• Home  
  •  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಉತ್ಸವದ ಪ್ರಯುಕ್ತ ಧ್ವಜಾರೋಹಣ (padubidri temple yearly festival)
- ಧಾರ್ಮಿಕ

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಉತ್ಸವದ ಪ್ರಯುಕ್ತ ಧ್ವಜಾರೋಹಣ (padubidri temple yearly festival)

Share: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಉತ್ಸವದ ಪ್ರಯುಕ್ತ ಧ್ವಜಾರೋಹಣ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು.   ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಅಂಗವಾಗಿ ಪ್ರತಿವರ್ಷದಂತೆ ಮೀನ ಸಂಕ್ರಮಣದ ದಿನ ಧ್ವಜಾರೋಹಣ ನೆರವೇರಿದೆ. ಕ್ಷೇತ್ರದ ತಂತ್ರಿ ಕಂಬ್ಳೆಕಟ್ಟ ವೇದಮೂರ್ತಿ ಗಿರಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಬಳಿಕ ದೇವರ ಬಲಿಯೊಂದಿಗೆ ಧ್ವಜಾರೋಹಣ ನೆರವೇರಿತು.   ದೇವಸ್ಥಾನದ ಆನುವಂಶಿಕ ಮೊತ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ […]

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಉತ್ಸವದ ಪ್ರಯುಕ್ತ ಧ್ವಜಾರೋಹಣ

(Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು.

  ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಅಂಗವಾಗಿ ಪ್ರತಿವರ್ಷದಂತೆ ಮೀನ ಸಂಕ್ರಮಣದ ದಿನ ಧ್ವಜಾರೋಹಣ ನೆರವೇರಿದೆ.

ಕ್ಷೇತ್ರದ ತಂತ್ರಿ ಕಂಬ್ಳೆಕಟ್ಟ ವೇದಮೂರ್ತಿ ಗಿರಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಬಳಿಕ ದೇವರ ಬಲಿಯೊಂದಿಗೆ ಧ್ವಜಾರೋಹಣ ನೆರವೇರಿತು.

  ದೇವಸ್ಥಾನದ ಆನುವಂಶಿಕ ಮೊತ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು, ತನ್ನು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್

 ಕೋಟೆಕಾರ್, ಅರ್ಚಕ ಪದ್ಮನಾಭ ಭಟ್, ವೈ. ಗಣಪತಿ ಭಟ್ ಮತ್ತಿತರರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯಿತು.

 ಶ್ರೀನಾಥ್ ಹೆಗ್ಡೆ ಸಹಿತ ವಿವಿಧ ಗುತ್ತು ಬರ್ಕೆಯ ಪ್ರಮುಖರು, ರಾಮಕೃಷ್ಣ ಆಚಾರ್ಯ, ಪಾತ್ರಿ ಹರಿನಾರಾಯಣ ರಾವ್, ಗುರಿಕಾರ ಜಗದೀಶ ರಾವ್‌, ವೈ. ಸುರೇಶ್ ರಾವ್, ಶ್ರೀಧರ ಆಚಾರ್ಯ, ರಾಘವೇಂದ್ರ ನಾವಡ, ಪ್ರಕಾಶ್ ಶೆಟ್ಟಿ ಪಡುಹಿತ್ತು ಮಾಧವ ಸಿ.ಶೆಟ್ಟಿ ಗಣೇಶ್ ಕೋಟ್ಯಾನ್, ರಮಾಕಾಂತ ರಾವ್, ಮುರಳೀನಾಥ ಶೆಟ್ಟಿ ಡಾ. ಎನ್. ಟಿ. ಅಂಚನ್, ಶಿವಪ್ರಸಾದ ಶೆಟ್ಟಿ ಎಲ್ಲದಡಿ, ಅಶೋಕ ಸಾಲ್ಯಾನ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.