• Home  
  • ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು  (Uppinangadi: Man drowning in the river water)
- ಅಪರಾಧ

ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು  (Uppinangadi: Man drowning in the river water)

Share: ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು    ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಸವಣೂರು ಸಮೀಪದ ಅಂಕತ್ತಡ್ಕದ ಮಂಜುನಾಥ್‌ (35) ಎಂದು ಗುರುತಿಸಲಾಗಿದೆ. ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಮಂಜುನಾಥ್‌ ಮುಳುಗಿದ್ದಾರೆ. ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಆಸುಪಾಸಿನ ಮಂದಿ ಧಾವಿಸಿ ಬಂದು […]

ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು  

 ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಸವಣೂರು ಸಮೀಪದ ಅಂಕತ್ತಡ್ಕದ ಮಂಜುನಾಥ್‌ (35) ಎಂದು ಗುರುತಿಸಲಾಗಿದೆ.

ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಮಂಜುನಾಥ್‌ ಮುಳುಗಿದ್ದಾರೆ. ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಆಸುಪಾಸಿನ ಮಂದಿ ಧಾವಿಸಿ ಬಂದು ಹಗ್ಗದ ಸಹಾಯದಿಂದ ನದಿ ನೀರಿಗಿಳಿದು ಅವರನ್ನು ಮೇಲೆತ್ತಿ ತಂದು ಪ್ರಥಮ ಚಿಕಿತ್ಸೆಯ ಬಳಿಕ ಆ್ಯಂಬುಲೆನ್ಸ್‌ ಮೂಲಕ ಪುತ್ತೂರು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.