• Home  
  • ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ (Vaddarse : Grameena Congress meeting)
- ರಾಜಕೀಯ

ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ (Vaddarse : Grameena Congress meeting)

Share:  ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ  (Kota) ಕೋಟ: ಕುಂದಾಪುರ ವಿಧಾನಸಭಾ  ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್  ವ್ಯಾಪ್ತಿಯ ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಬನ್ನಾಡಿ ಸುಬ್ಬಣ್ಣ ಹೆಗಡೆ ಸಭಾಭವನದಲ್ಲಿ  ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.   ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆರವರ ಪರವಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ  ಮತಯಾಚನೆ ನಡೆಸಿದ ಬಳಿಕ […]

 ವಡ್ಡರ್ಸೆ ಗ್ರಾಮ ಪಂಚಾಯತ್ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ 

(Kota) ಕೋಟ: ಕುಂದಾಪುರ ವಿಧಾನಸಭಾ  ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್  ವ್ಯಾಪ್ತಿಯ ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಬನ್ನಾಡಿ ಸುಬ್ಬಣ್ಣ ಹೆಗಡೆ ಸಭಾಭವನದಲ್ಲಿ  ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.

  ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆರವರ ಪರವಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ  ಮತಯಾಚನೆ ನಡೆಸಿದ ಬಳಿಕ ಸಭೆಯಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸಿ ಮತಯಾಚಿಸುವ ಬಗ್ಗೆ ಮಾಹಿತಿ ನೀಡಲಾಯಿತು.

  ಸಭೆಯಲ್ಲಿ ವಡ್ಡರ್ಸೆ ಗ್ರಾಮೀಣ ಸಮಿತಿ ಅಧ್ಯಕ್ಷ ಚಂದ್ರ ಶೆಟ್ಟಿ ವಡ್ಡರ್ಸೆ, ಕೆಪಿಸಿಸಿ ಕಾರ್ಯದರ್ಶಿ ನಿವೃತ್ತ ಪೊಲೀಸ್ ಅಧಿಕಾರಿ ಜಿ. ಎ. ಬಾವ, ಮಾಜಿ ಶಾಸಕ ಬೈಂದೂರು ಗೋಪಾಲ ಪೂಜಾರಿ (EX MLA Gopala Poojary), ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ,  ಕಿಶನ್ ಹೆಗ್ಡೆ ಕೊಲ್ಕೆಬೈಲು, ವಿನಯ್ ಕುಮಾರ್ ಕಬ್ಯಾಡಿ, ಭೋಜ ಹೆಗ್ಡೆ ಉಪ್ಲಾಡಿ, ಚಂದ್ರಶೇಖರ್ ಶೆಟ್ಟಿ ಅಚ್ಚಲಾಡಿ,  ಅಜಿತ್ ಶೆಟ್ಟಿ, ಜಯಲಕ್ಷ್ಮೀ ಆಚಾರ್ ವಡ್ಡರ್ಸೆ, ಕುಮಾರಿ ನಯನ ವಡ್ಡರ್ಸೆ, ಭಾಸ್ಕರ್ ಪೂಜಾರಿ ಬನ್ನಾಡಿ, ಉದಯ ಕುಮಾರ ಶೆಟ್ಟಿ ಕೊತ್ತಾಡಿ, ಸೂರ್ಯಕಾಂತ್ ಶೆಟ್ಟಿ, ದಿನೇಶ್ ಬಂಗೇರ, ಎಂ. ಎಸ್. ಸಂಜೀವ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು, ಬೂತ್ ಮಟ್ಟದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಜಯಪ್ರಕಾಶ್ ಹೆಗ್ಡೆ ಅವರ ಹಿತೈಷಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕೋಟ ಬ್ಲಾಕ್ ಕಾಂಗ್ರೆಸ್‌ನ SC, ST  ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ವಡ್ಡರ್ಸೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.