• Home  
  • ಹೆಜಮಾಡಿಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹವಾನಿಯಂತ್ರಿತ ಶಾಖೆ ಉದ್ಘಾಟನೆ (Inaguration of Padubidri Sahakari society’s Hejamady Branch)
- social service - ಕರಾವಳಿ

ಹೆಜಮಾಡಿಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹವಾನಿಯಂತ್ರಿತ ಶಾಖೆ ಉದ್ಘಾಟನೆ (Inaguration of Padubidri Sahakari society’s Hejamady Branch)

Share: ಹೆಜಮಾಡಿಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹವಾನಿಯಂತ್ರಿತ ಶಾಖೆ ಉದ್ಘಾಟನೆ (Padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ನೂತನ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಭಾನುವಾರ  ನೆರವೇರಿತು. ಮಾಜಿ ಸಚವ ವಿನಯಕುಮಾರ್‌ ಸೊರಕೆಯವರು (EX Minister vinaykumar sorake) ಜನಸಾಮಾನ್ಯರಿಗೆ ಹೆಜಮಾಡಿಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹೆಜಮಾಡಿ ಶಾಖೆಯ ನವೀಕೃತ ಹವಾನಿಯಂತ್ರಿತ ಕಟ್ಟಡ ಉದ್ಘಾಟನಾ ಸಂಭ್ರಮದಲ್ಲಿ ಶಾಖೆಯ ಗೋದಾಮು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ತ್ವರಿತವಾಗಿ ಅಭಿವೃದ್ಧಿ […]

ಹೆಜಮಾಡಿಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹವಾನಿಯಂತ್ರಿತ ಶಾಖೆ ಉದ್ಘಾಟನೆ

(Padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ನೂತನ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಭಾನುವಾರ  ನೆರವೇರಿತು.

ಮಾಜಿ ಸಚವ ವಿನಯಕುಮಾರ್‌ ಸೊರಕೆಯವರು (EX Minister vinaykumar sorake) ಜನಸಾಮಾನ್ಯರಿಗೆ ಹೆಜಮಾಡಿಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಹೆಜಮಾಡಿ ಶಾಖೆಯ ನವೀಕೃತ ಹವಾನಿಯಂತ್ರಿತ ಕಟ್ಟಡ ಉದ್ಘಾಟನಾ ಸಂಭ್ರಮದಲ್ಲಿ ಶಾಖೆಯ ಗೋದಾಮು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮೀಣ ಹೆಜಮಾಡಿಯಲ್ಲಿ ಬಂದರು, ಗ್ರಾ.ಪಂ. ಕಟ್ಟಡ, ಕ್ರೀಡಾಂಗಣ ಅಭಿವೃದ್ಧಿ ಹೊಂದುತ್ತಿದ್ದು, ಪೂರಕವಾಗಿ ಸಹಕಾರಿ ಸೊಸೈಟಿಯ ಹವಾನಿಯಂತ್ರಿತ ಶಾಖೆ ಉದ್ಘಾಟನೆಯಿಂದ  ಜನಸಾಮಾನ್ಯರಿಗೆ ಸಹಕಾರಿಯಾಗಿದೆ ಎಂದರು.

 ಶಾಖೆಯ ಬ್ಯಾಂಕಿಂಗ್ ಕಟ್ಟಡ ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ (Jayakar Shetty Indrali)ಮಾತನಾಡಿ, ನಗುಮುಖ, ಸರಳೀಕೃತ

ಮತ್ತು ತ್ವರಿತ ಸೇವೆಗೆ ಪಡುಬಿದ್ರಿ ಸೊಸೈಟಿಯು ಪ್ರಸಿದ್ಧಿ ಪಡೆದಿದೆ. ಸೊಸೈಟಿಯ ಸಾಮಾಜಿಕ ಕಳಕಳಿ ಇತರರಿಗೆ ಅನುಕರಣೀಯವಾದುದು. ಬದಲಾವಣೆ ಸಾಮಾನ್ಯವಾದುದು. ಶೀಘ್ರವಾಗಿ ಬದಲಾವಣೆಗೆ ಸ್ಪಂದಿಸಿ ಅಭಿವೃದ್ಧಿ ಸಾಧಿಸೋಣ ಎಂದರು.

ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ (Navinchandra D Suvarna) ಮಾತನಾಡಿ, ಗ್ರಾಮೀಣ ಸಹಕಾರಿ ಸಂಸ್ಥೆಯು ೧೩ ವರ್ಷಗಳಿಂದ ಸತತವಾಗಿ ಶೇ.೨೫ ಡಿವಿಡೆಂಡ್ ನೀಡುತ್ತಿರುವುದು ಶ್ಲಾಘನೀಯ. ಜಿಲ್ಲೆಯ ಕೃಷಿಕರು ಅಭಿವೃದ್ಧಿ ಹೊಂದಿದ್ದರೆ ಅದು ಸಹಕಾರಿ ಸಂಸ್ಥೆಗಳಿಂದ. ಅವುಗಳನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಶಾಖೆಯ ನಾಮಫಲಕ ಅನಾವರಣಗೊಳಿಸಿದ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಸೊಸೈಟಿಯು ರಾಜ್ಯಕ್ಕೆ ಮಾದರಿ. ವಿಶ್ವಾಸಾರ್ಹತೆ ಮತ್ತು ಸೇವೆಯ ಮೂಲಕ ಅತೀ ಎತ್ತರಕ್ಕೆ ಬೆಳೆದ ಸಂಸ್ಥೆ. ಸಹಕಾರಿ ಕ್ಷೇತ್ರದ ಗೋಲ್ಡನ್ ಬ್ಯಾಂಕ್ ಎಂದು ಪ್ರಸಿದ್ಧಿ ಪಡೆದಿದೆ ಎಂದರು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾ ಎ. ಮೆಂಡನ್ ಶಾಖೆಯ ಅತ್ಯಾಧುನಿಕ ಸೌಲಭ್ಯದ ಲಾಕರ್ ವ್ಯವಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

  ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಾಪು ದಿವಾಕರ ಶೆಟ್ಟಿ, ಪಿ.ಎಚ್.ಡಿ. ಪದವಿ ಪುರಸ್ಕೃತೆ ಡಾ. ಹರ್ಷಿತಾ ಎನ್.ಅಂಚನ್ ಮತ್ತು ಕರಾಟೆ ಗ್ರ್ಯಾಂಡ್ ಚಾಂಪಿಯನ್ ಧನುಷ್ ಎಸ್. ಸಾಲ್ಯಾನ್‌ರವರನ್ನು ಸನ್ಮಾನಿಸಲಾಯಿತು.

ಕಟ್ಟಡದ ಮೇಲುಸ್ತುವಾರಿ ವಹಿಸಿದ ಮೊಹಮ್ಮದ್ ಶರೀಫ್ ಮತ್ತು ಎಂಜಿನಿಯರ್ ಅಕ್ಷಯ್ ಹೆಗ್ಡೆಯವರನ್ನು ಗೌರವಿಸಲಾಯಿತು.

ಪರಿಕರ ವಿತರಣೆ: ಸೊಸೈಟಿ ವ್ಯಾಪ್ತಿಯ ಕಡಲ ಕಿನಾರೆಯನ್ನು ನಿರಂತರವಾಗಿ ಸ್ವಚ್ಛಗೊಳಿಸಿ ಉತ್ತಮ ಸಮಾಜ ಸೇವೆ ಸಲ್ಲಿಸುತ್ತಿರುವ ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದ ಮತ್ತು ಪಡುಬಿದ್ರಿ-ನಡಿಪಟ್ಣ ಕರಾವಳಿ ಸ್ಟಾರ್ ಸಂಸ್ಥೆಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು.

ಲಕ್ಕಿ ಕೂಪನ್ ಡ್ರಾ: ಠೇವಣಿದಾರರಿಗೆ ಮತ್ತು ಚಿನ್ನಾಭರಣ ಸಾಲಗಾರರಿಗಾಗಿ ನವೀಕೃತ ಶಾಖಾ ಉದ್ಘಾಟನೆ ಅಂಗವಾಗಿ ಹಮ್ಮಿಕೊಳ್ಳಲಾದ ಲಕ್ಕಿ ಕೂಪನ್ ಡ್ರಾ ನೆರವೇರಿಸಲಾಯಿತು.

ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ (Padubidri Sahakari society’s President Y Sudheer Kumar) ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಸ್ತಾವಿಸಿದರು.

ಉಪಸ್ಥಿತಿ: ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಮೋಹನ್ ಸುವರ್ಣ, ಪೂರ್ವ ಅಧ್ಯಕ್ಷರುಗಳಾದ ಪಾಂಡುರಂಗ ಕರ್ಕೇರ, ಪ್ರಾಣೇಶ್ ಹೆಜ್ಮಾಡಿ, ಸುಧಾಕರ ಕರ್ಕೇರ ಮತ್ತು ವಾಮನ ಕೋಟ್ಯಾನ್ ನಡಿಕುದ್ರು, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಶ್ರೀ ಮಹಾಲಿಂಗೇಶ್ವರ ಅಬ್ಬಗ ದಾರಗ ಅಲಡೆಯ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಕೋಡ್ದಬ್ಬು ದೈವಸ್ಥಾನದ ಕಾರ್ಯದರ್ಶಿ ರಾಜು ಹೆಜ್ಮಾಡಿ, ಅಲ್ ಅಝ್‌ಹರ್ ಶಾಲೆಯ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ವಾದಿರಾಜ ಆಚಾರ್ಯ, ಹದಿನಾರುಪಟ್ಣ ಮೊಗವೀರ ಸಭಾ ಅಧ್ಯಕ್ಷ ಎಚ್. ರವಿ ಕುಂದರ್, ಉದ್ಯಮಿ ರೋಲ್ಫಿ ಡಿಕೋಸ್ತಾ, ದೇವಾಡಿಗರ ಸಂಘದ ಅಧ್ಯಕ್ಷ ಹರೀಶ್ ದೇವಾಡಿಗ, ಉದ್ಯಮಿ ಜಯಂತ್ ಪುತ್ರನ್, ಸೊಸೈಟಿಯ ಕಾರ್ಯನಿರ್ವಹಣಾಅಧಿಕಾರಿ ಶ್ರೀಮತಿ ನಿಶ್ಮಿತಾ ಪಿ.ಎಚ್. (GM SMT Nishmitha PH), ಶಾಖಾ ವ್ಯವಸ್ಥಾಪಕಿ ಶಕುಂತಳಾ, ನಿರ್ದೇಶಕರಾದ ವೈ.ಜಿ. ರಸೂಲ್, ಗಿರೀಶ್ ಪಲಿಮಾರು, ಶಿವರಾಮ ಎನ್.ಶೆಟ್ಟಿ, ರಾಜಾರಾಮ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ., ಮಾಧವ ಅಚಾರ್ಯ, ಸ್ಟ್ಯಾನಿಯಲ್‌ ಕ್ವಾಡ್ರಸ್, ಸುಚರಿತಾ ಎಲ್. ಅಮೀನ್, ಕುಸುಮಾ ಎಮ್.ಕರ್ಕೇರ, ಕಾಂಚನಾ ಮತ್ತುಎಸ್‌ಸಿಡಿಸಿಸಿ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.