• Home  
  • ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Modi to Mangaluru : Limited to Road Show
- ರಾಜಕೀಯ

ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Modi to Mangaluru : Limited to Road Show

Share: ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Mangaluru) ಮಂಗಳೂರು: ಮಂಗಳೂರಿಗೆ ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ (BJP DK Candidate brijesh Chauta) ಅವರ ಪರವಾಗಿ ಪ್ರಚಾರಕ್ಕೆ ಆಗಮಿಸುವ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಬಿಜೆಪಿ ಸಿದ್ಧತೆಯಲ್ಲಿ ತೊಡಗಿರುವಾಗಲೇ ರದ್ದುಗೊಂಡ ಮಾಹಿತಿ ಬಂದಿದೆ.  ಸಭಾ ಕಾರ್ಯಕ್ರಮವನ್ನು ಆಯೋಜಿಸುವ ಬದಲು ಕೇವಲ ರೋಡ್ ಶೋ ಕಾರ್ಯಕ್ರಮಕ್ಕೆ ನರೇಂದ್ರ ಮೋದಿಯವರ ಕಾರ್ಯಕ್ರಮ ಆಯೋಜಿಸಲು ಆದೇಶ ಬಂದಿದೆ. ನರೇಂದ್ರ ಮೋದಿಯವರ […]

ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ

(Mangaluru) ಮಂಗಳೂರು: ಮಂಗಳೂರಿಗೆ ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ (BJP DK Candidate brijesh Chauta) ಅವರ ಪರವಾಗಿ ಪ್ರಚಾರಕ್ಕೆ ಆಗಮಿಸುವ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಬಿಜೆಪಿ ಸಿದ್ಧತೆಯಲ್ಲಿ ತೊಡಗಿರುವಾಗಲೇ ರದ್ದುಗೊಂಡ ಮಾಹಿತಿ ಬಂದಿದೆ.

 ಸಭಾ ಕಾರ್ಯಕ್ರಮವನ್ನು ಆಯೋಜಿಸುವ ಬದಲು ಕೇವಲ ರೋಡ್ ಶೋ ಕಾರ್ಯಕ್ರಮಕ್ಕೆ ನರೇಂದ್ರ ಮೋದಿಯವರ ಕಾರ್ಯಕ್ರಮ ಆಯೋಜಿಸಲು ಆದೇಶ ಬಂದಿದೆ.

ನರೇಂದ್ರ ಮೋದಿಯವರ ಸಭಾ ಕಾರ್ಯಕ್ರಮಕ್ಕೆ ಸಿದ್ಧತೆಗೊಳಿಸಲು ಬುಧವಾರ ಬಿಜೆಪಿ ನಾಯಕರು ಚಪ್ಪರ ಮುಹೂರ್ತವನ್ನು ನೆರವೇರಿಸಿದ್ದಾರೆ.

ಕೂಳೂರು ಬಳಿ ಇರುವ ಗೋಲ್ಡ್ ಫ್ಲಿಂಚ್ ಬೃಹತ್ ಮೈದಾನವನ್ನು (Gold finch Ground kuluru) ಸಮತಟ್ಟುಗೊಳಿಸಲು ನಾಲ್ಕಾರು ಜೆಸಿಬಿಗಳು ಕಾರ್ಯ ನಿರ್ವಹಿಸುತ್ತಿದ್ದವು.

ಆದರೆ ಕಾರ್ಯಕ್ರಮ ರದ್ದುಗೊಂಡಿರುವ ಮಾಹಿತಿ ಬರುತ್ತಿದ್ದಂತೆ ಸಭಾ ಕಾರ್ಯಕ್ರಮ ಆಯೋಜನೆಯ ಸಿದ್ಧತೆಗಳನ್ನು ಇಂದು ಸ್ಥಗಿತಗೊಳಿಸಲಾಯಿತು.

 ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್(MLA Vedavyasa Kamath), ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ(MLA Dr Y Bharath Shetty), ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ(DK President Sathish kumpala), ಮತ್ತಿತರ ನಾಯಕರು ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಸಿದ್ಧತೆಗಳಿಗೆ ಆಗಮಿಸಿದ್ದರು.

 ಸಭಾ ಕಾರ್ಯಕ್ರಮ ರದ್ದತಿಯಿಂದ ಬಿಜೆಪಿ ನಾಯಕರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.