• Home  
  • ಪ್ರಧಾನಿ ಮೋದಿ ಅವರ ಜನಪರ ಸಾಧನೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ : ಕೋಟ ಶ್ರೀನಿವಾಸ ಪೂಜಾರಿ (Prime Minister Modi’s pro-people achievements will help BJP win: Kota Shrinivasa poojary)
- ರಾಜಕೀಯ - ವಿಡಿಯೋ

ಪ್ರಧಾನಿ ಮೋದಿ ಅವರ ಜನಪರ ಸಾಧನೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ : ಕೋಟ ಶ್ರೀನಿವಾಸ ಪೂಜಾರಿ (Prime Minister Modi’s pro-people achievements will help BJP win: Kota Shrinivasa poojary)

Share: ಪ್ರಧಾನಿ ಮೋದಿ ಅವರ ಜನಪರ ಸಾಧನೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ : ಕೋಟ ಶ್ರೀನಿವಾಸ ಪೂಜಾರಿ (Kaup) ಕಾಪು: ಬಿಜೆಪಿ ಪಕ್ಷವು ನಿಶ್ಚಲವಾದ ಬಹುಮತದೊಂದಿಗೆ ಭಾರೀ ಅಂತರದ ಗೆಲುವನ್ನು ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಗಳಿಸಲಿದೆ. ಈಗಾಗಲೇ ಪ್ರಥಮ ಸುತ್ತಿನ ಪ್ರಚಾರ ಮುಗಿದಿದೆ. ಏಪ್ರಿಲ್ 3 ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.  ಅವರು ಶನಿವಾರ ಕಾಪುವಿನ ಕೆ 1 ಹೊಟೇಲು ಸಭಾಭವನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ […]

ಪ್ರಧಾನಿ ಮೋದಿ ಅವರ ಜನಪರ ಸಾಧನೆಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ : ಕೋಟ ಶ್ರೀನಿವಾಸ ಪೂಜಾರಿ

(Kaup) ಕಾಪು: ಬಿಜೆಪಿ ಪಕ್ಷವು ನಿಶ್ಚಲವಾದ ಬಹುಮತದೊಂದಿಗೆ ಭಾರೀ ಅಂತರದ ಗೆಲುವನ್ನು ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಗಳಿಸಲಿದೆ. ಈಗಾಗಲೇ ಪ್ರಥಮ ಸುತ್ತಿನ ಪ್ರಚಾರ ಮುಗಿದಿದೆ. ಏಪ್ರಿಲ್ 3 ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು

ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

 ಅವರು ಶನಿವಾರ ಕಾಪುವಿನ ಕೆ 1 ಹೊಟೇಲು ಸಭಾಭವನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ  ನೀಡಿದರು.

ಪ್ರಥಮ ಸುತ್ತಿನ ಮತದಾರರ ಭೇಟಿಯ ಮೂಲಕ ಮತಯಾಚನೆಯನ್ನು ಈಗಾಗಲೇ ಪೂರೈಸಲಾಗಿದ್ದು, ಬೂತ್ ಮಟ್ಟದ ಸಂಘಟನೆಯು ಪ್ರಬಲವಾಗಿದೆ. ಆ ಮೂಲಕ ದೊಡ್ಡ ಮಟ್ಟದ ಸಂಘಟನೆಯು ಬಿಜೆಪಿ ಗೆಲುವಿಗೆ ಕಾರಣವಾಗÀಲಿದೆ. ರಾಜ್ಯದಲ್ಲಿ ಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ನಡೆಸಿದ ಆಡಳಿತಾತ್ಮಕ ಅನುಭವ-ಸರಕಾರದ ಸಮಸ್ಯೆಗಳ ಅರಿವು ಹೊಂದಿದ್ದು, ರೈಲ್ವೇ, ನೀರಾವರಿಗೆ ಹೆಚ್ಚಿನ ಒತ್ತು ನೀಡಿ ಕೇಂದ್ರ ಮತ್ತು ರಾಜ್ಯದ ಸಮನ್ವಯದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಕ್ಷೇತ್ರವನ್ನು ಮುನ್ನಡೆಸಲು ಮತ್ತು ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಜನತೆ ಆಶೀರ್ವಾದ ನೀಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ (MLA Gurme Suresh Shetty), ಕಿರಣ್ ಕುಮಾರ್ ಕೊಡ್ಗಿ(MLA Kirankumar Khodgi), ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ (EX MLA Lalaji R Mendon), ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಎಂ. ಸುವರ್ಣ, ನವೀನ್ ಶೆಟ್ಟಿ ಕುತ್ಯಾರು, ಗೋಪಾಲಕೃಷ್ಣ ರಾವ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯ ಕುಮಾರ್, ಕೆ. ವಾಸುದೇವ ರಾವ್ ಮತ್ತಿತರರು ಉಪಸ್ಥಿತರಿದ್ದರು.

  • ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ಹೊತು ಪಡಿಸಿ, ನಿಮ್ಮ ಸಾಧನೆ ಹೇಳಿ ಎಂದು ಪತ್ರಕರ್ತರು ಹೇಳಿದಾಗ, ಕೋಟ ಶ್ರೀನಿವಾಸ ಪೂಜಾರಿಯವರು,
  • ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಸದಸ್ಯನಾಗಿ ಕೆಲಸಮಾಡಿದ್ದೇನೆ. ಮಂತ್ರಿಯಾಗಿದ್ದಾಗ ನನ್ನ ಕೋರಿಕೆಯ ಮೇರೆಗೆ ಪಂಚಾಯತ್ ಸದಸ್ಯರಿಗೆ ಗೌರವ ಧನವನ್ನು ಮಂಜೂರು ಮಾಡಿಸಿದ್ದೇನೆ. ಮೀನುಗಾರಿಕೆ ಮಂತ್ರಿಯಾಗಿದ್ದಾಗ ಹೆಜಮಾಡಿ ಬಂದರಿಗೆ 181ಕೋಟಿ ರೂ ಬಿಡುಗಡೆ ಮಾಡಿಸಿ ಮಾನ್ಯ ಮುಖ್ಯಮಂತ್ರಿ ಯವರಿಂದ ಶಿಲಾನ್ಯಾಸ ಕೆಲಸ ಆಗಿದೆ.
  •  22,000 ಜನ ಮಹಿಳೆಯರಿಗೆ ಸಾಲ ಮನ್ನ ಮಾಡಿಸಿದ ಸಮಾಧಾನವಿದೆ. ಹಿಂದುಳಿದ ವರ್ಗದ ಮಂತ್ರಿಯಾಗಿದ್ದಾಗ 36,000 ಜನ ಬಡ ಮಕ್ಕಳನ್ನು ಏಕ ಕಾಲದಲ್ಲಿ ಉಚಿತವಾಗಿ ಹಾಸ್ಟೇಲ್‌ಗೆ ಸೇರಿಸಿದ್ದೇನೆ.
  •  4 ನಾರಾಯಣ ಗುರು ವಸತಿ ಶಾಲೆಯನ್ನು ಪ್ರಾರಂಭಿಸಿದ್ದೇನೆ.
  • ಉಡುಪಿಯಲ್ಲಿ ಅಗ್ನಿಪಥ್ ಶಿಬಿರವನ್ನು ಏರ್ಪಡಿಸಿದ್ದೇನೆ ಎಂದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.