• Home  
  • “ಯಕ್ಷೋತ್ಸವ 2024” : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡಕ್ಕೆ ಮೂರನೇ ಸ್ಥಾನ (YAKSHASINCHANA TEAM OF SMVITM WON THIRD PLACE IN “YAKSHOTHSAVA 2024”)
- ಶಾಲಾ ಕಾಲೇಜು

“ಯಕ್ಷೋತ್ಸವ 2024” : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡಕ್ಕೆ ಮೂರನೇ ಸ್ಥಾನ (YAKSHASINCHANA TEAM OF SMVITM WON THIRD PLACE IN “YAKSHOTHSAVA 2024”)

Share:  “ಯಕ್ಷೋತ್ಸವ 2024” : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡಕ್ಕೆ ಮೂರನೇ ಸ್ಥಾನ ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (SMVITM College Bantakal) ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ  ತಂಡವು ದಿನಾಂಕ 23, 24 ಮತ್ತು 25ಫೆಬ್ರವರಿ 2024 ರಂದು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು (Shri Dharmastala Manjunatheshwara Law College Mangaluru), ಇಲ್ಲಿ ನಡೆದ “ಯಕ್ಷೋತ್ಸವ ೨೦೨೪” ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಬಹುಮಾನಗಳಿಸಿದೆ. ಒಟ್ಟು ಹನ್ನೊಂದು ತಂಡಗಳು […]

 “ಯಕ್ಷೋತ್ಸವ 2024” : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡಕ್ಕೆ ಮೂರನೇ ಸ್ಥಾನ

ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (SMVITM College Bantakal) ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ  ತಂಡವು ದಿನಾಂಕ 23, 24 ಮತ್ತು 25ಫೆಬ್ರವರಿ 2024 ರಂದು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು (Shri Dharmastala Manjunatheshwara Law College Mangaluru), ಇಲ್ಲಿ ನಡೆದ “ಯಕ್ಷೋತ್ಸವ ೨೦೨೪” ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಬಹುಮಾನಗಳಿಸಿದೆ.

ಒಟ್ಟು ಹನ್ನೊಂದು ತಂಡಗಳು ಮೊದಲ ಸುತ್ತಿನಲ್ಲಿ ಭಾಗವಹಿಸಿದ್ದು, ಇಚ್ಛೆಯ ಪ್ರಸಂಗವನ್ನು ಆಡಲು ಅವಕಾಶವಿತ್ತು. ಈ ಹನ್ನೊಂದು ತಂಡಗಳಲ್ಲಿ ಒಟ್ಟು ಐದು ತಂಡಗಳು ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಪಡೆದವು.

 ಎರಡನೇ ಸುತ್ತಿನಲ್ಲಿ ಎಲ್ಲಾ ತಂಡಗಳೂ “ಸುಧನ್ವಾರ್ಜುನ ಕಾಳಗ”ಎಂಬ ಪ್ರಸಂಗವನ್ನು ಪ್ರದರ್ಶಿಸಬೇಕಾಗಿತ್ತು. ತೆಂಕು ತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರು ಈ ಸ್ಪರ್ಧೆಯ ಮೌಲ್ಯಮಾಪನ ನಡೆಸಿದ್ದರು.

ಈ ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಗಣೇಶ್ ಪ್ರಸಾದ್ ನಾಯಕ್ ಇವರ ಹಾಸ್ಯ ವೇಷಕ್ಕೆ ದ್ವಿತೀಯ ಬಹುಮಾನ, ಗಣೇಶ್ ಪ್ರಸಾದ್ ಇವರ ರಾಜ ವೇಷಕ್ಕೆ ಪ್ರಥಮ ಬಹುಮಾನ ಮತ್ತು ತಂಡದ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕ ವರ್ಗ ಮತ್ತಿ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.