ಉದ್ಯಮಿ ಪ್ರಮೋದ್ ಎನ್.ದೇವಾಡಿಗ ಬೆಂಗಳೂರಿನಲ್ಲಿ ನಿಧನ
(Padubidri) ಪಡುಬಿದ್ರಿ: ಇಲ್ಲಿನ ಬೇಂಗ್ರೆ ಸಂಕಲ್ಪ ನಿವಾಸದ ನಿವಾಸಿ ಪ್ರಮೋದ್ ನಾರಾಯಣ ದೇವಾಡಿಗ(೩೯) ಹೃದಯಾಘಾತದಿಂದ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು.
ಸಿ.ಎ. ಅಗಿದ್ದ ಅವರು ಕಳೆದ ೧೦ ವರ್ಷಗಳಿಂದ ಬೆಂಗಳೂರಿನ ಇಂದಿರಾ ನಗರದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದರು.
ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಿದ್ದ ಅವರಿಗೆ ತಾಯಿ, ತಂದೆ, ಪತ್ನಿ, ಪುತ್ರ, ಇಬ್ಬರು ಸಹೋದರಿಯರು ಇದ್ದಾರೆ. ಸೋಮವಾರ ಬೆಳಿಗ್ಗೆ ಪಡುಬಿದ್ರಿಯ ಅವರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಿತು.

