ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ತಯಾರಿಸಿದೆ : ಉದಯಕುಮಾರ್ ಶೆಟ್ಟಿ
ಉಡುಪಿ: ಬಿಜೆಪಿ 15 ಲಕ್ಷ ಜನಾಭಿಪ್ರಾಯ ಸಂಗ್ರಹಣೆ ಮಾಡಿ ಚುನಾವಣಾ ಪ್ರಣಾಳಿಕೆ ಸಿದ್ಧಮಾಡಿದೆ. ಪ್ರಣಾಳಿಕೆ ಸಮಿತಿ ಎಲ್ಲರ ಅಭಿಪ್ರಾಯ ಪಡೆದು, ದೇಶದ ದೂರದೃಷ್ಟಿಯ ಯೋಜನೆ ಹಾಕಿದೆ.
ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ಮಾಡಿದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಟೀಕಿಸಿದರು.
ಅವರು ಉಡುಪಿ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ಅಭ್ಯರ್ಥಿ ಕೇಂದ್ರಿತ ಚುನಾವಣೆ ಅಲ್ಲ. ಪಕ್ಷ ಕೇಂದ್ರಿತ ಚುನಾವಣೆ. ದೇಶದ ಪ್ರಗತಿಯ ಚುನಾವಣೆ.
ಕಳೆದ ನಾಲ್ಕು ತಲೆಮಾರು 60 ವರ್ಷ ಕಾಂಗ್ರೆಸ್ ದೇಶದಲ್ಲಿ ಆಡಳಿತ ನಡೆಸಿದೆ. ಈ ಬಾರಿ ಒಂದು ಅವಕಾಶ ಕೊಟ್ಟರೆ ಬದಲಾವಣೆ ತರುವುದಾಗಿ ಪ್ರಣಾಳಿಕೆ ಹೊರಡಿಸಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆ ಬಿಜೆಪಿಗಿದೆ. ಕಾಂಗ್ರೆಸ್ ಇದನ್ನು ತಿರಸ್ಕರಿಸಿದೆ. ವಿಪಕ್ಷದ ಮನಸ್ಥಿತಿ ತೋರಿಸುತ್ತದೆ.
ವಾಜಪೇಯಿ ಮತ್ತು ನರೇಂದ್ರ ಮೋದಿ ಕಾಲದಲ್ಲಿ ದೇಶ ಹಿಂದೆಂದೂ ಆಗದ ಅಭಿವೃದ್ಧಿ ಆಗಿದೆ. ಕಮಿಷನ್ ಹೊಡೆಯುವ ಉದ್ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಹವಣಿಸುತ್ತಿದೆ ಎಂದು ಉದಯಕುಮಾರ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕಿ ಶ್ರೀಮತಿ ಗೀತಾಂಜಲಿ ಸುವರ್ಣ (Smt Geethanjali Suvarna) ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

