• Home  
  • ಪ್ರಜ್ವಲ್ ರೇವಣ್ಣ  ಅತ್ಯಾಚಾರ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನ್ಯಾಯಾಲಯ ತಾಕೀತು (Prajwal Revanna Rape Case:  Court warns not to use nemes Of Deve Gauda & Kumara Swamy)
- ಅಪರಾಧ

ಪ್ರಜ್ವಲ್ ರೇವಣ್ಣ  ಅತ್ಯಾಚಾರ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನ್ಯಾಯಾಲಯ ತಾಕೀತು (Prajwal Revanna Rape Case:  Court warns not to use nemes Of Deve Gauda & Kumara Swamy)

Share: ಪ್ರಜ್ವಲ್ ರೇವಣ್ಣ  ಅತ್ಯಾಚಾರ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನ್ಯಾಯಾಲಯ ತಾಕೀತು (Bengaluru) ಬೆಂಗಳೂರು: ಪ್ರಪಂಚದಾಧ್ಯಂತ ಬಾರೀ ಕುಖ್ಯಾತಿ ಪಡೆದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡ (EX PM HD Deve Gauda) ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Ex CM Kumara Swamy) ಹೆಸರು ಬಳಸದಂತೆ ನ್ಯಾಯಾಲಯ ನಿರ್ಬಂಧ ಹೇರಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ […]

ಪ್ರಜ್ವಲ್ ರೇವಣ್ಣ  ಅತ್ಯಾಚಾರ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನ್ಯಾಯಾಲಯ ತಾಕೀತು

(Bengaluru) ಬೆಂಗಳೂರು: ಪ್ರಪಂಚದಾಧ್ಯಂತ ಬಾರೀ ಕುಖ್ಯಾತಿ ಪಡೆದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡ (EX PM HD Deve Gauda) ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Ex CM Kumara Swamy) ಹೆಸರು ಬಳಸದಂತೆ ನ್ಯಾಯಾಲಯ ನಿರ್ಬಂಧ ಹೇರಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ್ಯಾಯಾಲಯದ ಮೊರೆ ಹೋಗಿದ್ದರು.

 ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ತಮ್ಮ ಹೆಸರು ಬಳಸುವುದರಿಂದ ತಮ್ಮ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ನಮಗೆ ಸಮಾಜದಲ್ಲಿ ಉತ್ತಮ ಗೌರವ ಇದೆ. ಗೌರವಾನ್ವಿತ ಕುಟುಂಬದಿಂದ ಬಂದಿದ್ದೇವೆ. 70 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ಬಗ್ಗೆ ಯಾವುದೇ ಆರೋಪಗಳಿಲ್ಲ ಎಂದು ಕೋರ್ಟ್‌ನಲ್ಲಿ ಹೇಳಲಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಿದ್ದಂತೆ ರೇವಣ್ಣ ಮತ್ತು ಅವರ ಕುಟುಂಬದಿಂದ ದೇವೇಗೌಡ ಮತ್ತು ಕುಮಾರಸ್ವಾಮಿ ದೂರ ಉಳಿದಿದ್ದಾರೆ.  

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರು ಹೆಚ್.ಡಿ ದೇವೇಗೌಡ ಮತ್ತು ಎಚ್. ಡಿ ಕುಮಾರಸ್ವಾಮಿ ಹೆಸರು ಬಳಸಂತೆ ಎಲೆಕ್ಟ್ರಾನಿಕ್‌ ಮಾದ್ಯಮಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.

ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳ ವೈರಲ್‌ ಬಳಿಕ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಎಚ್‌ಡಿ ರೇವಣ್ಣ ಅವರನ್ನು ಎರಡು ದಿನಗಳ ಹಿಂದೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾದ ಮಹಿಳೆಯನ್ನು ಅಪಹರಿಸಿರುವ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಲಾಗಿದ್ದು, ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ ಕರೆ ತರುವಂತೆ ದೇಶದಲ್ಲಿ ಭಾರೀ ಕೂಗು ಕೇಳಿ ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.