ಕಾರ್ಕಳ : ಗ್ಯಾರಂಟಿ ಸಮಾವೇಶ ಉದ್ಘಾಟಿಸಿದ ಶಾಸಕ ಸುನಿಲ್ ಕುಮಾರ್
ಕಾರ್ಕಳ: ಸರ್ಕಾರದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ಒಳ್ಳೆ ಅವಕಾಶ ಇಂದು ನಮಗೆ ದೊರಕಿದೆ. ಇನ್ನು ಮುಂದೆ ಈ ಯೋಜನೆಯ ವಿಸ್ತರಣೆ ಆಗಬೇಕೆಂದು ಸರಕಾರದ ಆಶಯ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೇರೆ ಬೇರೆ ಯೋಜನೆಗಳನ್ನು ಪ್ರಕಟ ಮಾಡುತ್ತದೆ ಅದನ್ನು ಜನರಿಗೆ ಸರಿಯಾಗಿ ತಲುಪಿಸುವಂಥದ್ದು ಆಡಳಿತ ಯಂತ್ರದ ಕೆಲಸವಾಗಿರುತ್ತದೆ ಆಡಳಿತ ಯಂತ್ರ ಸಕ್ರಿಯವಾಗಿ ಕೆಲಸ ಮಾಡಿದರೆ ಈ ಉತ್ತಮ ಯೋಜನೆಗಳು ಫಲಾನುಭವಿಗಳಿಗೆ ತಲುಪಲು ಬಹಳ ಸುಲಭವಾಗುತ್ತದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಹಣಪಾವತಿಯಾಗುತ್ತಿರುವು ಶ್ಲಾಘನೀಯ ಎಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ . ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟರು .
ಅವರು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಗ್ಯಾರಂಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು, ಫಲಾನುಭವಿಗಳಿಗೆ ಆಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಿದರು.
ತಾಲೂಕು ದಂಡಾಧಿಕಾರಿ ನರಸಪ್ಪ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ನಿರ್ವಹಣಾ ಅಧಿಕಾರಿ ಶಾಂತಪ್ಪ, ಪಂಚಾಯತ್ ಅಧ್ಯಕ್ಷರು, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
ಕಾರ್ಕಳ ಪುರಸಭಾಧಿಕಾರಿ ರೂಪ ಶೆಟ್ಟಿ ನಿರೂಪಿಸಿ, ವಂದಿಸಿದರು.


1 Comment
Anwar ali
2 March 2024ಗ್ಯಾರಂಟಿ ಯ ವಿರುದ್ಧ ಧ್ವನಿ ಎತ್ತಿದವರು, ಇಂದು ಗ್ಯಾರಂಟಿಯ ಪರ ಮಾತಾಡುತ್ತಾರಲ್ಲ? 🤔