆ ನಂದಿಕೂರಿನಲ್ಲಿ ನಡೆವ 31 ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವಕ್ಕೆ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ (Madhvaraya Bhat) ಶನಿವಾರ ಚಾಲನೆ ನೀಡಿ ಶುಭ ಹಾರೈಸಿದರು.
ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವೈ. ಪ್ರಪುಲ್ಲ ಶೆಟ್ಟಿ (Y Prafulla Shetty), ಅಡ್ವೆ ಮಹಾಗಣಪತಿ ದೇವಸ್ಥಾನದ ಜನ್ನಿ ರವಿಶಂಕರ ಭಟ್(Janni Ravi shankar Bhat), ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೆಂಕಟೇಶ ಪುರಾಣಿಕ್, ಅಡ್ವೆ ಗರಡಿ ಮನೆ ರಾಮ ಪೂಜಾರಿ, ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಅಡ್ವೆ ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ, ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ, ಅಡ್ವೆ ಕಂಕಣಗುತ್ತು ಅಶ್ರಿತ್ ಹರೀಶ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನಚಂದ್ರ ಸುವರ್ಣ ಅಡ್ವೆ, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಕಾರ್ಯದರ್ಶಿಗಳಾದ ಶಶಿಧರ ಹೆಗ್ಡೆ ಅಡ್ವೆ, ಉದಯ ರೈ ಅರಂತಡೆ, ಕೃಷ್ಣಕುಮಾರ್ ಶೆಟ್ಟಿ ಸನ್ನೋಣಿ, ಕೋಶಾಧಿಕಾರಿಗಳಾದ ಲಕ್ಷ್ಮಣ ಎಲ್ ಶೆಟ್ಟಿ ಅರಂತಡೆ, ಗಣೇಶ್ ಶೆಟ್ಟಿ ಸಾಂತೂರು, ಜೊತೆ ಕೋಶಾಧಿಕಾರಿಗಳಾದ ಅಮರನಾಥ ಶೆಟ್ಟಿ ಅಣ್ಣಾಜಿಗೋಳಿ, ಸತೀಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ವಿದ್ಯಾನಂದ ಶೆಟ್ಟಿ ಮುಂಡಶೆಟ್ಟಿ ಮನೆ ಅಡ್ವೆ, ರವೀಂದ್ರ ಪ್ರಭು ಸಾಂತೂರು, ಶೇಖರ ಶೆಟ್ಟಿ, ಪ್ರವೀಣ್ ಕುಮಾರ್ ಗರಡಿ ಮನೆ, ವಿನೋದ್ ಶೆಟ್ಟಿ, ಸುಧಾಮ ಶೆಟ್ಟಿ, ಸರೋಜಾಕ್ಷ ಶೆಟ್ಟಿ, ನಿತಿನ್‌ಕುಮಾರ್, ಜಯಂತಿ ಪೂಜಾರ್ತಿ ಅಡ್ವೆ, ಭೋಜ ಶೆಟ್ಟಿ, ಸುಧೀರ್ ಕುಮಾರ್ ಅಡ್ವೆ, ಪ್ರಧಾನ ತೀರ್ಪುಗಾರ ಪ್ರೊ. ಕೆ. ಗುಣಪಾಲ ಕಡಂಬ (PROF K Gunapala Kadamba), ಕೋಣಗಳ ಯಜಮಾನ ಕೂಳೂರು ಪೊಯ್ಯೊಲು ಪಿ.ಆರ್. ಶೆಟ್ಟಿ, ಪಡುಬಿದ್ರಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ (EX MLA Lalaji Mendon), ಪಡುಬಿದ್ರಿ ಠಾಣಾಧಿಕಾರಿಗಳಾದ ಪ್ರಸನ್ನ ಎಂ.ಎಸ್. ಸುದರ್ಶನ ದೊಡ್ಡಮನಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹರೀಶ್ ಶೆಟ್ಟಿ ಪಾದೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ನೂರಾರು ಜೊತೆ ಕೋಣಗಳು ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದವು.

