• Home  
  • ಕಲ್ಲಡ್ಕ ವಿಠ್ಠಲ್ ನಾಯ್ಕ್ ರವರ ತಾಳಕ್ಕೆ  ಕುಣಿದ ಮಸ್ಕತ್‌ನ ಬಿರುವ ಜವನೆರ್ (Kalladka Vittal Naik at Muscat)
- ದೇಶ-ವಿದೇಶ

ಕಲ್ಲಡ್ಕ ವಿಠ್ಠಲ್ ನಾಯ್ಕ್ ರವರ ತಾಳಕ್ಕೆ  ಕುಣಿದ ಮಸ್ಕತ್‌ನ ಬಿರುವ ಜವನೆರ್ (Kalladka Vittal Naik at Muscat)

Share: ಕಲ್ಲಡ್ಕ ವಿಠ್ಠಲ್ ನಾಯ್ಕ್ ರವರ ತಾಳಕ್ಕೆ  ಕುಣಿದ ಮಸ್ಕತ್‌ನ ಬಿರುವ ಜವನೆರ್ (Muscat) ಮಂಗಳೂರು: ಕಳೆದ ಒಂದು ದಶಕದಿಂದ ಒಮಾನ್ ರಾಷ್ಟ್ರ ದಲ್ಲಿ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಕ್ರಮ ಗಳನ್ನು ನಿರಂತರ ವಾಗಿ ಸಂಘಟಿಸುತ್ತಿರುವ ಬಿರುವ ಜವನೆರ್ ಮಸ್ಕತ್ ಸಂಘಟನೆಯ ಆಶ್ರಯ ದಲ್ಲಿ ಖ್ಯಾತ ವಾಗ್ಮಿ, ಹಾಡುಗಾರ, ಕೀರ್ತನೆಗಾರ, ನಿರೂಪಕ, ಕಲಾ ಸಾಧಕ “ಗೀತಾ ಸಾಹಿತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮದ ಪರಿಕಲ್ಪನೆಯ ರೂವಾರಿ ಕಲ್ಲಡ್ಕ ವಿಠ್ಠಲ್ ನಾಯ್ಕ್ Kalladka Vittal Naik) ಬಳಗ ದವರಿಂದ ಹಾಸ್ಯ […]

ಕಲ್ಲಡ್ಕ ವಿಠ್ಠಲ್ ನಾಯ್ಕ್ ರವರ ತಾಳಕ್ಕೆ  ಕುಣಿದ ಮಸ್ಕತ್‌ನ ಬಿರುವ ಜವನೆರ್

(Muscat) ಮಂಗಳೂರು: ಕಳೆದ ಒಂದು ದಶಕದಿಂದ ಒಮಾನ್ ರಾಷ್ಟ್ರ ದಲ್ಲಿ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಕ್ರಮ ಗಳನ್ನು ನಿರಂತರ ವಾಗಿ ಸಂಘಟಿಸುತ್ತಿರುವ ಬಿರುವ ಜವನೆರ್ ಮಸ್ಕತ್ ಸಂಘಟನೆಯ ಆಶ್ರಯ ದಲ್ಲಿ ಖ್ಯಾತ ವಾಗ್ಮಿ, ಹಾಡುಗಾರ, ಕೀರ್ತನೆಗಾರ, ನಿರೂಪಕ, ಕಲಾ ಸಾಧಕ “ಗೀತಾ ಸಾಹಿತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮದ ಪರಿಕಲ್ಪನೆಯ ರೂವಾರಿ ಕಲ್ಲಡ್ಕ ವಿಠ್ಠಲ್ ನಾಯ್ಕ್ Kalladka Vittal Naik) ಬಳಗ ದವರಿಂದ ಹಾಸ್ಯ ಲಾಸ್ಯ ಭರಿತ ವಿಶಿಷ್ಟ ಕಾರ್ಯಕ್ರಮ ಜರಗಿತು.

ಮಸ್ಕತ್ ನ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನೆರೆದ ಸುಮಾರು ಒಂದೂವರೆ ಸಹಸ್ರ ತುಳುವರನ್ನು ಕಲ್ಲಡ್ಕದವರು ಸುಮಾರು ಎರಡೂವರೆ ತಾಸುಗಳ ಕಾಲ ನಗೆ ಬಾಂಬ್ ಸ್ಪೋಟಿಸುತ್ತಾ ಮಾನವೀಯತೆ, ಸ್ನೇಹ, ಸೌಹಾರ್ಧತೆಯ ಬದುಕಿನ ಪ್ರೇರಣೆ ನೀಡುತ್ತಾ ಮನ ಸೂರೆ ಗೊಂಡರು.

 ಹಿಮ್ಮೇಳದಲ್ಲಿ ಸುಧನ್ವ ಕೃಷ್ಣ ಹಾಗೂ ಮುರಳಿ ಸಹಕರಿಸಿದರು.

ನಿತ್ಯ ನೂತನ “ಗೀತಾ ಸಾಹಿತ್ಯ ಸಂಭ್ರಮ” ಖ್ಯಾತಿಯ ಕಲ್ಲಡ್ಕ ವಿಠ್ಠಲ ನಾಯ್ಕ್ ಅವರು  ಹಾಡಿದಾಗ” ಬಿರುವ ಜವನೆರ್ ಮಸ್ಕತ್” ನ ಕಲಾವಿದರು ಹೆಜ್ಜೆ ಹಾಕಿ ತಾಳಕ್ಕೆ ತಕ್ಕಂತೆ ಆಕರ್ಷಣೀಯ ಕುಣಿತ ಭಜನೆ ಮಾಡಿದರು.

 ಬಿರುವ ಜವನೆರ್ ಕೂಟದ ಗುರುಪ್ರಸಾದ್ ನಾನಿಲ್, ನಿತಿನ್  ಹುಣಸೆಕಟ್ಟೆ, ಶಂಕರ್ ಉಪ್ಪೂರು, ಶ್ರೀಧರ, ದಾಮೋದರ, ಸತೀಶ್, ಗೌತಮ್, ಚಂದ್ರಕಾಂತ್ ಕೋಟ್ಯಾನ್, ಹರೀಶ್ ಅಮೀನ್, ಮನೋಹರ ಸಾಲಿಯಾನ್, ಶೈಲೇಶ್ ಪೂಜಾರಿ, ಶ್ರೇಯಸ್, ಪ್ರವೀಣ್ ಅಮೀನ್, ಶರಣ್ ಪೂಜಾರಿ, ರಾಜೇಶ್ ಮಟ್ಟು, ಅರುಣ್ ಕುಮಾರ್, ಧನು, ಸುದೀರ್ಯನ್. ಕೆ, ಕಿರಣ್, ಅರುಣ್ ಬಂಗೇರ, ಪ್ರಶಾಂತ್ ಬಂಗೇರ, ಅರುಣ್ ಪೂಜಾರಿ, ವಿಶ್ವನಾಥ್ ಬಂಗೇರ, ಮಾಧುರಿ ಸುವರ್ಣ, ಶೋಭಾ, ಅಕ್ಷತಾ ಹಾಗೂ ಮಸ್ಕತ್ ನಲ್ಲಿ ನೆಲೆಸಿರುವ ಕರಾವಳಿ ಮೂಲದ ಎಲ್ಲಾ ಸಮುದಾಯದ ಸಂಗೀತ ಆಸಕ್ತರು, ಕನ್ನಡ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.