• Home  
  • ಉಡುಪಿ ಬಿಜೆಪಿಯಲ್ಲಿ ಬಿಲ್ಲವರ ಕಡೆಗಣನೆ ಬಿಲ್ಲವರಿಂದ ಅಸಮಾಧಾನ(In Udupi BJP Neglect Billava community, is resended by Billava)
- ರಾಜಕೀಯ

ಉಡುಪಿ ಬಿಜೆಪಿಯಲ್ಲಿ ಬಿಲ್ಲವರ ಕಡೆಗಣನೆ ಬಿಲ್ಲವರಿಂದ ಅಸಮಾಧಾನ(In Udupi BJP Neglect Billava community, is resended by Billava)

Share: ಉಡುಪಿ ಬಿಜೆಪಿಯಲ್ಲಿ ಬಿಲ್ಲವರ ಕಡೆಗಣನೆ ಬಿಲ್ಲವರಿಂದ ಅಸಮಾಧಾನ (Udupi) ಉಡುಪಿ: ಉಡುಪಿ ಬಿಜೆಪಿಯಲ್ಲಿ ಬಿಲ್ಲವರನ್ನು ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ಬಿಲ್ಲವ ಸಮಾಜ ಅತಿ ದೊಡ್ಡ ಸಮಾಜ ವಾಗಿದ್ದರೂ, ಬಿಲ್ಲವರನ್ನು ಕಡೆಗಣಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿಯ ಪಕ್ಕಾ ಕಾರ್ಯಕರ್ತರು “ಈ ಮೀಡಿಯಾ ಕನ್ನಡ” ದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಕುಂದಾಪುರ ರವರು (Udupi BJP President Kishore Kumar Kundapura), ಉಡುಪಿ ಜಿಲ್ಲಾ ಮಂಡಲ ಅಧ್ಯಕ್ಷ […]

ಉಡುಪಿ ಬಿಜೆಪಿಯಲ್ಲಿ ಬಿಲ್ಲವರ ಕಡೆಗಣನೆ ಬಿಲ್ಲವರಿಂದ ಅಸಮಾಧಾನ

(Udupi) ಉಡುಪಿ: ಉಡುಪಿ ಬಿಜೆಪಿಯಲ್ಲಿ ಬಿಲ್ಲವರನ್ನು ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ಬಿಲ್ಲವ ಸಮಾಜ ಅತಿ ದೊಡ್ಡ ಸಮಾಜ ವಾಗಿದ್ದರೂ, ಬಿಲ್ಲವರನ್ನು ಕಡೆಗಣಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿಯ ಪಕ್ಕಾ ಕಾರ್ಯಕರ್ತರು “ಈ ಮೀಡಿಯಾ ಕನ್ನಡ” ದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಕುಂದಾಪುರ ರವರು (Udupi BJP President Kishore Kumar Kundapura), ಉಡುಪಿ ಜಿಲ್ಲಾ ಮಂಡಲ ಅಧ್ಯಕ್ಷ ಸ್ಥಾನಗಳಲ್ಲಿ ಬೈಂದೂರಿಗೆ ದೀಪಕ್ ಕುಮಾರ್ ಶೆಟ್ಟಿ,  ಕುಂದಾಪುರಕ್ಕೆ ಸುರೇಶ್ ಶೆಟ್ಟಿ ಬೀಜಾಡಿ, ಉಡುಪಿ  ಗ್ರಾಮಾಂತರಕ್ಕೆ ರಾಜೀವ್ ಕುಲಾಲ್, ಕಾಪುವಿಗೆ ಜಿತೇಂದ್ರ ಶೆಟ್ಟಿ, ಕಾರ್ಕಳಕ್ಕೆ ನವೀನ್ ನಾಯಕ್ ಮತ್ತು ಉಡುಪಿ ನಗರಕ್ಕೆ ಕೇವಲ ಓರ್ವ ಬಿಲ್ಲವರಾದ ದಿನೇಶ್ ಅಮೀನ್ ರವರನ್ನು ನೇಮಕ ಮಾಡಲಾಗಿದೆ.

 ಬಿಜೆಪಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಲ್ಲಿ ಕೇವಲ ಬೆರಳೆಣಿಕೆ ಸ್ಥಾನಗಳಲ್ಲಿ ಬಿಲ್ಲವರಿಗೆ ನೀಡಲಾಗಿದೆ. ಇದರಲ್ಲಿ ಸಿಂಹ ಪಾಲನ್ನು ಬಂಟ ಸಮಾಜಕ್ಕೆ ನೀಡಲಾಗಿದೆ ಎಂದು ಬಿಲ್ಲವ ಕಾರ್ಯಕರ್ತರು ಆರೋಪಿಸಿದ್ದಾರೆ.

 ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತದಾರರು ಹಾಗೂ ಅತಿ ಹೆಚ್ಚಿನ ಯುವಕರ  ದಂಡು ಬಿಲ್ಲವರಾಗಿದ್ದಾಗಿದೆ. ಆದರೂ ಬಿಲ್ಲವರನ್ನು ಕಡೆಗಣಿಸಲಾಗಿದೆ. ಇದೇ ರೀತಿ ಮುಂದುವರೆದರೆ, ಬಿಲ್ಲವರು ಪಕ್ಷಾತೀತವಾಗಿ ಒಗ್ಗಟ್ಟಾಗುವ ದಿನ ದೂರವಿಲ್ಲ ಎಂದು ಬಿಲ್ಲವ ಬಿಜೆಪಿ ಕಾರ್ಯಕರ್ತರು ಹೇಳಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

 ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಅವರು ಈಗ ಬಿಡುಗಡೆಯಾದ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಬಿಲ್ಲವರಿಗೆ ಸ್ಥಾನ ಕಲ್ಪಿಸುವ ಸಾಧ್ಯತೆ ಇಲ್ಲ. ಆದರೂ ಕ್ಯಾರೇ ಎನ್ನದೆ ಬಿಲ್ಲವರನ್ನು ಕಡೆಗಣಿಸಿದ್ದೇ ಆದರೆ, ಬಿಲ್ಲವರು ಬಿಜೆಪಿಯಿಂದ ತಟಸ್ಥರಾಗುವ ದಿನ ದೂರವಿಲ್ಲ.

Leave a comment

Your email address will not be published. Required fields are marked *

eMedia Kannada  @2025. All Rights Reserved.