ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕಾಪು ಜೆಡಿಎಸ್ ಕಚೇರಿಗೆ ಭೇಟಿ
(Kaup) ಕಾಪು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ವಿ ಶೆಟ್ಟಿ ಯವರ ಕಚೇರಿಗೆ ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ಅವರನ್ನು ಯೋಗೇಶ್ ವಿ ಶೆಟ್ಟಿ ಮತ್ತು ಪಕ್ಷದ ಸದಸ್ಯರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಅವರೊಂದಿಗೆ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ನವೀನ್ ಶೆಟ್ಟಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಾಜ್ಯ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಗಂಗಾಧರ ಬಿರ್ತಿ, ಕಾಪು ಬ್ಲಾಕ್ ಅಧ್ಯಕ್ಷ ಇಕ್ಬಾಲ್ ಅತ್ರಾಡಿ, ಜೆಡಿಎಸ್ ಪುರಸಭಾ ಸದಸ್ಯಉಮೇಶ್ ಕರ್ಕೇರ, ದೇವರಾಜ ತೊಟ್ಟಂ, ಕಾರ್ಕಳ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಹೆಬ್ರಿ, ಯುವ ಜನತಾದಳ ಅಧ್ಯಕ್ಷ ಸಂಜಯ್ ಕುಮಾರ್, ರಮೇಶ್ ಕುಂದಾಪುರ, ಹುಸೇನ್ ಹೈಕಾಡಿ, ಕೀರ್ತಿರಾಜ್, ಚಂದ್ರಹಾಸ ಏರ್ಮಲ್, ಸುರೇಶ್ ದೇವಾಡಿಗ, ವೆಂಕಟೇಶ್ ಎಂ ಟಿ, ಆಶ್ರಫ್ ಪಡುಬಿದ್ರಿ, ರಂಗ ಆರ್ ಕೋಟ್ಯಾನ್, ವಿನ್ಸೆಂಟ್ ಸುನಿಲ್ ಅಲ್ಮೇಡ, ಹರಿಣಿ ಆರ್ ಕೋಟ್ಯಾನ್, ವಸುಮತಿ, ಯು ಆರ್ ರಶೀದ್, ಪದ್ಮನಾಭ ಆರ್ ಕೋಟ್ಯಾನ್, ಮತ್ತು ನಾಯಕರು ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

