ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಇನ್ಫೋಸಿಸ್ ಸ್ಟ್ರಿಂಗ್ಬೋರ್ಡ್” ಕುರಿತು ಉಪನ್ಯಾಸ
(Bantakal) ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಐಎಸ್ಟಿಇ ವಿದ್ಯಾರ್ಥಿ ಘಟಕ, ಐಇಇಇ ವಿದ್ಯಾರ್ಥಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ, ಸಹ ಪಠ್ಯೇತರ ಘಟಕದ ಸಹಯೋಗದೊಂದಿಗೆ “ಇನ್ಫೋಸಿಸ್ ಸ್ಟ್ರಿಂಗ್ಬೋರ್ಡ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಮತಿ ಐಶ್ವರ್ಯ ರಾಜೀವ್(Ms. Aishwarya Rajeev, Senior Analyst, Infosys Ltd ), ಇನ್ಫೋಸಿಸ್ ಲಿಮಿಟೆಡ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ (Dr. Thirumaleshwara Bhat, Principal, SMVITM) ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.
ಶ್ರೀಮತಿ ಐಶ್ವರ್ಯ ರಾಜೀವ್ ಇವರು ಮಾತನಾಡಿ, ಇನ್ಫೋಸಿಸ್ ಸ್ಪಿ ಸ್ಟ್ರಿಂಗ್ಬೋರ್ಡ್ ಗಳಲ್ಲಿ ಒದಗಿಸಲಾದ ವಿವಿಧ ಕೋರ್ಸ್ಗಳಿಗೆ ಹೇಗೆ ನೊಂದಾಯಿಸಿಕೊಳ್ಳುವುದು ಎಂಬುದರ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ಅವರು ತಮ್ಮ ವೃತ್ತಿ ಜೀವನದಲ್ಲಿ ಇಂತಹ ಕೋರ್ಸ್ಗಳಿಂದ ಪಡೆದ ಪ್ರಯೋಜನಗಳ ಬಗ್ಗೆ ವಿವರಿಸಿದರು. ಇನ್ಫೋಸಿಸ್ ಸ್ಟ್ರಿಂಗ್ಬೋರ್ಡ್ ತರಬೇತಿಯ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥಿಸಿದರು.
ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೌಮ್ಯ ಜೆ ಭಟ್ ವಂದಿಸಿದರು.
ವಿದ್ಯಾರ್ಥಿನಿ ನತಾಶ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿಯರಾದ ಶ್ರೀಮತಿ ರೇಶ್ಮಾ ಮತ್ತು ಶ್ರೀಮತಿ ಚೈತ್ರಾ ಕಾರ್ಯಕ್ರಮ ಸಂಯೋಜಿಸಿದರು.

