ಪಾಂಗಳದಲ್ಲಿ ಅಕಸ್ಮಿಕ ಬೆಂಕಿ, ಸಾರ್ವಜನಿಕರೊಂದಿಗೆ ಬೆಂಕಿ ನಂದಿಸಿದ ಕಾಪು ತಹಶೀಲ್ದಾರ್
ಪಾಂಗಾಳ; ಪಾಂಗಾಳದಲ್ಲಿ ಸುಮಾರು 15 ಎಕ್ರೆ ಬಯಲುಗದ್ದೆ ಮತ್ತು ತೋಟಕ್ಕೆ ಮಂಗಳವಾರ ಮದ್ಯಾಹ್ನ ಹಬ್ಬಿ ಕೊಂಡಿದ್ದು, ಘಟನಾ ಸ್ಥಳಕ್ಕೆ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್ (Kaup Thahashildar Dr prathibha R) ರವರು ಆಗಮಿಸಿದ್ದು, ಸಾರ್ವಜನಿಕರೊಂದಿಗೆ ತಾನೇ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ.
ಬಯಲು ಪ್ರದೇಶದ ಪಕ್ಕದಲ್ಲಿಯೇ 5 ವಾಸದ ಮನೆಗಳಿದ್ದು, ಅವುಗಳಿಗೆ ಬೆಂಕಿ ನೀರು ಹಾಯಿಸಿ ಬೆಂಕಿ ಹಬ್ಬದಂತೆ ತಡೆಯಲಾಯಿತು.
ಸಾರ್ವಜನಿಕರು, ಕಂದಾಯ ಇಲಾಖೆ ಮತ್ತು ಕೆಇ ಬಿ ಸಿಬ್ಬಂದಿಗಳು ಸತತವಾಗಿ 4 ಗಂಟೆಯ ಪ್ರಯತ್ನ ದಿಂದ ಬೆಂಕಿ ನಂದಿಸುವಲ್ಲಿ ಶ್ರಮ ವಹಿಸಿದ ಎಲ್ಲರಿಗೂ ತಹಸೀಲ್ದಾರ್ ಡಾ, ಪ್ರತಿಭಾರವರು ಅಭಿನಂದನೆ ಸಲ್ಲಿಸಿದ್ದಾರೆ.

