ಬೈಂದೂರು – ಶಿವಮೊಗ್ಗ: ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ
(kundapura) ಕುಂದಾಪುರ : 2024 ರ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಶಿವಮೊಗ್ಗ ಭಾಗಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ (Geetha Shivraj Kumar) ಸ್ಪರ್ಧಿಸಲಿದ್ದಾರೆ ಎಂದು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ಅವರು ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆ ಎದುರಿಸುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ ಎನ್ನುವುದು ಬರೀ ಭಾಷಣಕ್ಕೆ ಮಾತ್ರ ಅಲ್ಲದೆ, ಅದನ್ನು ಅನುಷ್ಠಾನ ಮಾಡಿದಂತೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತ ವಾಗಿ ನಾವು ಮಾಡಿದ್ದೇವೆ. ಆ ನಿಟ್ಟಿನಲ್ಲಿ ತುಂಬಾ ಧೈರ್ಯದಿಂದ ಮನೆ ಮನೆಗೆ ಹೋಗಿ ಮತ ಕೇಳಲು ಸಾಧ್ಯವಾಗುತ್ತದೆ ಎಂದರು.
ಹಿಂದುತ್ವ, ರಾಮ, ಕೃಷ್ಣ ಎನ್ನುವುದು ಗುಡಿಯಲ್ಲಿ ಇರಬೇಕೇ ಹೊರತು ಜನರ ಸೇವೆ ಮಾಡಲು ಜಾತಿ, ಧರ್ಮ ಅನ್ನುವುದು ರಾಜಕೀಯದಲ್ಲಿ ತರುವಂತಹಾ ಕೆಲಸ ಮಾಡಬಾರದು.
ಅಭಿವೃದ್ಧಿಯ ಚಿಂತನೆಯನ್ನು ಮನದಲ್ಲಿರಿಸಿ ಸರ್ಕಾರಕ್ಕೆ ವಿಶ್ವಾಸ ಇಟ್ಟು ಜನ ಸಹಕಾರ ನೀಡುತ್ತಾರೆ ಎನ್ನುವ ಭರವಸೆಯ ಮೇರೆಗೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಲಿದ್ದಾರೆ ಎಂದರು.
ಸುದ್ದಿಗೊಷ್ಟಿಯಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ್ ಪೂಜಾರಿ(EX MLA Gopala Poojary) ,ಕಾಂಗ್ರೆಸ್ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು(Ashok Kumar Kodavuru), ಕೆಪಿಸಿಸಿ ಮುಖಂಡ ಮೊಯಿದಿನ್ ಬಾವ (Moidin Bava), ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಬೀಜಾಡಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

