Share: ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ […]

ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ


ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ ಪೈ ಕೆ ಭಾಗವಹಿಸಿದ್ದರು. ಇವರು ಹ್ಯಾಕೋತ್ಸವ ೨೦೨೩ರ ಕುರಿತು ಮಾತನಾಡಿ ಭಾರತದಲ್ಲಿ ಉತ್ಪಾದನೆಯ ಬೆಳವಣಿಗೆಯೊಂದಿಗೆ ಇಂಟರ್ನೆಟ್ ಆಫ್ ಥಿಂಗ್ಸ್ನ ಬೇಡಿಕೆಯೂ ತುಂಬಾ ಹೆಚ್ಚಾಗಿರುವುದರಿಂದ ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳ ಅವಶ್ಯಕತೆ ತುಂಬಾ ಇದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ವೃತ್ತಿಯನ್ನು ಪಡೆಯಲು ಹೇಗೆ ಪ್ರಯತ್ನಿಸಬೇಕು ಮತ್ತು ಐಟಿ ಕ್ಷೇತ್ರದಲ್ಲಿ ವೃತ್ತಿಯನ್ನು ಹೇಗೆ ಹುಡುಕಬಹುದು ಎಂದು ತಿಳಿಸಿದರು. ವಿದ್ಯಾರ್ಥಿಗಳು ಸೃಜನಾತ್ಮಕವಾಗಿರಲು, ತಮ್ಮ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಲು ದಿನಚರಿಯನ್ನು ಅಳವಡಿಸಬೇಕು ಮತ್ತು ಸಂಶೋಧನೆಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೌಮ್ಯ ಭಟ್ ಮತ್ತು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂತಹ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
“ಹ್ಯಾಕೋತ್ಸವ ೨೦೨೩” ನಲ್ಲಿ “ಸುಸ್ಥಿರ ಕೈಗಾರಿಕರಣ” ಎಂಬ ವಿಷಯದಡಿಯಲ್ಲಿ ಕೆನರಾ ಇಂಜಿನಿಯರಿAಗ್ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಮಂಡಿಸಿದ ಪ್ರಾಜೆಕ್ಟ್ಗೆ ಇಪ್ಪತ್ತೆöÊದು ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು, ಸೈಂಟ್ ಜೋಸೆಫ್ ಇಂಜಿನಿಯರಿAಗ್ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಹದಿನೈದು ಸಾವಿರ ನಗದು ಬಹುಮಾನದೊಂದಿಗೆ ಎರಡನೇ ಸ್ಥಾನವನ್ನು ಮತ್ತು ಜ್ಯೋತಿ ತಾಂತ್ರಿಕ ವಿದ್ಯಾಲಯದ, ಬೆಂಗಳೂರು ಇಲ್ಲಿನ ವಿದ್ಯಾರ್ಥಿಗಳು ಹತ್ತು ಸಾವಿರ ನಗದು ಬಹುಮಾನದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡರು.
“ಹ್ಯಾಕೋತ್ಸವ ೨೦೨೩” ನಲ್ಲಿ ಪರಿವರ್ತಕ ಶಿಕ್ಷಣ” ಎಂಬ ವಿಷಯದಡಿಯಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿAಗ್ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಮಂಡಿಸಿದ ಪ್ರಾಜೆಕ್ಟ್ ಇಪ್ಪತ್ತೆöÊದು ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು, ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ, ಬಂಟಕಲ್ ಇಲ್ಲಿನ ವಿದ್ಯಾರ್ಥಿಗಳು ಹದಿನೈದು ಸಾವಿರ ನಗದು ಬಹುಮಾನದೊಂದಿಗೆ ಎರಡನೇ ಸ್ಥಾನವನ್ನು ಮತ್ತು ಮಂಗಳೂರು ತಾಂತ್ರಿಕ ಇಂಜಿನಿಯರಿAಗ್ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಹತ್ತು ಸಾವಿರ ನಗದು ಬಹುಮಾನದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡರು.
ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಗುರುಪ್ರಸಾದ್ ವಂದಿಸಿದರು. ಗಣಕ ಯಂತ್ರ ವಿಭಾಗದ ವಿದ್ಯಾರ್ಥಿ ಕ್ಲಿಂಟನ್ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಶ್ರೇಯಾ ಕಾರ್ಯಕ್ರಮವನ್ನು ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.